ಮನೆಗೆ ನುಗ್ಗಿ‌ ದುಷ್ಕರ್ಮಿಗಳ ಅಟ್ಟಹಾಸ: ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಕಾಂಗ್ರೆಸ್​ ಸದಸ್ಯನ ಕೈವಾಡ ಆರೋಪ

ಹಾಡಹಗಲೇ ಮನೆಗೆ ನುಗ್ಗಿ‌ದ ದುಷ್ಕರ್ಮಿಗಳಿಂದ ಟಿವಿ, ಫ್ರಿಡ್ಜ್ ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿರುವಂತಹ ಘಟನೆ ಗದಗದ ಪಂಚಾಕ್ಷರಿ ನಗರದಲ್ಲಿ ನಡೆದಿದೆ. ಪ್ರಶ್ನೆ ಮಾಡಿದ ಮಹಿಳೆ ಸೀರೆ ಎಳೆದು ಅಸಭ್ಯ ವರ್ತನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಐವರು ದುಷ್ಕರ್ಮಿಗಳ ಟೀಂ ಜೀಪ್​ಗೆ ಬೆಂಕಿ ಹಚ್ಚಿದ್ದಾರೆ. ಹುಯಿಲಗೋಳ ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ಆರೋಪ ಕೇಳಿಬಂದಿದೆ.

ಮನೆಗೆ ನುಗ್ಗಿ‌ ದುಷ್ಕರ್ಮಿಗಳ ಅಟ್ಟಹಾಸ: ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಕಾಂಗ್ರೆಸ್​ ಸದಸ್ಯನ ಕೈವಾಡ ಆರೋಪ
ಮನೆಗೆ ನುಗ್ಗಿ‌ ದುಷ್ಕರ್ಮಿಗಳ ಅಟ್ಟಹಾಸ: ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಕಾಂಗ್ರೆಸ್​ ಸದಸ್ಯನ ಕೈವಾಡ ಆರೋಪ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: May 11, 2024 | 8:03 PM

ಗದಗ, ಮೇ 11: ಪುಡಿ ರೌಡಿಗಳ ಅಟ್ಟಹಾಸಕ್ಕೆ ಆ ಕುಟುಂಬ ನಲುಗಿ ಹೋಗಿದೆ. ಹಾಡು ಹಗಲೇ ಮನೆಗೆ ನುಗ್ಗಿದ ಪುಡಿ ರೌಡಿಗಳ (rowdies) ಗ್ಯಾಂಗ್ ಮನೆಯಲ್ಲಿದ್ದ, ವಸ್ತುಗಳನ್ನು ಧ್ವಂಸ ಮಾಡಿದೆ. ಬೊಲೇರೋ ವಾಹನವನ್ನು ಸುಟ್ಟ ಅಟ್ಟಹಾಸ ಮೆರೆದಿದ್ದಾರೆ. ಅಷ್ಟೇ ಅಲ್ಲಾ ಮನೆಯಲ್ಲಿದ್ದ ಚಿನ್ನ, ನಗದು ದೋಚಿಕೊಂಡು, ಮಹಿಳೆಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಮಕ್ಕಳ ಜೊತೆಗೆ ಮಹಿಳೆ (woman) ಸ್ವಲ್ಪದರಲ್ಲಿ ಬಚಾವ್ ಆಗಿದ್ದಾರೆ. ಈ ಕೃತ್ಯದ ಹಿಂದೆ ಕಾಂಗ್ರೆಸ್​ ಸದಸ್ಯನ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ಘಟನೆಯಿಂದ ಇಡೀ ನಗರ ಬೆಚ್ಚಿಬಿದ್ದಿದೆ.

ಗದಗ ಪಂಚಾಕ್ಷರಿ ನಗರದ ನಿವಾಸಿಯಾದ ಪ್ರಕಾಶ ನಿಡಗುಂಡಿ ಅವರ ಮನೆಗೆ ಪುಡಿ ರೌಡಿಗಳು ನುಗ್ಗಿ ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ. ಪ್ರಕಾಶ ನಿಡಗುಂದಿ ಅವರ ಪತ್ನಿ ಕವಿತಾ, ಅವರ ಮಾವ ತಿಪ್ಪಣ್ಣ ಹಾಗೂ ಇಬ್ಬರು ಮಕ್ಕಳ ಜೊತೆಗೆ ಮನೆಯಲ್ಲಿದ್ದರು. ಹಾಡು ಹಗಲೇ ಐದು ಜನ ಗೂಂಡಾಗಳು ಏಕಾಏಕಿ ಮನೆಗೆ ಎಂಟ್ರಿ ನೀಡಿದ್ದಾರೆ. ಕೈಯಲ್ಲಿ ಚಾಕು, ಹಾಗೂ ಇಟ್ಟಿಗೆಯನ್ನು ಹಿಡಿದುಕೊಂಡು ಮನೆಗೆ ನುಗ್ಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೆಎ​ಎಸ್ ಅಧಿಕಾರಿಯ ಪತ್ನಿ ಆತ್ಮಹತ್ಯೆ: ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಮನೆಯ ಒಳಗಡೆ ಬಂದ್ ಕೂಡಲೇ ಮನೆಯಲ್ಲಿದ್ದ ಟಿವಿಯನ್ನು ಒಡೆದು ಹಾಕಿದ್ದಾರೆ. ಫ್ರೀಡ್ಜ್ ಒಡೆದು, ಪ್ರಕಾಶ್ ಎಲ್ಲಿದ್ದಾನೆ ಎಂದು ಅವಾಜ್ ಹಾಕಿದ್ದಾರೆ. ಪ್ರಕಾಶ್ ‌ಮನೆಯಲ್ಲಿ ಇಲ್ಲ ಎಂದ್ರು ಕವಿತಾಳ ಸೀರೆಯನ್ನು ಎಳೆದಾಡಿ, ಅವಳಿಗೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾರಂತೆ. ಮಕ್ಕಳ‌ ಜೊತೆಗೆ ರೂಂ ಬಾಗಿಲು ಹಾಕಿಕೊಂಡು ಕೂಗಾಡಿದ್ದಾಳೆ, ಅಕ್ಕಪಕ್ಕದ ಮನೆಯವರು ಬರ್ತಾಯಿದ್ದಂತೆ, ಐದು ಜನರ ಟೀಮ್‌ ಎಸ್ಕೇಪ್ ಆಗಿದೆ.‌ ಹೀಗಾಗಿ ನಮಗೆ ಜೀವ ಭಯ ಇದೆ ಸೂಕ್ತವಾದ ರಕ್ಷಣೆ ನೀಡ್ಬೇಕು ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ.

ಪ್ರಕಾಶ ನಿಡಗುಂದಿ ಮನೆಯಲ್ಲಿ ಸಿಕ್ಕಿಲ್ಲಾ, ಅವರ ಬೋಲೆರೋ ವಾಹನ ವಿಂಡ್ ಪ್ಯಾನ್ ಕಂಪನಿಗೆ ಬಾಡಿಗೆ ಕೊಟ್ಟಿದ್ದಾರೆ‌. ಅಲ್ಲಿ ಇರಬಹುದು ಅಂತಾ ಅಲ್ಲಿಗೆ ಹೋಗಿದ್ದಾರೆ, ಅಲ್ಲಿ ವಾಹನ ಚಾಲಕ ಮಾತ್ರ ಇರೋದನ್ನು, ಕಂಡು ಚಾಲಕನು ಜೀಪ್​​ನಿಂದ‌ ಇಳಿಸಿ, ಬೋಲೆರೋ ವಾಹನವನ್ನು ಸುಟ್ಟು ಹಾಕಿದ್ದಾರೆ. ಇನ್ನೂ ಪ್ರಕಾಶ್ ನಿಡಗುಂದಿ ಹಾಗೂ ಹುಯಿಲಗೋಳ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಮಿಲಿಂದ್ ಕಾಳೆ ನಡುವೆ ವ್ಯವಹಾರ ಇದೆಯಂತೆ. ಹೀಗಾಗಿ ಇಬ್ಬರ ನಡುವೆ ವೈಷಮ್ಯಯಿದೆ ಎಂದು ಪ್ರಕಾಶ ನಿಡಗುಂದಿ ಅವರ ಸಹೋದರ ಶಂಕರ ನಿಡಗುಂದಿ ಆರೋಪ‌ ಮಾಡ್ತಾಯಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಒಂದೂವರೆ ಎಕರೆ ಜಮೀನಿಗಾಗಿ ಚಿಕ್ಕಪ್ಪನನ್ನೇ ಕೊಂದ ಮಗ

ಮಿಲಿಂದ್ ಕಾಳೆ, ನಾಗರಾಜ್ ಕಾಳೆ ಅವರ ಕುಮ್ಮಕ್ಕಿನಿಂದ, ಐದು ಜನರ ಟೀಮ್ ಬಂದು ಕೃತ್ಯವನ್ನು ಎಸೆಗಿದ್ದಾರೆ. ಅವರ ವ್ಯವಹಾರ ಏನೇ ಇರಲಿ, ಮನೆಗೆ ಬಂದು ಗಲಾಟೆ ಮಾಡೋದು ಎಷ್ಟು ಸರಿ. ನಮ್ಮ ಇಡೀ ಕುಟುಂಬ ಭಯದಲ್ಲಿದೆ, ಮಕ್ಕಳು ಭಯಗೊಂಡು ಊಟ ಕೂಡ ಮಾಡ್ತಾಯಿಲ್ಲಾ, ಇಡೀ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಅಂತಾರೆ. ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,‌ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ, ಕೂಡಲೇ ಆರೋಪಿಗಳನ್ನು ಬಂಧಿಸಿ, ನಮಗೆ ರಕ್ಷಣೆ ‌ನೀಡಿ ಎಂದು ಒತ್ತಾಯ ಮಾಡಿದ್ದಾರೆ.

ಹಾಡು ಹಗಲೇ ಮನೆಗೆ ನುಗ್ಗಿ ಗಲಾಟೆ‌‌ ಮಾಡಿರೋದರಿಂದ‌ ಇಡೀ ಗದಗ ಬೆಟಗೇರಿ ಅವಳಿ ನಗರ ಬೆಚ್ಚಿ ಬಿದ್ದಿದೆ. ‌ಪೊಲೀಸರ ಭಯ ಇಲ್ಲದೆ ಪುಡಿ ರೌಡಿಗಳ ಅಟ್ಟಹಾಸ ಮೆರೆಯುತ್ತಿದ್ದಾರೆ. ಇನಾದರೂ ‌ಇಂತಹ ಪುಡಿ ರಾಜಕಾರಣಿಗಳು ಹಾಗೂ ಪುಡಿ ರೌಡಿಗಳ ಗ್ಯಾಂಗ್ ಬಿಸಿ ಮುಟ್ಟಿಸುವ ಕೆಲಸವನ್ನು ಪೊಲೀಸರು ಮಾಡ್ಬೇಕಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ