ಕಣ್ಮನ ಸೆಳೆಯುತ್ತಿದೆ ಮದಗದ ಕೆರೆಗೆ ಕೋಡಿ ಬಿದ್ದಿರೋ ರಮಣೀಯ ದೃಶ್ಯ
ಮದಗದ ಕೆರೆ

ಕಣ್ಮನ ಸೆಳೆಯುತ್ತಿದೆ ಮದಗದ ಕೆರೆಗೆ ಕೋಡಿ ಬಿದ್ದಿರೋ ರಮಣೀಯ ದೃಶ್ಯ

| Updated By: ವಿವೇಕ ಬಿರಾದಾರ

Updated on: Aug 12, 2022 | 8:07 PM

ಮಾಯದಂತಾ ಮಳೆ ಬಂದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮದಗದ ಕೆರೆ ತುಂಬಿದೆ. ಕೆರೆಗೆ ಕೋಡಿ ಬಿದ್ದಿರೋ ರಮಣೀಯ ದೃಶ್ಯ ಕಣ್ಮನ ಸೆಳೆಯುತ್ತಿದೆ.

ಚಿಕ್ಕಮಗಳೂರು: ಮಾಯದಂತಾ ಮಳೆ ಬಂದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮದಗದ ಕೆರೆ ತುಂಬಿದೆ. ಕೆರೆಗೆ ಕೋಡಿ ಬಿದ್ದಿರೋ ರಮಣೀಯ ದೃಶ್ಯ ಕಣ್ಮನ ಸೆಳೆಯುತ್ತಿದೆ. ಆದರೆ ಕೋಡಿ ಬಿದ್ದ ಪಕ್ಕದಲ್ಲಿ ಬಿರುಕು ಬಿಟ್ಟು ಅಪಾರ ಪ್ರಮಾಣದ ಮಣ್ಣು ಕೊಚ್ಚಿ ಹೋಗುತ್ತಿದೆ.ಮುಳ್ಳಯ್ಯನಗಿರಿ ಭಾಗದಲ್ಲಿ ಮಳೆ ಹೆಚ್ಚಾದರೆ ಹಲವು ಗ್ರಾಮಗಳು, ಸಾವಿರಾರು ಎಕರೆ ಹೊಲ ಗದ್ದೆಗಳು ಮುಳುಗಡೆಯಾಗುವ ಆತಂಕ ಸೃಷ್ಟಿಯಾಗಿದೆ. ಇಷ್ಟಾದರೂ ಬಿರುಕು ಬಿಟ್ಟ ಸ್ಥಳದಲ್ಲಿ ಜನರು ನಿಂತುಕೊಂಡು ಫೋಟೋ ಸೆಲ್ಫಿ ತೆಗೆದುಕೊಂಡು ಹುಚ್ಚಾಟವಾಡುತ್ತಿದ್ದಾರೆ. ಇಷ್ಟಾದರು ಪೊಲೀಸರು,‌ ಅಧಿಕಾರಿಗಳು ಈ ಕಡೆ ತಲೆಹಾಕಿಲ್ಲ.