ಬೆಂಗಳೂರಿನಲ್ಲಿ ಮಾತ್ರ ಇಂದಿನಿಂದ ಶುರುವಾಗಲ್ಲ ಜಾತಿ ಗಣತಿ!

Updated on: Sep 22, 2025 | 9:21 AM

ನಿಮ್ಮ ಧರ್ಮ ಯಾವುದು? ನಿಮ್ಮ ಜಾತಿ ಯಾವುದು? ಉಪಜಾತಿ ಇದೆಯಾ? ಆರ್ಥಿಕ ಮೂಲ ಏನು? ಕುಲಕಸಬು ಏನು? ಹೀಗೆ 60 ಪ್ರಶ್ನೆಗಳನ್ನು ಹೊತ್ತು ಗಣತಿದಾರರು ನಿಮ್ಮ ಬಳಿ ಬರಲಿದ್ದಾರೆ. ಹಲವರ ಆಕ್ರೋಶ, ಸ್ವಾಮೀಜಿಗಳ ಆಕ್ಷೇಪದ ನಡುವೆ ಇಂದಿನಿಂದ ರಾಜ್ಯಾದ್ಯಂತ ಜಾತಿಗಣತಿ ಆರಂಭವಾಗಲಿದೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ಇಂದಿನಿಂದ ಜಾತಿ ಗಣತಿ ಶುರುವಾಗುತ್ತಿಲ್ಲ.

ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕದ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಸಮೀಕ್ಷೆ ಹೆಸರಲ್ಲಿ ಇಂದಿನಿಂದ ಜಾತಿಗಣತಿ ಶುರುವಾಗುತ್ತಿದೆ. ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ ಸಿಬ್ಬಂದಿಯನ್ನು ಇದಕ್ಕಾಗಿ ನಿಯೋಜಿಸಲಾಗಿದೆ. ಇಂದಿನಿಂದ ಪ್ರತೀ ಮನೆಗಳಿಗೆ ಬರಲಿರುವ ಈ ಗಣತಿದಾರರು, ಮೊದಲು ನಿಮ್ಮ ಧರ್ಮ, ಜಾತಿ, ಉಪಜಾತಿಯ ಮಾಹಿತಿ ಪಡೆಯಲಿದ್ದಾರೆ. ಜತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಯ ಮಾಹಿತಿ ಪಡೆಯಲಿದ್ದಾರೆ. ಅವರವರ ಸ್ಥಿತಿಗತಿಗೆ ಅನುಗುಣವಾಗಿ ಸರ್ಕಾರದ ಯೋಜನೆಗಳನ್ನ ತಲುಪಿಸಲು ಈ ಗಣತಿ ಅನುಕೂಲ ಆಗಲಿದೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ಇಂದಿನಿಂದ ಜಾತಿ ಗಣತಿ ಶುರುವಾಗುವುದಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ