Karnataka Assembly Polls Results: ಕರ್ನಾಟಕದ ಮತದಾರ ಪ್ರಬುದ್ಧ, ವಿವೇಚನೆಯಿಂದ ಮತ ಚಲಾಯಿಸುತ್ತಾನೆ: ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

|

Updated on: May 13, 2023 | 1:35 PM

ಗೆದ್ದಿರುವ ಮತ್ತು ಗೆಲುವಿನ ಹಂತದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಖರ್ಗೆ, ಸೋತ ಅಭ್ಯರ್ಥಿಗಳು ಎದೆಗುಂದಬಾರದು ಎಂದರು.

ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರದರ್ಶನದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ (Mallikarjun Kharge) ಬೀಗುತ್ತಿದ್ದಾರೆ. ಆದರೆ ಗೆದ್ದ ಖುಷಿ ಮತ್ತು ಸಂಭ್ರಮದ ಭರದಲ್ಲಿ ಅವರು ಬಿಜೆಪಿ ನಾಯಕರ (BJP leaders ) ವಿರುದ್ಧ ಟೀಕಾಪ್ರಹಾರವೇನೂ ಮಾಡಲಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದರು. ಕರ್ನಾಟಕದ ಮತದಾರ (voter) ಚುನಾವಣೆಗಳಲ್ಲಿ ಪ್ರಬುದ್ಧತೆ ಪ್ರದರ್ಶಿಸುತ್ತಾನೆ ಮತ್ತು ವಿವೇಚನೆಯಿಂದ ಮತ ಚಲಾಯಿಸುತ್ತೇನೆ ಎಂದು ಅವರು ಹೇಳಿದರು. ಗೆದ್ದಿರುವ ಮತ್ತು ಗೆಲುವಿನ ಹಂತದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಖರ್ಗೆ ಅವರು, ಸೋತ ಅಭ್ಯರ್ಥಿಗಳು ಎದೆಗುಂದಬಾರದು ಎಂದರು. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ, ಸೋತವರು ತಮ್ಮ ಕ್ಷೇತ್ರಗಳಲ್ಲಿ ಇನ್ನೂ ಉತ್ತಮ ಕೆಲಸ ಮಾಡಿ ಮುಂದಿನ ಬಾರಿ ಗೆಲ್ಲುವ ಪ್ರಯತ್ನ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ