ಕಾರ್ತಿಕ್​ ಮಹೇಶ್​-ಸಂಗೀತಾ ಶೃಂಗೇರಿ ಒಟ್ಟಾಗಿ ತನಿಷಾ ಕುಪ್ಪಂಡ ವಿರುದ್ಧ ತಿರುಗಿ ಬಿದ್ದಿದ್ದು ಯಾಕೆ?

Updated on: Jan 16, 2024 | 3:57 PM

‘ತನಿಷಾ ಕುಪ್ಪಂಡ ಸ್ಟೋರಿ ಫ್ಲಾಪ್​ ಆಗುತ್ತೆ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ. ಅದೇ ರೀತಿ, ಕಾರ್ತಿಕ್​ ಮಹೇಶ್​ ಕೂಡ ತನಿಷಾ ವಿರುದ್ಧ ಮಾತನಾಡಿದ್ದಾರೆ. ‘ಆ ಸ್ನೇಹ ಫೇಕ್​ ಅಂತ ನನಗೆ ಈಗ ಅನಿಸಿತು. ಬೆಂಕಿಯೇ ಇರಬಹುದು. ಆದರೆ ಸುನಾಮಿ ಬಂದರೆ ಯಾವ ಬೆಂಕಿಯೂ ನಿಲ್ಲಲ್ಲ’ ಎಂದು ಕಾರ್ತಿಕ್​ ಹೇಳಿದ್ದಾರೆ.

ಇನ್ನೇನು ಕೆಲವೇ ವಾರಗಳಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ರಿಯಾಲಿಟಿ ಶೋ ಮುಕ್ತಾಯ ಆಗಲಿದೆ. ಫಿನಾಲೆಗೆ ದಿನಗಣನೆ ಆರಂಭ ಆಗಿದೆ. ಕೊನೇ ಹಂತದಲ್ಲಿ ಕೂಡ ಸ್ಪರ್ಧಿಗಳ ನಡುವಿನ ವೈಮನಸ್ಸು ಸರಿ ಆಗಿಲ್ಲ. ‘ಈ ಮನೆಯಲ್ಲಿ ಯಾವ ಒಬ್ಬ ಸದಸ್ಯರ ಕಥೆ ಫ್ಲಾಪ್​ ಆಗುವುದು ಅಂತ ಹೇಳಬೇಕು’ ಎಂದು ಬಿಗ್​ ಬಾಸ್​ ಆದೇಶಿಸಿದರು. ಅದಕ್ಕೆ ಒಬ್ಬೊಬ್ಬರಿಂದ ಒಂದೊಂದು ಉತ್ತರ ಬಂದಿದೆ. ‘ಪ್ರತಾಪ್​ ಕಥೆ ಫ್ಲಾಪ್​ ಆಗುತ್ತೆ ಎನಿಸುತ್ತದೆ. ತಾನು ತುಂಬ ಪಾಪ ಎಂಬ ರೀತಿಯಲ್ಲಿ ಮಾತಾಡಿ ಇಲ್ಲಿಯತನಕ ಬಂದಿದ್ದಾನೆ’ ಎಂದು ವಿನಯ್​ ಗೌಡ ಹೇಳಿದ್ದಾರೆ. ‘ತನಿಷಾ ಕುಪ್ಪಂಡ (Tanisha Kuppanda) ಸ್ಟೋರಿ ಫ್ಲಾಪ್​ ಆಗುತ್ತೆ. ಈ ನಡುವೆ ಅವರು ತಮ್ಮ ವ್ಯಕ್ತಿತ್ವಕ್ಕಿಂತ ತುಂಬ ವಿಚಿತ್ರವಾಗಿ ಬದಲಾಗಿದ್ದಾರೆ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ. ಅದೇ ರೀತಿ, ಕಾರ್ತಿಕ್​ ಮಹೇಶ್​ (Karthik Mahesh) ಕೂಡ ತನಿಷಾ ವಿರುದ್ಧ ಮಾತನಾಡಿದ್ದಾರೆ. ‘ಆ ಸ್ನೇಹ ಫೇಕ್​ ಅಂತ ನನಗೆ ಈಗ ಅನಿಸಿತು. ಬೆಂಕಿಯೇ ಇರಬಹುದು. ಆದರೆ ಸುನಾಮಿ ಬಂದರೆ ಯಾವ ಬೆಂಕಿಯೂ ನಿಲ್ಲಲ್ಲ’ ಎಂದು ಕಾರ್ತಿಕ್​ ಹೇಳಿದ್ದಾರೆ. ಈ ಸಂಚಿಕೆ ಜನವರಿ 16ರಂದು ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ಹಾಗೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More