‘ಸಂಗೀತಾ ಕಳಪೆ, ವಿನಯ್​ ಉತ್ತಮ’: ಮುಖಕ್ಕೆ ಹೊಡೆದಂತೆ ಹೇಳಿದ ಕಾರ್ತಿಕ್​ ಮಹೇಶ್​

Updated on: Dec 22, 2023 | 4:15 PM

ಸಂಗೀತಾ ಶೃಂಗೇರಿ ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ವಿನಯ್​ ಗೌಡ ಉತ್ತಮ ಎನಿಸಿಕೊಂಡಿದ್ದಾರೆ. ಈ ಅಭಿಪ್ರಾಯ ತಿಳಿಸುವಾಗ ಕಾರ್ತಿಕ್​ ಮಹೇಶ್​ ಯಾವುದೇ ಮುಲಾಜು ನೋಡಿಲ್ಲ. ನೇರವಾಗಿ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಈ ಮೊದಲು ಸ್ನೇಹಿತರಾಗಿದ್ದ ಕಾರ್ತಿಕ್​ ಮಹೇಶ್​ ಮತ್ತು ಸಂಗೀತಾ ಶೃಂಗೇರಿ ನಡುವೆ ಈಗ ಮನಸ್ತಾಪ ಹೆಚ್ಚಾಗಿದೆ.

ಬಿಗ್ ಬಾಸ್​ ಮನೆಯಲ್ಲಿ ಪ್ರತಿ ವಾರ ಯಾರು ಕಳೆಪೆಯಾಗಿ ಆಡಿದ್ದಾರೆ? ಯಾರು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂಬುದು ತೀರ್ಮಾನ ಆಗುತ್ತದೆ. ಮನೆ ಮಂದಿಯ ಅಭಿಪ್ರಾಯದ ಆಧಾರದಲ್ಲಿ ಒಬ್ಬರಿಗೆ ಕಳಪೆ ಮತ್ತು ಇನ್ನೊಬ್ಬರಿಗೆ ಉತ್ತಮ ಎಂಬ ಪಟ್ಟ ಸಿಗುತ್ತದೆ. ಈ ವಾರ ಸಂಗೀತಾ ಶೃಂಗೇರಿ (Sangeetha Sringeri) ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ವಿನಯ್​ ಗೌಡ ಅವರು ಉತ್ತಮ ಎನಿಸಿಕೊಂಡಿದ್ದಾರೆ. ತಮ್ಮ ಅಭಿಪ್ರಾಯ ತಿಳಿಸುವಾಗ ಕಾರ್ತಿಕ್​ ಮಹೇಶ್​ ಅವರು ಯಾವುದೇ ಮುಲಾಜು ನೋಡಿಲ್ಲ. ನೇರವಾಗಿ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಈ ಮೊದಲು ಸ್ನೇಹಿತರಾಗಿದ್ದ ಕಾರ್ತಿಕ್​ ಮಹೇಶ್​ (Karthik Mahesh) ಮತ್ತು ಸಂಗೀತಾ ಶೃಂಗೇರಿ ನಡುವೆ ಈಗ ಮನಸ್ತಾಪ ಹೆಚ್ಚಾಗಿದೆ. ಈ ಸಂಚಿಕೆ ಡಿಸೆಂಬರ್​ 22ರ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ದಲ್ಲಿ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಬಿಗ್ ಬಾಸ್ (Bigg Boss Kannada) ಕಾರ್ಯಕ್ರಮವನ್ನು ಉಚಿತವಾಗಿ ವೀಕ್ಷಿಸಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More