‘ರಕ್ತ ಹರಿಸಿದ ನಟ ವಿಜಯ್ ಬಂಧಿಸಬೇಕು’: ಕರೂರ್‌ನಲ್ಲಿ ಪೋಸ್ಟರ್ ಹಚ್ಚಿ ವಿದ್ಯಾರ್ಥಿಗಳ ಆಕ್ರೋಶ
ತಮಿಳುನಾಡಿನ ಕರೂರ್‌ನಲ್ಲಿ ನಟ ವಿಜಯ್ ಅವರ ರ‍್ಯಾಲಿ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ 41 ಮಂದಿ ಸಾವನ್ನಪ್ಪಿದ ನಂತರ ನಟ ವಿಜಯ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ತಮಿಳುನಾಡು ಸ್ಟೂಡೆಂಟ್ಸ್ ಯೂನಿಯನ್ ಕರೂರ್ ನಗರದಾದ್ಯಂತ ಪೋಸ್ಟರ್‌ಗಳನ್ನು ಅಂಟಿಸಿ, ವಿಜಯ್ ಬಂಧನಕ್ಕೆ ಆಗ್ರಹಿಸಿದೆ. ವಿಡಿಯೋ ಇಲ್ಲಿದೆ.
ಚೆನ್ನೈ, ಸೆಪ್ಟೆಂಬರ್ 29: ತಮಿಳುನಾಡಿನ ಕರೂರ್‌ನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ನಟ ವಿಜಯ್ ರ್ಯಾಲಿ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ಸುಮಾತು 41 ಜನ ಮೃತಪಟ್ಟ ವಿಚಾರವಾಗಿ ಇದೀಗ ವಿಜಯ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ದುರಂತಕ್ಕೆ ವಿಜಯ್ ಅವರೇ ನೇರ ಹೊಣೆಗಾರರು ತಮಿಳುನಾಡು ಸ್ಟೂಡೆಂಟ್ಸ್ ಯೂನಿಯನ್ ಆರೋಪಿಸಿದ್ದು, ‘ರಕ್ತ ಹರಿಸಿದ ನಟ ವಿಜಯ್ ಬಂಧಿಸಬೇಕು’ ಎಂದು ಕರೂರ್‌ನಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದೆ. ಅಲ್ಲದೆ, ವಿಜಯ್ ಬಂಧನಕ್ಕೆ ಆಗ್ರಹಿಸಿ ಅಭಿಯಾನ ನಡೆಸುತ್ತಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Sep 29, 2025 12:42 PM
