AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Onion Price: ಈರುಳ್ಳಿಗೆ ಬೆಲೆ ಗಣನೀಯ ಕುಸಿತ, ಕ್ವಿಂಟಲ್​ಗೆ 1500 ರೂ.ಗೆ ಇಳಿಕೆ

Onion Price: ಈರುಳ್ಳಿಗೆ ಬೆಲೆ ಗಣನೀಯ ಕುಸಿತ, ಕ್ವಿಂಟಲ್​ಗೆ 1500 ರೂ.ಗೆ ಇಳಿಕೆ

ವಿನಾಯಕ ಬಡಿಗೇರ್​
| Updated By: Ganapathi Sharma|

Updated on: Sep 29, 2025 | 1:06 PM

Share

ಈರುಳ್ಳಿ ಬೆಲೆ ಕುಸಿತ: ಏಕಾಏಕಿ ಈರುಳ್ಳಿ ಬೆಳೆ ಕ್ವಿಂಟಲ್​ಗೆ 1500 ರೂ.ಗೆ ಕುಸಿದಿದ್ದು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಎರಡು ಜಿಲ್ಲೆಗಳಲ್ಲಿ ಒಟ್ಟು 42,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆದಿದ್ದು, ಇದೀಗ ಕಟಾವಾಗುವ ಸಮಯದಲ್ಲಿ ಬೆಲೆ ಕುಸಿದು ಸಂಕಷ್ಟಕ್ಕೀಡಾಗಿದ್ದಾರೆ. ಬೆಂಬಲ ಬೆಲೆಗೆ ಆಗ್ರಹ ವ್ಯಕ್ತವಾಗಿದೆ.

ಬಳ್ಳಾರಿ, ಸೆಪ್ಟೆಂಬರ್ 29: ಈರುಳ್ಳಿ ಬೆಲೆ ದಿಢೀರ್ ಕುಸಿತವಾಗಿದ್ದು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಸದ್ಯ ಒಂದು ಕ್ವಿಂಟಲ್ ಈರುಳ್ಳಿ ಬೆಳೆಗೆ ಕೇವಲ 1500 ರೂ. ಸಿಗುತ್ತಿದೆ. ಉಭಯ ಜಿಲ್ಲೆಗಳಲ್ಲಿ ಸೇರಿ ಒಟ್ಟು 42,000 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆದಿರುವ ರೈತರು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದರು. ಇದೀಗ ಆಘಾತ ಎದುರಾಗಿದೆ. ಒಂದು ಎಕರೆಗೆ 50,000 ರೂ.ನಿಂದ ಒಂದು ಲಕ್ಷದ ರೂ. ವರಗೆ ಖರ್ಚು ಮಾಡಿರುವ ರೈತರು ಈಗಷ್ಟೇ ಕಟಾವು ಮಾಡಿ ಈರುಳ್ಳಿ ಮಾರಾಟ ಮಾಡಬೇಕು‌ ಎಂದುಕೊಂಡಿದ್ದರು. ಅಷ್ಟರಲ್ಲಿ ಬೆಲೆ ಕುಸಿತವಾಗಿದೆ. ಚೀಲ ಒಂದರ ಈರುಳ್ಳಿಯನ್ನು ದಲ್ಲಾಳಿಗಳು ಕೇವಲ 50 ರೂ.ಗೆ ಕೇಳುತ್ತಿದ್ದಾರೆ ಎಂದು ರೈತರು ಅಳಲುತೋಡಿಕೊಂಡಿದ್ದಾರೆ. ಖರೀದಿ ಕೇಂದ್ರವಿಲ್ಲದೆ, ಬೆಂಬಲ ಬೆಲೆ ಇಲ್ಲದೆ ಅನ್ನದಾತರ ಬದುಕು ಬೀದಿಗೆ ಬಂದಿದೆ. ಸರ್ಕಾರ ಈ ಕೂಡಲೆ ಈರುಳ್ಳಿ ಬೆಳೆಗಾರರ ಸಂಕಷ್ಟಕ್ಕೆ ಧಾವಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ