ಕಾರವಾರದಲ್ಲಿ ಮಳೆಯ ಅಬ್ಬರ: ಓಡಾಡುತ್ತಿದ್ದ ಜನರ ಮೇಲೆ ಬಿದ್ದು ಧರೆಗೆ ಅಪ್ಪಳಿಸಿದ ಮರ

| Updated By: ಆಯೇಷಾ ಬಾನು

Updated on: Jul 17, 2022 | 5:44 PM

ಕಾರವಾರದ ಸಿಟಿ ಬಸ್​ ನಿಲ್ದಾಣದ ಬಳಿ ಮರ ಧರೆಗೆ ಉಳಿದಿದೆ. ಮರದಡಿ ಕೆಲ ಪ್ರಯಾಣಿಕರು ಸಿಕ್ಕಿ ಹಾಕಿಕೊಂಡಿದ್ದು ಕೆಲ ವಾಹನಗಳು ಜಖಂ ಆಗಿವೆ.

ರಾಜ್ಯದಲ್ಲಿ ಮಳೆ ಎಫೆಕ್ಟ್​ ತಣ್ಣಗಾಗೋ ಲಕ್ಷಣಗಳೇ ಕಾಣ್ತಿಲ್ಲ. ಧೋ ಅಂತ ಸುರಿದ ಮಳೆಯಿಂದಾಗಿ ಅವಾಂತರಗಳ ಮೇಲೆ ಅವಾಂತರಗಳೇ ಆಗ್ತಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಂತೂ ಶರಾವತಿ, ಅಘನಾಶಿನಿ ಅಬ್ಬರ ಜೋರಾಗಿದ್ದು, ಜನರ ಬದುಕೇ ಬೀದಿಗೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವರ್ಷಧಾರೆಯ ಅಬ್ಬರಕ್ಕೆ ಶರಾವತಿ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹದಿಂದ ಕುಮಟಾದ ಹಿರೇಕಟ್ಟು ಗ್ರಾಮಕ್ಕೆ ಹಳ್ಳದ ನೀರು ನುಗ್ಗಿದೆ. ಇದ್ರಿಂದಾಗಿ 50ಕ್ಕೂ ಮನೆಗಳಿಗೆ ಜಲದಿಗ್ಬಂಧನ ಬಿದ್ದಿದೆ. ಜನರಂತೂ ಸೂರಿಲ್ಲದೇ ಪರದಾಡುತ್ತಿದ್ದಾರೆ. ಆಸರೆಯಾಗಿದ್ದ ಆಶ್ರಯ ಮನೆಗಳು ನೀರಲ್ಲಿ ಮುಳುಗಿದ್ರಿಂದ ಸಂತ್ರಸ್ತರನ್ನ ಕಾಳಜಿ ಕೇಂದ್ರಕ್ಕೆ ಶಿಫ್ಟ್​ ಮಾಡಲಾಗಿದೆ. ಕಾರವಾರದ ಸಿಟಿ ಬಸ್​ ನಿಲ್ದಾಣದ ಬಳಿ ಮರ ಧರೆಗೆ ಉಳಿದಿದೆ. ಮರದಡಿ ಕೆಲ ಪ್ರಯಾಣಿಕರು ಸಿಕ್ಕಿ ಹಾಕಿಕೊಂಡಿದ್ದು ಕೆಲ ವಾಹನಗಳು ಜಖಂ ಆಗಿವೆ.