ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ; ಭದೇರ್ವಾದಲ್ಲಿ ಜನರ ದಂಡು

Updated on: Apr 29, 2025 | 10:41 PM

ಕಾಶ್ಮೀರದಲ್ಲಿ ರಕ್ತ ಹರಿದರೂ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುತ್ತಿರುವ ಪ್ರವಾಸಿಗರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ದೋಡಾ ಜಿಲ್ಲೆಯ ಭದೇರ್ವಾ ಪ್ರದೇಶದ ಸೌಂದರ್ಯವನ್ನು ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಲೇ ಇದ್ದಾರೆ. "ಕಾಶ್ಮೀರ ನಮ್ಮದಾಗಿತ್ತು, ಮುಂದೆಯೂ ನಮ್ಮದಾಗಿರುತ್ತದೆ" ಎನ್ನುತ್ತಾ ಪ್ರವಾಸಿಗರು ಭದೇರ್ವಾದಲ್ಲಿ ಬೋಲೋ ಭಾರತ್ ಮಾತಾಕಿ ಎಂದು ಜೈಕಾರ ಹಾಕುತ್ತಾ, ಭಾರತದ ಧ್ವಜವನ್ನು ಬೀಸುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ಶ್ರೀನಗರ, ಏಪ್ರಿಲ್ 29: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ (Pahalgam attack) ಉಗ್ರರ ದಾಳಿ ನಂತರ ಕಾಶ್ಮೀರದ ಪ್ರವಾಸೋದ್ಯಮ ಚೇತರಿಸಿಕೊಳ್ಳಲು ಇನ್ನೊಂದು ವರ್ಷವಾದರೂ ಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಕಾಶ್ಮೀರದಲ್ಲಿ ರಕ್ತ ಹರಿದರೂ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುತ್ತಿರುವ ಪ್ರವಾಸಿಗರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ದೋಡಾ ಜಿಲ್ಲೆಯ ಭದೇರ್ವಾ ಪ್ರದೇಶದ ಸೌಂದರ್ಯವನ್ನು ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಲೇ ಇದ್ದಾರೆ. “ಕಾಶ್ಮೀರ ನಮ್ಮದಾಗಿತ್ತು, ಮುಂದೆಯೂ ನಮ್ಮದಾಗಿರುತ್ತದೆ” ಎನ್ನುತ್ತಾ ಪ್ರವಾಸಿಗರು ಭದೇರ್ವಾದಲ್ಲಿ ಬೋಲೋ ಭಾರತ್ ಮಾತಾಕಿ ಎಂದು ಜೈಕಾರ ಹಾಕುತ್ತಾ, ಭಾರತದ ಧ್ವಜವನ್ನು ಬೀಸುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ಕೆಲವು ದಿನಗಳ ನಂತರ, ಪ್ರವಾಸಿಗರು ಭದೇರ್ವಾಗೆ ದೃಶ್ಯ ಸೌಂದರ್ಯವನ್ನು ವೀಕ್ಷಿಸಲು ಆಗಮಿಸುತ್ತಲೇ ಇದ್ದಾರೆ. ಪ್ರವಾಸಿಗರು ದಾಳಿಯನ್ನು ಖಂಡಿಸಿದ್ದಾರೆ, ಭಾರತದ ಕಾಶ್ಮೀರಕ್ಕೆ ಭೇಟಿ ನೀಡುವುದನ್ನು ತಡೆಯಲು ಯಾವುದೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. “ಕೆಲವು ದಿನಗಳ ಹಿಂದೆ ಪಹಲ್ಗಾಮ್‌ನಲ್ಲಿ ನಡೆದ ದಾಳಿ, ಪಾಕಿಸ್ತಾನ ಮಾಡಿದ ಕೃತ್ಯ, ಇದು ತುಂಬಾ ನಾಚಿಕೆಗೇಡಿನ ಸಂಗತಿ. ನಮ್ಮ ಸರ್ಕಾರ ಅವರಿಗೆ ಸೂಕ್ತ ಉತ್ತರ ನೀಡುತ್ತದೆ. ಪ್ರವಾಸಿಗರ ಮೇಲೆ ದಾಳಿ ಮಾಡುವ ಹಿಂದಿನ ಉದ್ದೇಶ ಇಲ್ಲಿನ ಪ್ರವಾಸೋದ್ಯಮವನ್ನು ಕಡಿಮೆ ಮಾಡುವುದು. ಆದರೆ ಅದು ಸಾಧ್ಯವಿಲ್ಲ. ಕಾಶ್ಮೀರ ನಮ್ಮದಾಗಿತ್ತು, ನಮ್ಮದು ಮತ್ತು ನಮ್ಮದೇ ಆಗಿರುತ್ತದೆ. ಈ ತಾಯ್ನಾಡು ನಮ್ಮದು; ನಾವು ಇಲ್ಲಿಗೆ ಬಂದಿದ್ದೇವೆ ಮತ್ತು ಮುಂದೆಯೂ ಬರುತ್ತೇವೆ. ನಾವು ಇಲ್ಲಿ ಸುರಕ್ಷಿತ ಭಾವನೆ ಹೊಂದಿದ್ದೇವೆ. ಭಯಪಡಲು ಏನೂ ಇಲ್ಲ. ಭಾರತೀಯ ಸೇನೆ ಇಲ್ಲಿದೆ. ಇಲ್ಲಿನ ಜನರು ತುಂಬಾ ಒಳ್ಳೆಯವರು, ಇಲ್ಲಿ ಯಾವುದೇ ಸಮಸ್ಯೆ ಇಲ್ಲ” ಎಂದು ANI ಜೊತೆ ಮಾತನಾಡಿದ ಪ್ರವಾಸಿಯೊಬ್ಬರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us