‘ರಮ್ಯಾ-ರಕ್ಷಿತಾ ನಡುವೆ ಆ ವಿಚಾರಕ್ಕೆ ಕಿರಿಕ್​ ಆಗಿತ್ತು’; ಶೂಟಿಂಗ್​ ಸಮಯದ ವಿವರ ತೆರೆದಿಟ್ಟ ಕವಿತಾ ಲಂಕೇಶ್​

| Updated By: ಮದನ್​ ಕುಮಾರ್​

Updated on: Aug 29, 2021 | 2:06 PM

ಕವಿತಾ ಲಂಕೇಶ್​ ನಿರ್ದೇಶನ ಮಾಡಿದ ‘ತನನಂ ತನನಂ’ ಸಿನಿಮಾದಲ್ಲಿ ರಮ್ಯಾ ಮತ್ತು ರಕ್ಷಿತಾ ಒಟ್ಟಿಗೆ ನಟಿಸಿದ್ದರು. ಆ ಚಿತ್ರದ ಶೂಟಿಂಗ್​ನಲ್ಲಿ ನಡೆದ ಪ್ರಸಂಗವನ್ನು ಕವಿತಾ ಈಗ ನೆನಪಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ನ ಟಾಪ್​ ನಟಿಯರಾಗಿದ್ದ ರಮ್ಯಾ ಮತ್ತು ರಕ್ಷಿತಾ ನಡುವೆ ಭಾರಿ ಪೈಪೋಟಿ ಇತ್ತು. ಸ್ಟಾರ್​ ನಟರ ಸಿನಿಮಾಗಳಿಗೆ ಅವರು ಬಹುಬೇಡಿಕೆಯ ನಟಿಯರಾಗಿದ್ದರು. ಇಬ್ಬರ ಬಗ್ಗೆ ಹಲವಾರು ಗರಂ ಗರಂ ಸುದ್ದಿಗಳು ಆಗಾಗ ಕೇಳಿಬರುತ್ತಿದ್ದವು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎಂದೆಲ್ಲ ಹೇಳಲಾಗುತ್ತಿತ್ತು. ಆದರೆ ಕವಿತಾ ಲಂಕೇಶ್​ ನಿರ್ದೇಶನ ಮಾಡಿದ ‘ತನನಂ ತನನಂ’ ಸಿನಿಮಾದಲ್ಲಿ ರಮ್ಯಾ ಮತ್ತು ರಕ್ಷಿತಾ ಒಟ್ಟಿಗೆ ನಟಿಸಿದಾಗ ಎಲ್ಲರಿಗೂ ಅಚ್ಚರಿ ಆಗಿತ್ತು. ಆ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ವಾತಾವರಣ ಹೇಗಿತ್ತು ಎಂಬ ಬಗ್ಗೆ ಕವಿತಾ ಲಂಕೇಶ್​ ಅವರು ಮಾತನಾಡಿದ್ದಾರೆ.

‘ರಮ್ಯಾ ನಟಿಸುತ್ತಾರೆ ಎಂದು ರಕ್ಷಿತಾಗೆ ನಾನು ಹೇಳಿರಲಿಲ್ಲ. ರಕ್ಷಿತಾ ನಟಿಸುತ್ತಾರೆ ಎಂದು ರಮ್ಯಾಗೆ ಹೇಳಿರಲಿಲ್ಲ. ಯಾಕೆಂದರೆ ನನಗೆ ಇನ್ನೂ ಕನ್ಫರ್ಮ್​ ಆಗಿರಲಿಲ್ಲ. ಸ್ಕ್ರೀನ್ ಸ್ಪೇಸ್​ ವಿಚಾರದಲ್ಲಿ ಇಬ್ಬರ ನಡುವೆ ಸ್ವಲ್ಪ ಕಿರಿಕ್​ ಆಯಿತು. ಆ ವಯಸ್ಸಿನಲ್ಲಿ ಸಣ್ಣ-ಪುಟ್ಟ ಮನಸ್ತಾಪ ಸಹಜ. ಈಗ ಕೇಳಿದರೆ ಅವರಿಗೂ ತಮಾಷೆ ಎನಿಸಬಹುದು. ಸೆಟ್​ನಲ್ಲಿ ಇಬ್ಬರ ನಡುವೆ ಸಣ್ಣ-ಪುಟ್ಟ ಜಗಳ ಇರುತ್ತಿತ್ತು. ಒಮ್ಮೆ ಎಲ್ಲವೂ ರೆಡಿಯಾಗಿತ್ತು. ಆದರೆ ‘ಮೊದಲು ನಾನೇಕೆ ಬರಬೇಕು? ಬೇಕಿದ್ದರೆ ಅವಳೇ ಬಂದು ಕಾಯಲಿ’ ಅಂತ ಅವರಿಬ್ಬರು ಪರಸ್ಪರ ಜಿದ್ದು ಸಾಧಿಸಿದ್ದರು’ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಕವಿತಾ ಲಂಕೇಶ್​.

ಇದನ್ನೂ ಓದಿ:

‘ನೀಚವಾಗಿ ಬೈಯ್ದು, ರಾಜಕೀಯ ಮಾಡುವವರ ಲೆವೆಲ್​ಗೆ ರಮ್ಯಾ ಇಳಿಯಲ್ಲ’: ಕವಿತಾ ಲಂಕೇಶ್​

‘ಮಹಿಳೆ ಧರಿಸುವ ಉಡುಪುಗಳು ರೇಪ್​ಗೆ ಕಾರಣ ಅಲ್ಲ’: ಗ್ಯಾಂಗ್​ ರೇಪ್​ ಪ್ರಕರಣಕ್ಕೆ ಕವಿತಾ ಲಂಕೇಶ್​ ಪ್ರತಿಕ್ರಿಯೆ