ರಾತ್ರೋರಾತ್ರಿ ಬೆಂಗಳೂರಿಗೆ ಬಂದ ಕೆಸಿ ವೇಣುಗೋಪಾಲ್; ಮಲ್ಲಿಕಾರ್ಜುನ ಖರ್ಗೆ ಮತ್ತು ಶಿವಕುಮಾರ್ ಜೊತೆ ಸಭೆ ನಡೆಸಿದ್ದು ಯಾಕೆ?
ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ ಅಂತ ಪತ್ರಕರ್ತರು ಅವರ ಗಮನ ಸೆಳೆದಾಗ ಶಿವಕುಮಾರ್, ಪ್ರತಿಭಟನೆ ಮಾಡಲಿ, ಅವರು ಪ್ರತಿಭಟನೆ ಮಾಡಿದಾಗಲೇ ಜನರಿಗೆ ವಿಷಯ ಗೊತ್ತಾಗೋದು, ಎಲ್ಲಾದಕ್ಕೂ ಉತ್ತರ ಕೊಡ್ತೀನಿ; ಹೈವೋಲ್ಟೇಜ್, ಲೋ ವೋಲ್ಟೇಜ್, ಲೂಟಿ ಮತ್ತು ನಕಲಿ ಎಲ್ಲ ವಿಷಯಗಳಿಗೆ ಉತ್ತರ ಕೊಡ್ತೀನಿ ಅಂತ ಶಿವಕುಮಾರ್ ಹೇಳಿದರು.
ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದಲ್ಲಿ ಎಲ್ಲವೂ ಸರಿಯಾಗಿದೆ ತಾನೇ? ಯಾಕೆ ಇದನ್ನು ಕೇಳಬೇಕಾಗಿದೆಯೆಂದರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ (KC Venugopal) ರವಿವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಸದ್ಯ ಬೆಂಗಳೂರಲ್ಲೇ ಇರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರೊಂದಿಗೆ ಖರ್ಗೆ ನಿವಾಸದಲ್ಲಿ ಇಂದು ಬೆಳಗ್ಗೆ ಸಭೆಯನ್ನೂ ನಡೆಸಿದ್ದಾರೆ. ಸಭೆಯ ಉದ್ದೇಶ ಏನು ಅನ್ನೋದು ಗೊತ್ತಾಗಿಲ್ಲ. ಮೀಟಿಂಗ್ ಬಳಿಕ ಹೊರಬಂದ ಶಿವಕುಮಾರ್ ಸಹ ಅದರ ಮೇಲೆ ಬೆಳಕು ಚೆಲ್ಲಲಿಲ್ಲ. ಪ್ರತಿಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ತಕ್ಕ ಸಮಯದಲ್ಲಿ ಉತ್ತರ ಕೊಡುವುದಾಗಿ ಅವರು ಹೇಳುತ್ತಾರೆ. ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ ಅಂತ ಪತ್ರಕರ್ತರು ಅವರ ಗಮನ ಸೆಳೆದಾಗ ಶಿವಕುಮಾರ್, ಪ್ರತಿಭಟನೆ ಮಾಡಲಿ, ಅವರು ಪ್ರತಿಭಟನೆ ಮಾಡಿದಾಗಲೇ ಜನರಿಗೆ ವಿಷಯ ಗೊತ್ತಾಗೋದು, ಎಲ್ಲಾದಕ್ಕೂ ಉತ್ತರ ಕೊಡ್ತೀನಿ; ಹೈವೋಲ್ಟೇಜ್, ಲೋ ವೋಲ್ಟೇಜ್, ಲೂಟಿ ಮತ್ತು ನಕಲಿ ಎಲ್ಲ ವಿಷಯಗಳಿಗೆ ಉತ್ತರ ಕೊಡ್ತೀನಿ ಅಂತ ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ