ಸಿಎಂ ಸಿದ್ದರಾಮಯ್ಯ ಮೈಸೂರು ನಿವಾಸಕ್ಕೆ ಭಾರೀ ಭದ್ರತೆ, ಸ್ಫೋಟಕ ಹಾಗೂ ಶ್ವಾನದಳದಿಂದ ಸ್ಥಳ ಪರಿಶೀಲನೆ
ಎಸಿಪಿ ಗಜೇಂದ್ರ ನೇತೃತ್ವದಲ್ಲಿ ಒಂದು ಸಿಎಅರ್, ಒಂದು ಕೆಎಸ್ ಆರ್ ಪಿ, ಸಬ್ ಇನ್ಸ್ ಪೆಕ್ಟರ್ ಹಾಗೂ ಅಸಿಸ್ಟಂಟ್ ಸಬ್ ಇನ್ಸ್ ಪೆಕ್ಟರ್ ಒಳಗೊಂಡ 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಲಾಗಿದೆ. ದಸರಾ ಉತ್ಸವಕ್ಕೆ ದೇಶವಿದೇಶಗಳಿಂದ ಮೈಸೂರಿಗೆ ಆಗಮಿಸುವುದರಿಂದ ಅವರೊಂದಿಗೆ ಸಮಾಜಘಾತುಕ ಶಕ್ತಿಗಳು ನಗರಕ್ಕೆ ನಗರ ಪ್ರವೇಶಿಸಬಹುದಾದ ಶಂಕೆಯಿಂದ ಸಿಎಂ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ಮೈಸೂರು ನಿವಾಸದ ಮೇಲೆ ಕಳೆದ ವಾರ ನಡೆದ ಕಲ್ಲೆಸೆತದ ಘಟನೆಯ ಬಳಿಕ ಮನೆಗೆ ಹೆಚ್ಚಿನ ಭದ್ರತೆ (security heightened) ಒದಗಿಲಾಗಿದೆ. ಸೋಮವಾರ ಬೆಳಗ್ಗೆ, ಬಾಂಬ್ ಸ್ಕ್ವ್ಯಾಡ್ ಮತ್ತು ಶ್ವಾನದಳ (dog squad) ಸಹ ಸಿಎಂ ನಿವಾಸದ ಆವರಣ ಮತ್ತು ವಾಹನಗಳ ಪರಿಶೀಲನೆ ನಡೆಸಿದರು. ಕಲ್ಲೆಸೆದ ವ್ಯಕ್ತಿಯನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ನಗರದ ಟಿಕೆ ಬಡಾವಣೆಯಲ್ಲಿರುವ ಸಿದ್ದರಾಮಯ್ಯ ನಿವಾಸದ ಮುಂದೆ ಪೊಲೀಸರ ದಂಡನ್ನು ನೋಡಬಹುದು. ಎಸಿಪಿ ಗಜೇಂದ್ರ ನೇತೃತ್ವದಲ್ಲಿ ಒಂದು ಸಿಎಅರ್, ಒಂದು ಕೆಎಸ್ ಆರ್ ಪಿ, ಸಬ್ ಇನ್ಸ್ ಪೆಕ್ಟರ್ ಹಾಗೂ ಅಸಿಸ್ಟಂಟ್ ಸಬ್ ಇನ್ಸ್ ಪೆಕ್ಟರ್ ಒಳಗೊಂಡ 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಲಾಗಿದೆ. ದಸರಾ ಉತ್ಸವಕ್ಕೆ ದೇಶವಿದೇಶಗಳಿಂದ ಮೈಸೂರಿಗೆ ಆಗಮಿಸುವುದರಿಂದ ಅವರೊಂದಿಗೆ ಸಮಾಜಘಾತುಕ ಶಕ್ತಿಗಳು ನಗರಕ್ಕೆ ನಗರ ಪ್ರವೇಶಿಸಬಹುದಾದ ಶಂಕೆಯಿಂದ ಸಿಎಂ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ