AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕೆಸಿಆರ್‌ ಪುತ್ರಿ ಕವಿತಾ

ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕೆಸಿಆರ್‌ ಪುತ್ರಿ ಕವಿತಾ

ರಮೇಶ್ ಬಿ. ಜವಳಗೇರಾ
|

Updated on:Apr 25, 2026 | 4:00 PM

Share

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (KCR) ಅವರ ಪುತ್ರಿ ಮತ್ತು ಮಾಜಿ ಸಂಸದೆ ಕೆ. ಕವಿತಾ(K. Kavitha) ಅವರು ಇಂದು (ಏಪ್ರಿಲ್ 25) ಹೊಸ ಪಕ್ಷ ಸ್ಥಾಪಿಸಿ ಘೋಷಣೆ ಮಾಡಿದ್ದಾರೆ. ಕವಿತಾ ಅವರು ತಮ್ಮ ಪಕ್ಷಕ್ಕೆ ತೆಲಂಗಾಣ ರಾಷ್ಟ್ರ ಸೇನಾ (TRS) ಎಂದು ಹೆಸರಿಸಿದ್ದಾರೆ. ಇದು ಈ ಹಿಂದೆ ಅವರ ತಂದೆ ಕೆಸಿಆರ್ ಅವರು ಬಳಸುತ್ತಿದ್ದ ‘ತೆಲಂಗಾಣ ರಾಷ್ಟ್ರ ಸಮಿತಿ’ ಹೆಸರನ್ನು ನೆನಪಿಸುವಂತಿದ್ದು, ತೆಲಂಗಾಣದ ಮೂಲ ಅಸ್ಮಿತೆಯನ್ನು ಮರಳಿ ಪಡೆಯುವ ಸಂಕೇತವಾಗಿ ಬಳಸಲಾಗಿದೆ

ಹೈದರಾಬಾದ್‌, (ಏಪ್ರಿಲ್ 25): ತೆಲಂಗಾಣದ (Telangana) ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (KCR) ಅವರ ಪುತ್ರಿ ಮತ್ತು ಮಾಜಿ ಸಂಸದೆ ಕೆ. ಕವಿತಾ(K. Kavitha) ಅವರು ಇಂದು (ಏಪ್ರಿಲ್ 25) ಹೊಸ ಪಕ್ಷ ಸ್ಥಾಪಿಸಿ ಘೋಷಣೆ ಮಾಡಿದ್ದಾರೆ. ಕವಿತಾ ಅವರು ತಮ್ಮ ಪಕ್ಷಕ್ಕೆ ತೆಲಂಗಾಣ ರಾಷ್ಟ್ರ ಸೇನಾ (TRS) ಎಂದು ಹೆಸರಿಸಿದ್ದಾರೆ. ಇದು ಈ ಹಿಂದೆ ಅವರ ತಂದೆ ಕೆಸಿಆರ್ ಅವರು ಬಳಸುತ್ತಿದ್ದ ‘ತೆಲಂಗಾಣ ರಾಷ್ಟ್ರ ಸಮಿತಿ’ ಹೆಸರನ್ನು ನೆನಪಿಸುವಂತಿದ್ದು, ತೆಲಂಗಾಣದ ಮೂಲ ಅಸ್ಮಿತೆಯನ್ನು ಮರಳಿ ಪಡೆಯುವ ಸಂಕೇತವಾಗಿ ಬಳಸಲಾಗಿದೆ. ಈ ಮೂಲಕ ತಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದ ತಂದೆ ಕೆಸಿಆರ್​, ಸೋದರ ಕೆ.ಟಿ.ರಾಮಾರಾವ್​​ಗೆ ಸೆಡ್ಡು ಹೊಡೆದಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದ ಆರೋಪದಡಿ ಕವಿತಾ ಜೈಲು ಸೇರಿದ್ದರು. ಅಲ್ಲದೇ ಪಕ್ಷದ ವಿಚಾರದ ಬಗ್ಗೆ ತಂದೆ, ಸೋದರನ ಜೊತೆ ಕಲಹ ಉಂಟಾಗಿತ್ತು. ಕಲಹದಿಂದ ಬೇಸತ್ತು ಕವಿತಾ ಅವರು ಸೆಪ್ಟೆಂಬರ್ 2025 ರಲ್ಲಿ ಭಾರತ್ ರಾಷ್ಟ್ರ ಸಮಿತಿಯಿಂದ (BRS) ಹೊರಬಂದಿದ್ದರು. ಆಂತರಿಕ ಭಿನ್ನಮತ ಮತ್ತು ಅವರ ಸಹೋದರ ಕೆ.ಟಿ. ರಾಮರಾವ್ ಅವರೊಂದಿಗಿನ ವೈಮನಸ್ಸಿನಿಂದಾಗಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ನಂತರ ಅವರು ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.

Published on: Apr 25, 2026 02:06 PM
Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More