ಜನಿವಾರ ಧರಿಸಬಾರದೆಂದು ಪ್ರಾಧಿಕಾರವು ವಸ್ತ್ರಸಂಹಿತೆ ವಿಷಯದಲ್ಲಿ ಹೇಳಿಲ್ಲ: ಹೆಚ್ ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕ-ಕೆಇಎ

ಅರುಣ್​ ಕುಮಾರ್​ ಬೆಳ್ಳಿ

Updated on: Apr 18, 2025 | 7:36 PM

ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಜನಿವಾರ ಧರಿಸಬಾದು ಅಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿಲ್ಲ, ವೆಬ್ಸೈಟ್​​ನಲ್ಲಿ ಅದನ್ನು ಪರಿಶೀಲಿಸಬಹುದು, ಸಿಇಟಿಯ ಉಸ್ತುವಾರಿಯನ್ನು 20,000 ಶಿಕ್ಷಕರಿಗೆ ವಹಿಸಲಾಗಿತ್ತು, ಅದರೆ ಕಾಲೇಜಿನ ಮುಖ್ಯದ್ವಾರದ ಬಳಿಯ ಒಬ್ಬ ಸಿಬ್ಬಂದಿಯಿಂದ ಉಳಿದವರೆಲ್ಲ ನೋವು ಅನುಭವಿಸುತ್ತಿದ್ದಾರೆ, ಅಚಾತುರ್ಯ ನಡೆದಿದ್ದೇಯಾದರೆ ಪ್ರಾಧಿಕಾರದ ಪರವಾಗಿ ಮತ್ತು ವೈಯಕ್ತಿಕವಾಗಿ ತಾನು ಬ್ರಾಹ್ಮಣ ಸಮಾಜದ ಕ್ಷಮೆ ಕೋರುವುದಾಗಿ ಪ್ರಸನ್ನ ಹೇಳಿದರು.

ಬೆಂಗಳೂರು, ಏಪ್ರಿಲ್ 18: ಸಿಇಟಿ ಬರೆಯುವ ಸಂದರ್ಭದಲ್ಲಿ ಜನಿವಾರ ಧರಿಸಿದ ಕಾರಣ ಪರೀಕ್ಷೆಯಲ್ಲಿ ಕೂರಲು ಅನುಮತಿ ನೀಡದ ಎರಡು ಘಟನೆಗಳ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ (H Prasanna, Executive Director, KEA) ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಇಟಿಗಾಗಿ ರಾಜ್ಯಾದ್ಯಂತ 775 ಪರೀಕ್ಷಾ ಕೇಂದ್ರಗಳನ್ನು ವ್ಯವಸ್ಥೆಗೊಳಿಸಲಾಗಿತ್ತು, ಅವುಗಳ ಪೈಕಿ ಶಿವಮೊಗ್ಗ ಮತ್ತು ಬೀದರ್ ನಗರಗಳಲ್ಲಿನ ಕಾಲೇಜುಗಳಲ್ಲಿ ಈ ಹುಚ್ಚುತನ ನಡೆದಿದೆ, ಶಿವಮೊಗ್ಗದಲ್ಲಿ ವಿದ್ಯಾರ್ಥಿಗೆ ಪರೀಕ್ಷೆ ಆರಂಭವಾಗಿ 10 ನಿಮಿಷ ಕಳೆದ ಮೇಲೆ ಬರೆಯುವ ಅನುಮತಿ ನೀಡಲಾಗಿದ್ದರೆ ಬೀದರ್ ನಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರದಿಂದ ವಾಪಸ್ಸು ಕಳಿಸಲಾಗಿದೆ. ಕೆಇಎ ಎಲ್ಲ ಜಿಲ್ಲಾಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ನೀಡಿರುತ್ತದೆ, ಇದು ಅವರ ಹೊಣೆಗಾರಿಕೆ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಅವರೇ ಕ್ರಮ ಜರುಗಿಸಬಹುದು ಇಲ್ಲವೇ ಸರ್ಕಾರಕ್ಕೆ ಶಿಫಾರಸ್ಸು ಮಾಡಬಹುದು ಎಂದು ಪ್ರಸನ್ನ ಹೇಳಿದರು.

ಇದನ್ನೂ ಓದಿ:  ಸಿಇಟಿ ಪರೀಕ್ಷೆ ಎದುರಲ್ಲಿ ಪಿಯು ಫಲಿತಾಂಶ – ಖಾಸಗಿ ಶಿಕ್ಷಣ ಲಾಬಿಗೆ ಮಣಿದ ಸರಕಾರ?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.