ಕೇದಾರನಾಥ ವಿಐಪಿ ದರ್ಶನ ವಿವಾದ; ಬಿಕೆಟಿಸಿ ಮುಖ್ಯಸ್ಥರ ವಿರುದ್ಧ ದೇವಸ್ಥಾನದ ಅರ್ಚಕರ ಪ್ರತಿಭಟನೆ

Updated on: May 01, 2026 | 5:14 PM

ಬದರೀನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಮುಖ್ಯಸ್ಥ ಹೇಮಂತ್ ದ್ವಿವೇದಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಅವರ ವಿರುದ್ಧ ಘೋಷಣೆಗಳನ್ನು ಕೂಡ ಕೂಗಲಾಯಿತು. ಅದಾನಿ ಗ್ರೂಪ್‌ಗೆ ಸಂಬಂಧಿಸಿದ ವ್ಯವಸ್ಥೆಗಳ ಅಡಿಯಲ್ಲಿ ಕಾರ್ಪೊರೇಟ್ ಗುಂಪುಗಳಿಗೆ ದೇವಾಲಯಕ್ಕೆ ವಿಶೇಷ ವಿಐಪಿ ಪ್ರವೇಶವನ್ನು ನೀಡಲಾಗುತ್ತಿದೆ ಎಂಬ ವರದಿಗಳ ನಂತರ ಈ ವಿವಾದ ಪ್ರಾರಂಭವಾಯಿತು. ಈ ಪದ್ಧತಿಯಿಂದ ಗಂಟೆಗಟ್ಟಲೆ ಸಾಲಿನಲ್ಲಿ ಕಾಯುವ ಸಾಮಾನ್ಯ ಭಕ್ತರಿಗೆ ಅನ್ಯಾಯವಾಗಿದೆ ಎಂದು ಅರ್ಚಕರು ಆರೋಪಿಸಿದ್ದಾರೆ.

ಕೇದಾರನಾಥ, ಮೇ 1: ಕೇದಾರನಾಥ ದೇವಾಲಯದಲ್ಲಿ ಇಂದು ಪುರೋಹಿತರು ಮತ್ತು ಸ್ಥಳೀಯ ಭಕ್ತರು ವಿಐಪಿ ದರ್ಶನ ವ್ಯವಸ್ಥೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಭಾರೀ ವಿವಾದ ಭುಗಿಲೆದ್ದಿತು. ಬದರೀನಾಥ-ಕೇದಾರನಾಥ (Kedarnath) ದೇವಾಲಯ ಸಮಿತಿ (ಬಿಕೆಟಿಸಿ) ಮುಖ್ಯಸ್ಥ ಹೇಮಂತ್ ದ್ವಿವೇದಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಅವರ ವಿರುದ್ಧ ಘೋಷಣೆಗಳನ್ನು ಕೂಡ ಕೂಗಲಾಯಿತು.

ಅದಾನಿ ಗ್ರೂಪ್‌ಗೆ ಸಂಬಂಧಿಸಿದ ವ್ಯವಸ್ಥೆಗಳ ಅಡಿಯಲ್ಲಿ ಕಾರ್ಪೊರೇಟ್ ಗುಂಪುಗಳಿಗೆ ಕೇದಾರನಾಥ ದೇವಾಲಯಕ್ಕೆ ವಿಶೇಷ ವಿಐಪಿ ಪ್ರವೇಶವನ್ನು ನೀಡಲಾಗುತ್ತಿದೆ ಎಂಬ ವರದಿಗಳ ನಂತರ ಈ ವಿವಾದ ಪ್ರಾರಂಭವಾಯಿತು. ಈ ಪದ್ಧತಿಯಿಂದ ಗಂಟೆಗಟ್ಟಲೆ ಸಾಲಿನಲ್ಲಿ ಕಾಯುವ ಸಾಮಾನ್ಯ ಭಕ್ತರಿಗೆ ಅನ್ಯಾಯವಾಗಿದೆ ಎಂದು ಅರ್ಚಕರು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More