ಬೆಂಗಳೂರು: ಪ್ರಿಯಕರನ ಜೊತೆ ಐಷಾರಾಮಿ ಬದುಕು ನಡೆಸಬಯಸಿದ್ದ ಯುವತಿ ತಾನು ಬಾಡಿಗೆಗಿದ್ದ ಮನೆ ಮಾಲೀಕಳನ್ನೇ ಕೊಂದಳೇ?

ಅರುಣ್​ ಕುಮಾರ್​ ಬೆಳ್ಳಿ

Updated on: May 15, 2024 | 2:03 PM

ತನ್ನ ಬಾಯ್ ಫ್ರೆಂಡ್ ನನ್ನು ಗಂಡ ಅಂತ ಪರಿಚಯಿಸಿದ್ದಳಂತೆ. ಮೈ ತುಂಬಾ ಸಾಲ ಮಾಡಿಕೊಂಡಿದ್ದ ಮೋನಿಕಾ, ದಿವ್ಯಾ ಒಂಟಿಯಾಗಿ ಮನೆಯಲ್ಲಿದ್ದ ಸಮಯ ಸಾಧಿಸಿ ಅವರ ಮೇಲೆ ಹಿಂದಿನಿಂದ ದಾಳಿ ನಡೆಸಿ ಕತ್ತು ಹಿಸುಕಿ ಕೊಂದಿದ್ದಾಳೆ ಮತ್ತು ಅವರ ಮನೆಯಿಂದ 36 ಗ್ರಾಂ ಚಿನ್ನ ಅಪಹರಿಸಿದ್ದಾಳೆ. ಪೊಲೀಸರ ದಿಕ್ಕು ತಪ್ಪಿಸಲು ತನ್ನ ಮನೆಯಿಂದ ರೂ, 60,000 ಕಳುವಾಗಿದೆ ಎಂದಿದ್ದಳಂತೆ.

ಬೆಂಗಳೂರು: ಈ ಯುವತಿಯನ್ನು ಗಮನವಿಟ್ಟು ನೋಡಿ. 24-ವರ್ಷ ವಯಸ್ಸಿನ ಮೋನಿಕಾ (Monica) ಐಷಾರಾಮಿ ಬದುಕಿನ ಲಾಲಸೆಗೆ ಬಿದ್ದು ಮತ್ತು ತನ್ನ ಪ್ರಿಯಕರ (boyfriend) ಜೊತೆ ಮೋಜು ಮಸ್ತಿ ಮಾಡುವುದಕ್ಕೆ ಹಣ ಹೊಂದಿಸಲು ತಾನು ಬಾಡಿಗೆಯಿದ್ದ ಮನೆ ಮಾಲೀಕರಾಗಿದ್ದ ದಿವ್ಯಾ (Divya) ಹೆಸರಿನ ಮಹಿಳೆಯನ್ನು ಕೊಂದ ಆರೋಪದಲ್ಲಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಮೇ 10 ರಂದು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೋನಸಂದ್ರ ಏರಿಯಾದಲ್ಲಿ ಕೊಲೆ ನಡೆದಿತ್ತು. ಕೇವಲ ಮೂರು ತಿಂಗಳು ಹಿಂದೆ ದಿವ್ಯಾ ಅವರ ಮೊದಲ ಮಹಡಿಯಲ್ಲಿರುವ ಮನೆಗೆ ಬಾಡಿಗೆ ಬಂದಿದ್ದ ಮೋನಿಕಾ ತನ್ನ ಬಾಯ್ ಫ್ರೆಂಡ್ ನನ್ನು ಗಂಡ ಅಂತ ಪರಿಚಯಿಸಿದ್ದಳಂತೆ. ಮೈ ತುಂಬಾ ಸಾಲ ಮಾಡಿಕೊಂಡಿದ್ದ ಮೋನಿಕಾ, ದಿವ್ಯಾ ಒಂಟಿಯಾಗಿ ಮನೆಯಲ್ಲಿದ್ದ ಸಮಯ ಸಾಧಿಸಿ ಅವರ ಮೇಲೆ ಹಿಂದಿನಿಂದ ದಾಳಿ ನಡೆಸಿ ಕತ್ತು ಹಿಸುಕಿ ಕೊಂದಿದ್ದಾಳೆ ಮತ್ತು ಅವರ ಮನೆಯಿಂದ 36 ಗ್ರಾಂ ಚಿನ್ನ ಅಪಹರಿಸಿದ್ದಾಳೆ.

ಪೊಲೀಸರ ದಿಕ್ಕು ತಪ್ಪಿಸಲು ತನ್ನ ಮನೆಯಿಂದ ರೂ, 60,000 ಕಳುವಾಗಿದೆ ಎಂದಿದ್ದಳಂತೆ. ದಿವ್ಯಾ ಅವರ ಒಡವೆಗಳನ್ನು ಆಕೆ ಮನೆಗೆ ಹತ್ತಿರದ ಚಿನ್ನಾಭರಣ ಅಂಗಡಿಯೊಂದರಲ್ಲಿ ಗಿರವಿ ಇಟ್ಟಿದ್ದಳಂತೆ ಮತ್ತು ಪೊಲೀಸರ ಮುಂದೆ ಅದನ್ನು ಅಂಗೀಕರಿಸಿದ್ದಾಳೆ. ಆಕೆಯ ಪ್ರಿಯಕರ ನಾಪತ್ತೆಯಾಗಿದ್ದಾನೆ, ಪೊಲೀಸರು ಕೊಲೆಯಲ್ಲಿ ಅವನ ಪಾತ್ರವನ್ನು ತನಿಖೆ ಮಾಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಜ್ಜಿಯ ದೂರನ್ನು ಮೂಢನಂಬಿಕೆ ಎಂದು ವಾಪಸ್ ಕಳುಹಿಸಿದ್ದ ಪೊಲೀಸರು; ಹುಬ್ಬಳ್ಳಿಯಲ್ಲಿ ನಡೆಯಿತು ನೇಹಾ ಮಾದರಿಯ ಮತ್ತೊಂದು ಕೊಲೆ

Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.