AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hubballi Anjali Murder Case: ತಾನು ಕರೆದ ಕಡೆ ಬಾರದಿದ್ದಕ್ಕೆ ಸಹಪಾಠಿ ಅಂಜಲಿಯನ್ನ ಕೊಲೆ ಮಾಡಿದ್ನಾ ವಿಶ್ವ?

ಕಳೆದ ತಿಂಗಳು ಏಪ್ರಿಲ್​ 18 ರಂದು ನಡೆದ ನೇಹಾ ಹಿರೇಮಠ ಕೊಲೆ ಹುಬ್ಬಳ್ಳಿಯ ಜನರನ್ನು ಬೆಚ್ಚಿ ಬೀಳಿಸಿತ್ತು. ಈ ಕೊಲೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ನೇಹಾ ಕೊಲೆ ಮಾದರಿಯಲ್ಲಿ ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಮತ್ತೊಂದು ಹತ್ಯೆ ನಡೆದಿದೆ. ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

Hubballi Anjali Murder Case: ತಾನು ಕರೆದ ಕಡೆ ಬಾರದಿದ್ದಕ್ಕೆ ಸಹಪಾಠಿ ಅಂಜಲಿಯನ್ನ ಕೊಲೆ ಮಾಡಿದ್ನಾ ವಿಶ್ವ?
ಕೊಲೆಯಾದ ಅಂಜಲಿ, ಆರೋಪಿ ವಿಶ್ವ
ಶಿವಕುಮಾರ್ ಪತ್ತಾರ್
| Edited By: |

Updated on:May 15, 2024 | 12:28 PM

Share

ಹುಬ್ಬಳ್ಳಿ, ಮೇ 15: ಇಂದು ಬುಧವಾರ (ಮೇ 15) ನಸುಕಿನ ಜಾವ ನಡೆದ ಯುವತಿಯ ಬರ್ಬರ ಕೊಲೆ ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು (Hubballi) ಬೆಚ್ಚಿಬೀಳಿಸಿದೆ. ಬೆಂಡಿಗೇರಿ ಪೊಲೀಸ್​ ಠಾಣೆ ವ್ಯಾಪ್ತಿಯ ವೀರಾಪುರ ಓಣಿಯಲ್ಲಿ (Veerapur Oni) ವಾಸವಾಗಿದ್ದ ಅಂಜಲಿ ಅಂಬಿಗೇರ (20) (Anjali Ambiger) ಮನೆ ನುಗ್ಗಿದ ಆರೋಪಿ ವಿಶ್ವ ಆಕೆಯ ಅಜ್ಜಿ ಮತ್ತು ಸಹೋದರಿಯ ಎದರೇ ಆಕೆಗೆ ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕಳೆದ ತಿಂಗಳು ಏಪ್ರಿಲ್​ 18 ರಂದು ನಡೆದ ನೇಹಾ ಹಿರೇಮಠ (Neha Hiremath) ಕೊಲೆ ಮಾದರಿಯಲ್ಲೇ ಅಂಜಲಿಯನ್ನು ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಅಷ್ಟಕ್ಕೂ ಆರೋಪಿ ವಿಶ್ವ ಅಲಿಯಾಸ್ ಗೀರಿಶ್ ಅಂಜಲಿಯನ್ನು ಕೊಲೆ ಮಾಡಿದ್ದು ಏಕೆ? ಇವರಿಬ್ಬರಿಗೂ ಮೊದಲೆ ಪರಿಚಯ ಇತ್ತಾ? ಇಲ್ಲಿದೆ ಉತ್ತರ.

ಅಂಜಲಿ ಅಂಬಿಗೇರ ವಿರಾಪುರ ಓಣಿಯಲ್ಲಿ ಅಜ್ಜಿ, ಸಹೋದರಿಯೊಂದಿಗೆ ವಾಸವಾಗಿದ್ದಳು. ಕೊಲೆ ಮಾಡಿದ ಆರೋಪಿ ವಿಶ್ವ ಮತ್ತು ಅಂಜಲಿ ಸಹಪಾಠಿಗಳು. ಅಂಜಲಿ ಅಂಬಿಗೇರ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದಳು. ಇನ್ನು ವಿಶ್ವನ ವಿರುದ್ಧ ಹಲವು ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾದ ಆರೋಪವಿದೆ. ಜತೆಗೆ, ಬೈಕ್ ಕಳ್ಳತನದಲ್ಲಿಯೂ ಆರೋಪಿಯಾಗಿದ್ದಾನೆ. ಅಂಜಲಿ ಅಂಬಿಗೇರ ಸಹಪಾಠಿಯಾದ ವಿಶ್ವನ ಜೊತೆ ಒಡನಾಟ ಹೊಂದಿದ್ದಳು. ಈ ಒಡನಾಟವನ್ನು ವಿಶ್ವ ತಪ್ಪಾಗಿ ಅರ್ಥೈಯಿಸಿಕೊಂಡಿದ್ದನು.

ಇದನ್ನೂ ಓದಿ: ನೇಹಾ ಕೊಲೆ ಪ್ರಕರಣ: ಅವಳು ನನ್ನ ಜೊತೆ ಮಾತಾಡಲ್ಲ ಅಂದಳು, ಅದಕ್ಕೆ ಚಾಕು ಹಾಕಿದೆ; ಆರೋಪಿ ಫಯಾಜ್​

ಅಂಜಲಿ ಅಂಬಿಗೇರ ಕಳೆದ ಮೂರು ತಿಂಗಳಿಂದ ಮನೆಗೆ ಬಂದಿರಲಿಲ್ಲ. ಈಗ ಎಂಟು ದಿನಗಳ ಹಿಂದೆ ಮನೆಗೆ ಬಂದಿದ್ದಳು. ಹೀಗೆ ಮನೆಗೆ ಬಂದ ಅಂಜಲಿಗೆ ವಿಶ್ವ ನನ್ನ ಜೊತೆ ಅಲ್ಲಿ-ಇಲ್ಲಿಗೆ ಬಾ ಅಂತ ಪೀಡಿಸುತ್ತಿದ್ದನು. ಅಲ್ಲದೆ ಈ ಹಿಂದೆ ಮೈಸೂರಿಗೆ ಬಾ ಅಂತ ಎಂದು ಹೇಳಿದ್ದನು. ಇದಕ್ಕೆ ಅಂಜಲಿ ನಿರಾಕರಣೆ ಮಾಡಿದ್ದಳು. ಇದರಿಂದ ಕೋಪಗೊಂಡ ವಿಶ್ವ ನನ್ನ ಮಾತು ಕೇಳದಿದ್ದರೇ ನೇಹಾ ರೀತಿ ನಿನ್ನನ್ನು ಕೊಲೆ ಮಾಡುತ್ತೇನೆ ಅಂತ ಬೆದರಿಕೆ ಹಾಕಿದ್ದನು.

ಇದೀಗ, ವಿಶ್ವ ಅಲಿಯಾಸ್​ ಗಿರೀಶ್​ ಇಂದು ನಸುಕಿನ ಜಾವ ಅಂಜಿಲಿ ಮನೆಗೆ ನುಗ್ಗಿ ಅಜ್ಜಿ ಮತ್ತು ಸಹೋದರಿ ಎದುರೇ ಕೊಲೆ ಮಾಡಿ, ಪರಾರಿಯಾಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:17 pm, Wed, 15 May 24

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್