ಕೊಳೆತೆ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಮೃತಳ ಗುರುತು ಗೊತ್ತು ಮಾಡಿತ್ತು ಕಿವಿ ಓಲೆ, ಏನಿದು ಪ್ರಕರಣ?

ಅಲ್ಲೊಂದು ಸಂಪೂರ್ಣವಾಗಿ ಕೊಳತೆ ಸ್ಥಿತಿಯಲ್ಲಿದ್ದ ಶವ, ಭದ್ರಾ ಕಾಲುವೆಯಲ್ಲಿ ತೇಲಿಕೊಂಡು ಬಂದಿತ್ತು. ಮಹಿಳೆಯ ಶವ ಎಂಬುದನ್ನ ಬಿಟ್ಟರೇ ಎನೇನೂ ಗುರುತು ಸಿಕ್ಕಿರಲಿಲ್ಲ. ಜೊತೆಗೆ ಅದೊಂದು ಅನಾಮಧೇಯ ಶವ ಎಂದು ಕೈತೊಳೆದುಕೊಳ್ಳುವ ಸ್ಥಿತಿ ಸಹ ಇರಲಿಲ್ಲ. ಮಹಿಳೆಯ ಕೈ ಕಾಲು ಹಗ್ಗದಿಂದ ಕಟ್ಟಿ ಕಾಲುವೆಗೆ ಎಸೆಯಲಾಗಿತ್ತು. ಈ ಕುರಿತು ತನಿಖೆಗೆ ಮುಂದಾದ ಪೊಲೀಸರಿಗೆ ಆಘಾತ ಮತ್ತು ಆಶ್ಚರ್ಯವಾಗಿದ್ದು, ಕೊಲೆಯೆಂದು ಗೊತ್ತು ಮಾಡಿತ್ತು ಕಿವಿ ಓಲೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಕೊಳೆತೆ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಮೃತಳ ಗುರುತು ಗೊತ್ತು ಮಾಡಿತ್ತು ಕಿವಿ ಓಲೆ, ಏನಿದು ಪ್ರಕರಣ?
ಕೊಲೆ ಆರೋಪಿಗಳು
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 15, 2024 | 3:29 PM

ದಾವಣಗೆರೆ, ಮೇ.15: ಶಿವಮೊಗ್ಗ ಜಿಲ್ಲೆಯ ಹೊಳೆಹೊಸೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಅರಕೆರೆ ಗ್ರಾಮದ ನಿವಾಸಿಯಾದ ನೇತ್ರಾವತಿ(47) ಎಂಬ ಮಹಿಳೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ(Channagiri)ತಾಲೂಕಿನ ಕಣವೆ ಬಿಳಚಿ ಗ್ರಾಮದ ಬಳಿಯ ಭದ್ರಾ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆದರೆ, ಮಹಿಳೆಯ ಶವ ಎಂಬುದನ್ನ ಬಿಟ್ಟರೇ ಬೇರೇ ಮಾಹಿತಿಯೂ ತಿಳಿಯದ ಸ್ಥಿತಿಯಲ್ಲಿದ್ದು, ಕೂಡಲೇ ಈ ಕುರಿತು ಕಾಲುವೆಯ ನೀರು ಗಂಟಿ ಅಣ್ಣಪ್ಪ ಎಂಬಾತ ಇಲ್ಲಿನ ಬಸವಾಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದ. ಸ್ಥಳಕ್ಕೆ ಬಂದ ಸಂತೆಬೆನ್ನೂರಿನ ಸರ್ಕಲ್ ಇನ್ಸ್ ಪೇಕ್ಟರ್ ಗೋಪಾಲ್ ನಾಯ್ಕ ಹಾಗೂ ಬಸವ ಪಟ್ಟಣದ ಎಸ್ ಐ ವೀಣಾ. ಶವ ಹೊರ ತೆಗೆಸಿ ಸುತ್ತ ಮುತ್ತಲಿನ ಪೊಲೀಸ್ ಠಾಣೆ ಮಾಹಿತಿ ನೀಡಿದರು.

ಕೊಲೆಯೆಂದು ಗೊತ್ತು ಮಾಡಿತ್ತು ಓಲೆ

ಇದೇ ವೇಳೆ ಮಹಿಳೆಯೊಬ್ಬಳು ನಾಪತ್ತೆಯಾದ ಪ್ರಕರಣ ಹೊಳೆ ಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಹಿನ್ನಲೆ ದೂರು ಕೊಟ್ಟ ಸಂಬಂಧಿಕರಿಗೆ ಮಾಹಿತಿ ನೀಡಲಾಯಿತು. ಬಳಿಕ ಅವರು ಬಂದು ಸೊಂಟಕ್ಕೆ ಕಟ್ಟಿದ ದಾರ ಹಾಗೂ ಕಿವಿಯಲ್ಲಿ ಇದ್ದ ಓಲೆ ನೋಡಿ ಇವಳು ನೇತ್ರಾವತಿಯೇ ಎಂದು ಸ್ಪಷ್ಟ ವಾಗಿ ಹೇಳಿದ್ದರು.

ಇದನ್ನೂ ಓದಿ:ಕಲಬುರಗಿ: ಕಲ್ಲಿನಿಂದ ಜಜ್ಜಿ, ಕಾರಿನಲ್ಲಿಟ್ಟು ಬೆಂಕಿ ಹಚ್ಚಿ ವ್ಯಕ್ತಿಯ ಬರ್ಬರ ಕೊಲೆ; ಆರೋಪಿ ಅಂದರ್​

ಕೊಲೆ ಮಾಡಿದ್ದ ಪಕ್ಕದ ಜಮೀನಿನವ

ಇಷ್ಟು ಗೊತ್ತಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು, ಬಂದಿದ್ದ ಸಂಬಂಧಿಕರ ಕೆಲವರ ಮೇಲೆ ಸಂಶಯ ವ್ಯಕ್ತ ಪಡಿಸಿದ್ದರು. ಬಳಿಕ  ಕೆಲವರ ಮೇಲೆ ಕೆಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದರ ರೂವಾರಿ ಕುಮಾರ ಎಚ್​ಜಿ ಎಂಬುದು ಗೊತ್ತಾಗಿದೆ. ಕೊಲೆಗೆ ಕಾರಣ ಬಾಯ್ಬಿಟ್ಟ ಆರೋಪಿ, ‘ ಎಪ್ರೀಲ್ 20 ರಂದು ಈ ಆರೋಪಿ ಕುಮಾರನ ತೋಟದಲ್ಲಿನ ಅಡಿಕೆ ಮರಗಳನ್ನ ಕೊಲೆಯಾದ ನೇತ್ರಾವತಿ ಕಡಿದು ಹಾಕಿದ್ದಳಂತೆ. ಇವರಿಗೂ ಮೊದಲಿನಿಂದಲೂ ಜಗಳವಿತ್ತು. ಮೇಲಾಗಿ ಪಕ್ಕದ ಜಮೀನಿನವರು. ಇದಕ್ಕೆ ಸಿಟ್ಟಿಗೆದ್ದ ಕುಮಾರ, ನೇತ್ರಾವತಿಯನ್ನ ಆಯುಧದಿಂದ ಹೊಡೆದು ಕೊಲೆ ಮಾಡಿ ತೆಂಗಿನ ಗರಿಗಳಲ್ಲಿ ಮುಚ್ಚಿಟ್ಟಿದ್ದ. ಮರು ದಿನ ಸ್ನೇಹಿತ ಚಿದಾನಂದಪ್ಪನನ್ನ ಕರೆದುಕೊಂಡು ಬಂದು ತನ್ನ ಜಮೀನಿನಿಂದ 250 ಮೀಟರ್ ದೂರದಲ್ಲಿದ್ದ ಭದ್ರಾ ಕಾಲುವೆಗೆ ಶವ ಎಸೆದು ಹೋಗಿದ್ದ. ಬಂಧನದ ಬಳಿಕ ಕುಮಾರ ಸತ್ಯ ಬಾಯಿ ಬಿಟ್ಟಿದ್ದಾನೆ.

ಸಂಪೂರ್ಣವಾಗಿ ಕೊಳತು ಹೋಗಿದ್ದ ಶವವನ್ನ ಪೊಲೀಸರು ನಿರ್ಲಕ್ಷ ಮಾಡಿದ್ದರೇ ಆರೋಪಿಗಳು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಿದ್ದರು. ಮೇಲಾಗಿ ಇಲ್ಲಿ ಪೊಲೀಸರು ಚಾಣಾಕ್ಷ ತನದಿಂದ ಕೊಲೆ ಪ್ರಕರಣ ಪತ್ತೆ ಹಚ್ಚಿದ್ದಾರೆ. ಕೊಲೆಯಾದ ನೇತ್ರಾವತಿ ಅವಿವಾಹಿತೆ. ಮೇಲಾಗಿ ಕುಮಾರ ಜೊತೆಗೆ ಒಂದಿಲ್ಲೊಂದದ ಕಾರಣಕ್ಕೆ ಜಗಳವಾಗುಡುತ್ತಲೇ ಇದ್ದಳು. ಹೀಗೆ ನಡೆದ ಜಗಳಕ್ಕೆ ಪ್ರತಿಯಾಗಿ ಅವಳು ಕುಮಾರನಿಗೆ ಸೇರಿದ ಅಡಿಕೆ ಮರ ಕಡಿದು ಹಾಕಿದ್ದಳು. ಈ ಹಿನ್ನಲೆ ರೊಚ್ಚಿಗೆದ್ದ ಆರೋಪಿ ಕುಮಾರ, ಅವಳನ್ನೇ ಮುಗಿಸಿ ಈಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ