ಬೆಂಗಳೂರು: ಒಂದೊಂದೇ ಕಥೆ ಕಟ್ಟಿ ಅಮಾಯಕರಿಗೆ ಮೋಸ ಮಾಡ್ತಿದ್ದ ಕಿಲಾಡಿ ಜೋಡಿ ಅರೆಸ್ಟ್

| Updated By: ರಮೇಶ್ ಬಿ. ಜವಳಗೇರಾ

Updated on: Aug 13, 2023 | 2:02 PM

ರಾಜಕಾರಣಿಗಳ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ವಂಚನೆ ಮಾಡುತ್ತಿದ್ದ ದಂಪತಿಯನ್ನು ಬೆಂಗಳೂರಿನ ಹೆಚ್​ಎಎಲ್ ಪೊಲೀಸರು ಬಂಧಿಸಿದ್ದಾರೆ. ಪ್ರಾರಂಭದಲ್ಲಿ ಸ್ವಲ್ಪದಿನ ಹಣ ಕೊಟ್ಟು ನಂಬಿಕೆ ಗಳಿಸುತ್ತಿದ್ದ ದಂಪತಿ, ಹೆಚ್ಚು ಹಣ ಬಂದ ಬಳಿಕ ಬೇರೆ ಕಡೆ ಪರಾರಿಯಾಗುತ್ತಿದ್ದರು.

ಬೆಂಗಳೂರು, (ಆಗಸ್ಟ್ 13): ರಾಜಕಾರಣಿಗಳ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ವಂಚನೆ ಮಾಡುತ್ತಿದ್ದ ದಂಪತಿ(Couple) ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದೆ. ಬೆಂಗಳೂರಿನಲ್ಲಿ (Bengaluru) ವಾಸವಿರುವ ಕೇರಳ ಮೂಲದ ಬಾಬು, ಶಿಲ್ಪಾ ದಂಪತಿ ಚೈನ್ ಲಿಂಕ್ ಮೂಲಕ ಜನರಿಗೆ ಮೋಸ ಮಾಡುತ್ತಿತ್ತು. ಆರ್​​ಎಲ್​ಜೆಪಿ ಅಧ್ಯಕ್ಷೆ ಎಂದು ಹೇಳಿಕೊಂಡಿದ್ದ ಆರೋಪಿತೆ ಶಿಲ್ಪಾ, NDA ರಾಷ್ಟ್ರೀಯ ಕಮಿಟಿ ಸದಸ್ಯೆ ಎಂದು ಸಹ ಹೇಳಿಕೊಂಡು ಮೋಸ ಮಾಡುತ್ತಿದ್ದಳು. ರಾಜಕಾರಣಿಗಳ ಜೊತೆಗೆ ಫೋಟೋ ತೆಗೆಸಿಕೊಂಡಿದನ್ನೇ ಬಂಡವಾಳ ಮಾಡಿಕೊಂಡಿದ್ದ ದಂಪತಿ, ಜ್ಯೋತಿಷ್ಯದ ಕಥೆ ಕಟ್ಟಿ ಮನೆಯವರ ಬಳಿ ಕ್ಲೋಸ್ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸುವುದಾಗಿ ವಂಚನೆ ಮಾಡುತ್ತಿದ್ದರು.

ಪ್ರಾರಂಭದಲ್ಲಿ ಸ್ವಲ್ಪದಿನ ಹಣ ಕೊಟ್ಟು ನಂಬಿಕೆ ಗಳಿಸುತ್ತಿದ್ದ ದಂಪತಿ, ಹೆಚ್ಚು ಹಣ ಬಂದ ಬಳಿಕ ಬೇರೆ ಕಡೆ ಪರಾರಿಯಾಗುತ್ತಿದ್ದರು. ಅಲ್ಲದೇ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿಸಿಕೊಡುವುದು ಸೇರಿದಂತೆ ಬೇರೆ ಬೇರೆ ಮಾದರಿಯಲ್ಲಿ ಅಮಾಯಕರಿಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ಪಶ್ಚಿಮ ವಿಭಾಗದಲ್ಲೂ ದಂಪತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಒಬ್ಬರು ದೂರು ಕೊಡ್ತಿದ್ದಂತೆ ಇವರು ಜಾಮೀನು ಪಡೆದುಕೊಳ್ಳುತ್ತಿದ್ದರು. ಇದೀಗ ಈ ಕಿಲಾಡಿ ಜೋಡಿಯನ್ನು ಹೆಚ್​ಎಎಲ್ ಪೊಲೀಸರು ಬಂಧಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ