VIDEO: ಎದ್ದು ಬಿದ್ದು ಓಡಿದರೂ ರನೌಟ್ ಆದ ಪಾಕ್ ಬ್ಯಾಟರ್
Bangladesh vs Pakistan, 1st T20I: ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಹೀನಾಯ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ 19.3 ಓವರ್ಗಳಲ್ಲಿ 109 ರನ್ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು 15.3 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಬಾಂಗ್ಲಾದೇಶ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಢಾಕಾದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಹೀನಾಯ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಪರ ಅತೀ ಹೆಚ್ಚು ರನ್ ಕಲೆಹಾಕಿದ್ದು ಆರಂಭಿಕ ದಾಂಡಿಗ ಫಖರ್ ಝಮಾನ್. 34 ಎಸೆತಗಳನ್ನು ಎದುರಿಸಿ 44 ರನ್ ಬಾರಿಸಿ ಕ್ರೀಸ್ ಕಚ್ಚಿ ನಿಂತಿದ್ದ ಫಖರ್ನನ್ನು ರನೌಟ್ ಮಾಡಿದ್ದು ಖುಷ್ದಿಲ್ ಶಾ.
ಪಂದ್ಯದ 12ನೇ ಓವರ್ನಲ್ಲಿ ಖುಷ್ದಿಲ್ ಶಾ ಥರ್ಡ್ಮ್ಯಾನ್ನತ್ತ ಬಾರಿಸಿ 2 ರನ್ಗಳಿಗೆ ಕರೆ ನೀಡಿದರು. ಅತ್ತ ಖುಷ್ದಿಲ್ ಮಾತು ಕೇಳಿ ಫಖರ್ ಝಮಾನ್ 2ನೇ ರನ್ಗಾಗಿ ಕ್ರೀಸ್ ಬಿಟ್ಟಿದ್ದಾರೆ. ಆದರೆ ಈ ವೇಳೆ ರನ್ ಓಡಲು ಖುಷ್ದಿಲ್ ನಿರಾಕರಿಸಿದರು. ಅತ್ತ ತಿರುಗಿ ಓಡುವಷ್ಟರಲ್ಲಿ ನೆಲಕ್ಕುರುಳಿದ ಫಖರ್ ಝಮಾನ್ ಸಂಭಾಳಿಸಿಕೊಂಡು ಕ್ರೀಸ್ಗೆ ತಲುಪುವಷ್ಟರಲ್ಲಿ ರನೌಟ್ ಆದರು. ಇದೀಗ ಈ ರನೌಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ 19.3 ಓವರ್ಗಳಲ್ಲಿ 109 ರನ್ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು 15.3 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಬಾಂಗ್ಲಾದೇಶ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

