ಯೆಲ್ಲೋ ಬೋರ್ಡ್ ಚಿತ್ರವನ್ನು ನೋಡಿ ಸುದೀಪ್ ಇಷ್ಟಪಟ್ಟಿದ್ದಾರೆ ಎಂದ ನಟ ಪ್ರದೀಪ್
ಪ್ರದೀಪ್ ಅಭಿನಯದ ‘ಯೆಲ್ಲೋ ಬೋರ್ಡ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಆಗಮಿಸಿದ್ದಾರೆ. ಈ ಚಿತ್ರವನ್ನು ಈಗಾಗಲೇ ಸುದೀಪ್ ವೀಕ್ಷಣೆ ಮಾಡಿದ್ದಾರೆ.
ಕಿಚ್ಚ ಸುದೀಪ್ಗೆ (Kichcha Sudeep) ಗೆಳೆಯರ ಬಳಗ ದೊಡ್ಡದಿದೆ. ಗೆಳೆಯರ ಬಳಗದಲ್ಲಿರುವವರಿಗೆ ಬೆನ್ನು ತಟ್ಟುವ ಕೆಲಸ ಮಾಡುತ್ತಾರೆ ಕಿಚ್ಚ. ನಟ ಪ್ರದೀಪ್ ಕೂಡ ಸುದೀಪ್ಗೆ ಹೆಚ್ಚು ಆಪ್ತರು. ಪ್ರದೀಪ್ ಅಭಿನಯದ ‘ಯೆಲ್ಲೋ ಬೋರ್ಡ್’ ಸಿನಿಮಾ ರಿಲೀಸ್ಗೆ ರೆಡಿ ಇದ್ದು, ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಆಗಮಿಸಿದ್ದಾರೆ. ಸಿನಿಮಾ ಬಗ್ಗೆ ಪ್ರದೀಪ್ಗೆ ನಿರೀಕ್ಷೆ ಇದೆ. ಈ ಸಿನಿಮಾವನ್ನು ಈಗಾಗಲೇ ಸುದೀಪ್ ವೀಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರದೀಪ್ (Actor Pradeep), ‘ಈ ಸಿನಿಮಾ ಸಮಾಜದಲ್ಲಿ ಬದಲಾವಣೆ, ಸುಧಾರಣೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲು ಸಿನಿಮಾ ನೋಡಿದ್ದು ಸುದೀಪ್. ಅವರು ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ. ಸಿನಿಮಾ ನೋಡಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ’ ಎಂದರು.
ಇದನ್ನೂ ಓದಿ: 26 Years Of Sudeepism: ‘ಸುದೀಪ್ ಚಿತ್ರರಂಗದ ಪಯಣಕ್ಕೆ 26 ವರ್ಷ’; ಪತ್ನಿ ಪ್ರಿಯಾಗೆ ಧನ್ಯವಾದ ಹೇಳಿದ ಕಿಚ್ಚ
‘ಯಾಕ್ರಿ ನಿಮಗೆ ಇಷ್ಟು ಗಾಂಚಲಿ ಅಂತ ಕೇಳ್ತಾರೆ, ಎಲ್ಲವೂ ಇವರಿಂದಾನೆ’: ವೇದಿಕೆಯಲ್ಲಿ ಸುದೀಪ್ ಓಪನ್ ಮಾತು