ಸುದೀಪ್ ವೃತ್ತಿ ಜೀವನಕ್ಕೆ 30 ವರ್ಷ; ಜೀ ಕನ್ನಡ ಕುಟುಂಬ ಅವಾರ್ಡ್ಸ್ ಮೇಲೆ ವಿಶೇಷ ಗೌರವ

Updated on: Oct 30, 2026 | 9:08 AM

ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ಅವರು ಸಿನಿಮಾರಂಗದಲ್ಲಿ ಮೂರು ದಶಕಗಳ ಯಶಸ್ವಿ ಪ್ರಯಾಣ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, ಜೀ ಕನ್ನಡ ಕುಟುಂಬ ಅವಾರ್ಡ್ಸ್ ವೇದಿಕೆಯಲ್ಲಿ ಅತ್ಯಂತ ವಿಶೇಷವಾಗಿ ಸನ್ಮಾನಿಸಲಾಗಿದೆ. ಅಭಿಮಾನಿಗಳು ಮತ್ತು ವಿಶೇಷ ಚೇತನ ಮಕ್ಕಳ ಪ್ರೀತಿಯನ್ನು ಸ್ವೀಕರಿಸಿ ಭಾವುಕರಾದ ಸುದೀಪ್ ಹಾಡೊಂದನ್ನು ಹಾಡಿ ಎಲ್ಲರನ್ನು ರಂಜಿಸಿದರು.

ಜನಪ್ರಿಯ ನಟ ಕಿಚ್ಚ ಸುದೀಪ್ ಅವರು ಸಿನಿಮಾರಂಗದಲ್ಲಿ ಯಶಸ್ವಿ 30 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಈ ವಿಶೇಷ ಮೈಲಿಗಲ್ಲನ್ನು ಗುರುತಿಸಿ, ‘ಜೀ ಕನ್ನಡ ಕುಟುಂಬ ಅವಾರ್ಡ್ಸ್-2026’ ವೇದಿಕೆಯಲ್ಲಿ ಅವರಿಗೆ ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಗೌರವಾರ್ಪಣೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರ ಮೂರು ದಶಕಗಳ ಸುದೀರ್ಘ ಸಿನಿಮಾ ಪ್ರಯಾಣವನ್ನು ನೆನೆಯುತ್ತಾ, ಅದ್ಭುತವಾದ ಸಂಗೀತ ನಮನ ನೀಡಲಾಯಿತು. ಈ ಸಂಗೀತದ ಮೂಲಕ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಸುದೀಪ್ ಅವರು ಭಾವುಕರಾದರು.

ಇದೇ ವೇದಿಕೆಯಲ್ಲಿ ನೆಚ್ಚಿನ ನಟನಿಗೆ ಅಭಿಮಾನಿಗಳು ಹಾಗೂ ವಿಶೇಷ ಚೇತನ ಮಕ್ಕಳು ಒಟ್ಟಾಗಿ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಅಭಿಮಾನಿಗಳ ಈ ಅಪಾರ ಪ್ರೀತಿಯನ್ನು ಸ್ವೀಕರಿಸಿ ಭಾವುಕರಾದ ಸುದೀಪ್, ನಿರೂಪಕಿಯ ಕೋರಿಕೆಯ ಮೇರೆಗೆ ತಮ್ಮ ಕಂಠದಲ್ಲೇ ಮಧುರ ಹಾಡೊಂದನ್ನು ಹಾಡಿ ಇಡೀ ಸಭೆಯನ್ನು ರಂಜಿಸಿದರು. ಶನಿವಾರ ಹಾಗೂ ಭಾನುವಾರ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್-2026’ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 30, 2026 09:06 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More