ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಸ್ಪರ್ಧಿಗಳ ಮೇಲೆ ಅಬ್ಬರಿಸಿದ ಕಿಚ್ಚ
ಬಿಗ್ಬಾಸ್ ಕನ್ನಡ ಸೀಸನ್ 11 ರ ಎರಡನೇ ವಾರದ ಪಂಚಾಯ್ತಿ ಇಂದು (ಅಕ್ಟೋಬರ್ 12) ನಡೆಯಲಿದೆ. ಕಳೆದ ವಾರ ಲಾಯರ್ ಜಗದೀಶ್ ಮೇಲೆ ಅಬ್ಬರಿಸಿದ್ದ ಕಿಚ್ಚ ಸುದೀಪ್, ಎರಡನೇ ವಾರವೂ ಸಹ ಕೆಲ ಸ್ಪರ್ಧಿಗಳ ಮೇಲೆ ಅಬ್ಬರಿಸಿರುವುದು ಹೊಸ ಪ್ರೋಮೋದಿಂದ ತಿಳಿದು ಬರುತ್ತಿದೆ. ರಾತ್ರಿ 9ಕ್ಕೆ ಎಪಿಸೋಡ್ ಪ್ರಸಾರ ಆಗಲಿದೆ.
ಬಿಗ್ಬಾಸ್ ಕನ್ನಡ ಸೀಸನ್ 11 ರ ಎರಡನೇ ಕಿಚ್ಚನ ಪಂಚಾಯ್ತಿ ಇಂದು (ಅಕ್ಟೋಬರ್ 12) ನಡೆಯಲಿದೆ. ಮೊದಲನೇ ಕಿಚ್ಚನ ಪಂಚಾಯ್ತಿಯಲ್ಲಿ ಲಾಯರ್ ಜಗದೀಶ್ ವಿರುದ್ಧ ಅಬ್ಬರಿಸಿದ್ದರು ಕಿಚ್ಚ ಸುದೀಪ್. ‘ಶೋ ಬಂದ್ ಮಾಡಿಸ್ತೀನಿ’ ಎಂದು ಚಾಲೆಂಜ್ ಮಾಡಿದ್ದ ಜಗದೀಶ್ಗೆ ನೇರವಾಗಿಯೇ ‘ನಿಮ್ಮ ಅಪ್ಪನ ಕೈಯಲ್ಲೂ ಸಾಧ್ಯವಿಲ್ಲ’ ಎಂದಿದ್ದರು. ಇದೀಗ ಎರಡನೇ ವಾರಕ್ಕ ಕಿಚ್ಚ ಬಂದಿದ್ದಾರೆ. ಎರಡೆನೇ ವಾರದಲ್ಲಿಯೂ ಸಹ ಮನೆಯಲ್ಲಿ ಸಾಕಷ್ಟು ಜಗಳ, ಗಲಾಟೆ, ಕೆಲವರ ಕಿತ್ತಾಟ ಇನ್ನಿತರೆಗಳು ನಡೆದಿವೆ. ಕೆಲವರು ಇತರೆ ಸ್ಪರ್ಧಿಗಳ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು ಸಹ ಇದೆ. ಇದೀಗ ಎರಡನೇ ವಾರದ ಪಂಚಾಯ್ತಗೆ ಆಗಮಿಸಿರುವ ಕಿಚ್ಚ, ಕಳೆದ ಬಾರಿಯಂತೆಯೇ ಕೆಲ ಸ್ಪರ್ಧಿಗಳ ಮೇಲೆ ಅಬ್ಬರಿಸಿದ್ದಾರೆ. ಅಲ್ಲದೆ ‘ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Sat, 12 October 24