‘ಕಪ್ ನಮ್ಮದಾಯ್ತು’; ಆರ್​ಸಿಬಿ ಗೆದ್ದ ಬಳಿಕ ಕೊಹ್ಲಿ ತಂಡಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು ನೋಡಿ

Updated on: Mar 18, 2024 | 8:31 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಕಪ್ ಗೆದ್ದಿದೆ. ಈ ಮೊಲಕ ಇದೇ ಮೊದಲ ಬಾರಿಗೆ ಆರ್​ಸಿಬಿ ತಂಡ ಕಪ್ ಎತ್ತಿದೆ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಸಿಸಿಎಲ್ ಫೈನಲ್ ಪಂದ್ಯ ಮುಗಿದ ಬಳಿಕ ಅವರು ವೇದಿಕೆ ಏರಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರು ಆರ್​ಸಿಬಿ ಮೆನ್ಸ್ ತಂಡಕ್ಕೆ ಮುಂದಿರುವ ಚಾಲೆಂಜ್ ಏನು ಎಂಬುದನ್ನು ಹೇಳಿದ್ದಾರೆ.

‘ಈ ಸಲ ಕಪ್ ನಮ್ದೇ’ ಎಂದು ಇಷ್ಟು ದಿನ ಹೇಳಲಾಗುತ್ತಿತ್ತು. ಅಂತೆಯೇ ಈಗ ಕಪ್ ನಮ್ಮದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡ ಕಪ್ ಗೆದ್ದಿದೆ. ಈ ಮೊಲಕ ಇದೇ ಮೊದಲ ಬಾರಿಗೆ ಆರ್​ಸಿಬಿ ತಂಡ ಕಪ್ ಎತ್ತಿದೆ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಸಿಸಿಎಲ್ ಫೈನಲ್ ಪಂದ್ಯ ಮುಗಿದ ಬಳಿಕ ಅವರು ವೇದಿಕೆ ಏರಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರು ಆರ್​ಸಿಬಿ ಮೆನ್ಸ್ ತಂಡಕ್ಕೆ ಮುಂದಿರುವ ಚಾಲೆಂಜ್ ಏನು ಎಂಬುದನ್ನು ಹೇಳಿದ್ದಾರೆ. ‘ಇಷ್ಟು ದಿನ ಕಪ್ ನಮ್ಮದೇ ನಮ್ಮದೇ ಅಂತಿದ್ವಿ. ಈಗ ಕಪ್ ನಮ್ಮದಾಗಿದೆ. ಈಗ ಬಾಯ್ಸ್ ತಂಡದ ಮೇಲೆ ಸಾಕಷ್ಟು ಒತ್ತಡ ಇದೆ’ ಎಂದಿದ್ದಾರೆ. ಈ ಮೂಲಕ ಅವರು ಬಾಯ್ಸ್ ತಂಡಕ್ಕೆ ಈ ಸಲ ಕಪ್ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More