ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​ಗೆ ಹನುಮಂತ ಫಿದಾ

Updated on: Jan 03, 2025 | 8:31 PM

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳಿಗೆ ವಿಶೇಷವಾದ ಪ್ರೀತಿ ತೋರಿಸುತ್ತಾರೆ. ಪ್ರತಿ ಸೀಸನ್​ ಕೊನೆಗೊಳ್ಳುವಾಗಲೂ ಅವರು ಸ್ಪರ್ಧಿಗಳಿಗಾಗಿ ಅಡುಗೆ ಮಾಡಿ ಕಳಿಸುತ್ತಾರೆ. ಅದು ಈ ಸೀಸನ್​ನಲ್ಲೂ ಮುಂದುವರಿದಿದೆ. ಸುದೀಪ್ ಅವರು ತಮ್ಮ ಕೈಯಾರೆ ತಯಾರಿಸಿದ ಊಟವನ್ನು ದೊಡ್ಮನೆಗೆ ಕಳಿಸಿಕೊಟ್ಟಿದ್ದಾರೆ. ಅದನ್ನು ಸವಿದು ಮನೆ ಮಂದಿ ಖುಷಿಪಟ್ಟಿದ್ದಾರೆ.

ಬಿಗ್ ಬಾಸ್ ಮನೆ ಮಂದಿಗೆ ಕಿಚ್ಚನ ಕೈ ರುಚಿ ಸವಿಯುವ ಅವಕಾಶ ಸಿಕ್ಕಿದೆ. ಪ್ರತಿ ಸದಸ್ಯರ ಹೆಸರು ಬರೆದು ಊಟವನ್ನು ಕಳಿಸಲಾಗಿದೆ. ಕಿಚ್ಚ ಸುದೀಪ್​ ಕಡೆಯಿಂದ ಈ ಪರಿ ಪ್ರೀತಿ ಸಿಕ್ಕಿದ್ದಕ್ಕೆ ಹನುಮಂತ, ತ್ರಿವಿಕ್ರಮ್, ಗೌತಮಿ ಜಾದವ್, ಮೋಕ್ಷಿತಾ, ಚೈತ್ರಾ ಕುಂದಾಪುರ, ಭವ್ಯಾ ಗೌಡ, ಉಗ್ರಂ ಮಂಜು, ಧನರಾಜ್, ರಜತ್ ಅವರು ಖುಷಿಪಟ್ಟಿದ್ದಾರೆ. ‘ನಾವು ಬಿಗ್ ಬಾಸ್ ಮನೆಗೆ ಬಂದಿದ್ದಕ್ಕೆ ಸಾರ್ಥಕ ಆಯಿತು’ ಎಂದು ಹನುಮಂತ ಅವರು ಹೇಳಿದ್ದಾರೆ. ಜ.3ರ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More