ಚಕ್ರವರ್ತಿ ಚಂದ್ರಚೂಡ್ ಬಗ್ಗೆ ಸುದೀಪ್ಗೆ ಇದ್ದ ಅಭಿಪ್ರಾಯ ಏನು? ಅದು ಬದಲಾಗಿದ್ದೇಕೆ?
ಚಕ್ರವರ್ತಿ ಚಂದ್ರಚೂಡ್ ಅವರು ‘ಬಿಗ್ ಬಾಸ್’ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಸುದೀಪ್ ಜೊತೆ ಅವರು ಅನ್ಯೋನ್ಯತೆ ಹೊಂದಿದ್ದಾರೆ.ಚಕ್ರವರ್ತಿ ನಿರ್ದೇಶನದ ‘ಹುಲಿ ನಾಯಕ’ ಮೋಷನ್ ಪೋಸ್ಟರ್ ಲಾಂಚ್ಗೆ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಚಕ್ರವರ್ತಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಅವರು ‘ಬಿಗ್ ಬಾಸ್’ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಸುದೀಪ್ ಜೊತೆ ಅವರು ಅನ್ಯೋನ್ಯತೆ ಹೊಂದಿದ್ದಾರೆ. ಅನೇಕ ಕಡೆಗಳಲ್ಲಿ ಸುದೀಪ್ ಹಾಗೂ ಚಕ್ರವರ್ತಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಚಕ್ರವರ್ತಿ ನಿರ್ದೇಶನದ ‘ಹುಲಿ ನಾಯಕ’ (Huli Nayaka Movie) ಮೋಷನ್ ಪೋಸ್ಟರ್ ಲಾಂಚ್ಗೆ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಚಕ್ರವರ್ತಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಬಿಗ್ ಬಾಸ್ (Bigg Boss) ಮನೆಗೆ ಚಕ್ರವರ್ತಿ ಬಂದಾಗ ಒಂದು ವಾರ ಅವರನ್ನು ಗಮನಿಸಿದೆ. ಆಗ ಬೇರೆ ರೀತಿಯ ಅಭಿಪ್ರಾಯ ಇತ್ತು. ಆ ಬಳಿಕ ಮೊದಲ ವೀಕೆಂಡ್ನಲ್ಲಿ ಅವರ ಜೊತೆ ಮಾತನಾಡಿದೆ. ಆಗ ನನಗೆ ಬೇರೆಯದೇ ಚಕ್ರವರ್ತಿ ಕಂಡರು. ಇವರು ಒಪ್ಪಿಕೊಳ್ಳಲ್ಲ, ಒಪ್ಪಿಕೊಂಡಮೇಲೆ ಬಿಡಲ್ಲ ಅನ್ನೋದು ಗೊತ್ತಾಯ್ತು. ಇವರು ಸ್ಮಾರ್ಟ್ ಅನ್ನೋದು ಗೊತ್ತಾಯ್ತು’ ಎಂದಿದ್ದಾರೆ ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos