ಚಕ್ರವರ್ತಿ ಚಂದ್ರಚೂಡ್ ಬಗ್ಗೆ ಸುದೀಪ್​ಗೆ ಇದ್ದ ಅಭಿಪ್ರಾಯ ಏನು? ಅದು ಬದಲಾಗಿದ್ದೇಕೆ?

Updated on: Sep 02, 2023 | 10:25 AM

ಚಕ್ರವರ್ತಿ ಚಂದ್ರಚೂಡ್ ಅವರು ‘ಬಿಗ್ ಬಾಸ್’ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಸುದೀಪ್ ಜೊತೆ ಅವರು ಅನ್ಯೋನ್ಯತೆ ಹೊಂದಿದ್ದಾರೆ.ಚಕ್ರವರ್ತಿ ನಿರ್ದೇಶನದ ‘ಹುಲಿ ನಾಯಕ’ ಮೋಷನ್ ಪೋಸ್ಟರ್ ಲಾಂಚ್​ಗೆ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಚಕ್ರವರ್ತಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಚಕ್ರವರ್ತಿ ಚಂದ್ರಚೂಡ್ ಅವರು ‘ಬಿಗ್ ಬಾಸ್’ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಸುದೀಪ್ ಜೊತೆ ಅವರು ಅನ್ಯೋನ್ಯತೆ ಹೊಂದಿದ್ದಾರೆ. ಅನೇಕ ಕಡೆಗಳಲ್ಲಿ ಸುದೀಪ್ ಹಾಗೂ ಚಕ್ರವರ್ತಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಚಕ್ರವರ್ತಿ ನಿರ್ದೇಶನದ ‘ಹುಲಿ ನಾಯಕ’ (Huli Nayaka Movie) ಮೋಷನ್ ಪೋಸ್ಟರ್ ಲಾಂಚ್​ಗೆ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಚಕ್ರವರ್ತಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಬಿಗ್ ಬಾಸ್ (Bigg Boss) ಮನೆಗೆ ಚಕ್ರವರ್ತಿ ಬಂದಾಗ ಒಂದು ವಾರ ಅವರನ್ನು ಗಮನಿಸಿದೆ. ಆಗ ಬೇರೆ ರೀತಿಯ ಅಭಿಪ್ರಾಯ ಇತ್ತು. ಆ ಬಳಿಕ ಮೊದಲ ವೀಕೆಂಡ್​ನಲ್ಲಿ ಅವರ ಜೊತೆ ಮಾತನಾಡಿದೆ. ಆಗ ನನಗೆ ಬೇರೆಯದೇ ಚಕ್ರವರ್ತಿ ಕಂಡರು. ಇವರು ಒಪ್ಪಿಕೊಳ್ಳಲ್ಲ, ಒಪ್ಪಿಕೊಂಡಮೇಲೆ ಬಿಡಲ್ಲ ಅನ್ನೋದು ಗೊತ್ತಾಯ್ತು. ಇವರು ಸ್ಮಾರ್ಟ್ ಅನ್ನೋದು ಗೊತ್ತಾಯ್ತು’ ಎಂದಿದ್ದಾರೆ ಸುದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More