‘ಚಿತ್ರರಂಗವನ್ನು ಬೆಳೆಸಲಾಗಲಿಲ್ಲ ಎಂದರೆ ಅದನ್ನು ಕಾಪಾಡಿಕೊಂಡು ಹೋಗಿ’; ಸಂಚಿತ್ಗೆ ಸುದೀಪ್ ಕಿವಿಮಾತು
ಸಂಚಿತ್ ಬಗ್ಗೆ ಸುದೀಪ್ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲ, ಚಿತ್ರರಂಗದಲ್ಲಿ ಹೇಗಿರಬೇಕು, ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಕುರಿತು ಸಂಚಿತ್ಗೆ ತಿಳಿಸಿ ಹೇಳಿದ್ದಾರೆ.
ಕಿಚ್ಚ ಸುದೀಪ್ (Kichcha Sudeep) ಅವರು ಅನೇಕರಿಗೆ ಕಿವಿ ಮಾತು ಹೇಳುತ್ತಾರೆ. ಈಗ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ, ಸಂಚಿತ್ ಬಗ್ಗೆ ಸುದೀಪ್ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲ, ಚಿತ್ರರಂಗದಲ್ಲಿ ಹೇಗಿರಬೇಕು, ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಕುರಿತು ಸಂಚಿತ್ಗೆ ತಿಳಿಸಿ ಹೇಳಿದ್ದಾರೆ. ‘ಈ ಚಿತ್ರರಂಗವನ್ನು ಅನೇಕರು ಬೆಳೆಸಿದ್ದಾರೆ. ಅವರನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಚಿತ್ರರಂಗವನ್ನು ಬೆಳೆಸಲಾಗಲಿಲ್ಲ ಎಂದರೂ ಕನಿಷ್ಠ ಅದನ್ನು ಕಾಪಾಡಿಕೊಂಡು ಹೋಗಬೇಕು’ ಎಂದಿದ್ದಾರೆ ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ