ಹತ್ತು ಹೀರೋನ ಹಿಂದಿಕ್ಕಿ ಹೋಗುವ ತಾಕತ್ತು ಮಂಜು ಪಾವಗಡಗೆ ಇದೆ: ಸುದೀಪ್
ದೊಡ್ಮನೆಯಲ್ಲಿದ್ದಾಗ ಸುದೀಪ್ ಅವರು ಮಂಜು ಕಾಲನ್ನು ಸಾಕಷ್ಟು ಬಾರಿ ಎಳೆದಿದ್ದರು. ಈಗ ‘ಉಸಿರೇ ಉಸಿರೇ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲೂ ಸುದೀಪ್ ಅವರು ಮಂಜು ಬಗ್ಗೆ ಮಾತನಾಡಿದ್ದಾರೆ.
ಮಂಜು ಪಾವಗಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ವಿನ್ನರ್ ಆಗಿದ್ದರು. ದೊಡ್ಮನೆಯಲ್ಲಿದ್ದಾಗ ಸುದೀಪ್ ಅವರು ಮಂಜು ಕಾಲನ್ನು ಸಾಕಷ್ಟು ಬಾರಿ ಎಳೆದಿದ್ದರು. ಈಗ ‘ಉಸಿರೇ ಉಸಿರೇ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲೂ ಸುದೀಪ್ ಅವರು ಮಂಜು ಬಗ್ಗೆ ಮಾತನಾಡಿದ್ದಾರೆ. ರಾಜೀವ್ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಸುದೀಪ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ‘ನನ್ನ ಸಹೋದರ ರಾಜೀವ್ (Rajeev) ಮಾಡಿದ ಸಿನಿಮಾ. ತಂಡಕ್ಕೆ ಒಳ್ಳೆಯದಾಗಲಿ. ಟ್ರೇಲರ್ ನೋಡಿ ಖುಷಿ ಆಯ್ತು. ಹಲವು ಕಲಾವಿದರು ಇದರಲ್ಲಿದ್ದಾರೆ. ಮಂಜು ಕೂಡ ನಟಿಸಿದ್ದಾರೆ. ಮಾತನಾಡೋಕೆ ಬರಲ್ಲ ಎಂದು ಹೇಳುತ್ತಲೇ ಬಿಗ್ ಬಾಸ್ ಗೆದ್ದರು. ಹತ್ತು ಹೀರೋನ ಹಿಂದಿಕ್ಕಿ ಮುಂದೆ ಹೋಗುವ ತಾಕತ್ತು ಅವರಿಗೆ ಇದೆ’ ಎಂದರು ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos