ಯಾದಗಿರಿಯಲ್ಲಿ ಮೂಢನಂಬಿಕೆ ಜೀವಂತ! ದೆವ್ವ ಬಿಡಿಸಲು ಯುವಕನನ್ನು ಅರೆಬೆತ್ತಲೆಗೊಳಿಸಿ ಥಳಿಸಿದ ಜನ

ಯಾದಗಿರಿಯಲ್ಲಿ ಮೂಢನಂಬಿಕೆ ಜೀವಂತ! ದೆವ್ವ ಬಿಡಿಸಲು ಯುವಕನನ್ನು ಅರೆಬೆತ್ತಲೆಗೊಳಿಸಿ ಥಳಿಸಿದ ಜನ

ಅಮೀನ್​ ಸಾಬ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 29, 2023 | 3:39 PM

ಯಾದಗಿರಿ(Yadagiri) ನಗರದ ಅಂಬೇಡ್ಕರ್ ವೃತ್ತದ ಬಳಿ ದೆವ್ವ ಬಿಡಿಸುವ ನೆಪದಲ್ಲಿ ಯುವಕನನ್ನು ಅರೆಬೆತ್ತಲೆಗೊಳಿಸಿ, ರಸ್ತೆ ಮಧ್ಯೆದಲ್ಲಿ ಕೈ-ಕಾಲು ಕಟ್ಟಿ ಸಂಬಂಧಿಕರು ಹಾಗೂ ಜನರು ಹಿಗ್ಗಾಮುಗ್ಗಾ ಮನಸೋ ಇಚ್ಛೆ ಹೊಡೆದಿದ್ದಾರೆ. ಮುಂದುವರೆದ ತಂತ್ರಜ್ಞಾನ ಯುಗದಲ್ಲಿಯೂ ಇಂತಹ ಮೂಡಾಚರಣೆ ಇನ್ನೂ ನಿಂತಿಲ್ಲ.

ಯಾದಗಿರಿ, ಅ.29: ಮೂಢನಂಬಿಕೆಯಿಂದ ಹೊರ ಬಂದು ಕಂಪ್ಯೂಟರ್​ ಯುಗದಲ್ಲಿದ್ದರು, ಕೆಲವೊಂದು ಕಡೆಗಳಲ್ಲಿ ಇನ್ನೂ ಜೀವಂತವಾಗಿದೆ. ಅದಕ್ಕೆ ಉತ್ತಮ ಉದಾಹರಣೆ ಎಂಬಂತೆ ಯಾದಗಿರಿ(Yadagiri) ನಗರದ ಅಂಬೇಡ್ಕರ್ ವೃತ್ತದ ಬಳಿ ದೆವ್ವ ಬಿಡಿಸುವ ನೆಪದಲ್ಲಿ ಯುವಕನನ್ನು ಅರೆಬೆತ್ತಲೆಗೊಳಿಸಿ, ರಸ್ತೆ ಮಧ್ಯೆದಲ್ಲಿ ಕೈ-ಕಾಲು ಕಟ್ಟಿ ಸಂಬಂಧಿಕರು ಹಾಗೂ ಜನರು ಹಿಗ್ಗಾಮುಗ್ಗಾ ಮನಸೋ ಇಚ್ಛೆ ಹೊಡೆದಿದ್ದಾರೆ. ಮುಂದುವರೆದ ತಂತ್ರಜ್ಞಾನ ಯುಗದಲ್ಲಿಯೂ ಇಂತಹ ಮೂಡಾಚರಣೆ ಇನ್ನೂ ನಿಂತಿಲ್ಲ. ನಂತರ ಸ್ಥಳಕ್ಕೆ ಯಾದಗಿರಿ ಪೋಲಿಸರು ಭೇಟಿ ನೀಡಿ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆ ಯಾದಗಿರಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ