‘ಮೊದಲ ಬಾರಿ ನಾನು ಅಪ್ಸೆಟ್ ಆಗಿಲ್ಲ’; ಸಿಸಿಎಲ್ ಫಿನಾಲೆ ಬಳಿಕ ಸುದೀಪ್ ಹೇಳಿದ್ದು ಹೀಗೆ

|

Updated on: Mar 18, 2024 | 12:21 PM

ಸಾಮಾನ್ಯವಾಗಿ ಕ್ರಿಕೆಟ್ ಮ್ಯಾಚ್​ಗಳನ್ನು ಸೋತಾಗ ತಂಡದವರು ಬೇಸರ ಮಾಡಿಕೊಳ್ಳುತ್ತಾರೆ. ಕಿಚ್ಚ ಸುದೀಪ್ ಅವರ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್​’ನ ಫಿನಾಲೆಯಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಸೋತಿದೆ. ಕೇವಲ 12 ರನ್​ಗಳ ಸೋಲಿನ ಬಳಿಕ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ.

ಸಾಮಾನ್ಯವಾಗಿ ಕ್ರಿಕೆಟ್ ಮ್ಯಾಚ್​ಗಳನ್ನು ಸೋತಾಗ ತಂಡದವರು ಬೇಸರ ಮಾಡಿಕೊಳ್ಳುತ್ತಾರೆ. ಕಿಚ್ಚ ಸುದೀಪ್ ಅವರ ‘ಕರ್ನಾಟಕ ಬುಲ್ಡೋಜರ್ಸ್’ (Karnataka Buldozer) ತಂಡ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್​’ನ ಫಿನಾಲೆಯಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಸೋತಿದೆ. ಕೇವಲ 12 ರನ್​ಗಳ ಸೋಲಿನ ಬಳಿಕ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ‘ನನಗೆ ಸೋಲಿನ ಬಗ್ಗೆ ಬೇಸರ ಇಲ್ಲ. ಮೊದಲ ಬಾರ ನಾನು ಅಪ್ಸೆಟ್ ಆಗಿಲ್ಲ. ಫೈನಲ್ ಮ್ಯಾಚ್ ಎಂದರೆ ಹೀಗೆ ಇರಬೇಕು. ಬೆಂಗಾಲ್ ಟೈಗರ್ಸ್ ತಂಡ ಉತ್ತಮವಾಗಿ ಆಡಿದೆ’ ಎಂದು ಸುದೀಪ್ ಹೇಳಿದ್ದಾರೆ. ಇದೇ ವೇಳೆ ಕಪ್ ಗೆದ್ದ ‘ಆರ್​ಬಿಸಿ’ ಮಹಿಳಾ ತಂಡಕ್ಕೆ ಅವರು ಶುಭ ಹಾರೈಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ