‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ ಸುದೀಪ್​

Updated on: Sep 20, 2024 | 10:48 PM

ಒಂದಷ್ಟು ಕೆಟ್ಟ ಕಾರಣಗಳಿಂದ ಕನ್ನಡ ಚಿತ್ರರಂಗ ಸುದ್ದಿ ಆಗಿದೆ ಎಂಬುದು ನಿಜ. ಆದರೆ ಚಿತ್ರರಂಗ ಎಂದರೆ ಕೇವಲ ಅಷ್ಟೇ ಅಲ್ಲ. ಅದರ ಹೊರತಾಗಿಯೂ ಇಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಿವೆ. ಅದರ ಬಗ್ಗೆ ಕಿಚ್ಚ ಸುದೀಪ್​ ಅವರು ಮಾತನಾಡಿದ್ದಾರೆ. ಬ್ಯಾಡ್ಮಿಂಟನ್​ ಪಂದ್ಯಗಳ ಸುಲುವಾಗಿ ಚಿತ್ರರಂಗದವರು ಒಂದೆಡೆ ಸೇರುತ್ತಿದ್ದಾರೆ. ಆ ಬಗ್ಗೆ ಸುದೀಪ್​ ಮಾತಾಡಿದ ವಿಡಿಯೋ ಇಲ್ಲಿದೆ..

ಕನ್ನಡ ಚಲನಚಿತ್ರ ಕಲಾವಿದರು, ತಂತ್ರಜ್ಞರು, ಕಿರುತೆರೆ ಕಲಾವಿದರು ಹಾಗೂ ಮಾಧ್ಯಮದವರು ಒಟ್ಟಾಗಿ ‘ಸ್ಯಾಂಡಲ್​ವುಡ್​ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್’ನಲ್ಲಿ ಭಾಗಿ ಆಗುತ್ತಿದ್ದಾರೆ. ಜೆರ್ಸಿ ಅನಾವರಣ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಬಂದು ಶುಭ ಕೋರಿದ್ದಾರೆ. ‘ಕೆಟ್ಟ ಕಾರಣಕ್ಕೆ ನಮ್ಮ ಚಿತ್ರರಂಗ ಸುದ್ದಿ ಆಗುತ್ತಿದೆ. ಅದರ ನಡುವೆ ಇದು ಒಂದು ಸುಂದರ ಕ್ಷಣ. ಎಲ್ಲರೂ ಇಲ್ಲಿ ಜೊತೆಯಾಗಿ ಸೇರಿರುವುದು ಕನ್ನಡ ಚಿತ್ರರಂಗದ ಬಗ್ಗೆ ಉತ್ತಮ ಸಂದೇಶ ನೀಡುತ್ತೆ. ಯಾರು ಏನೇ ಮಾತಾಡಿದರೂ ನಮ್ಮ ಚಿತ್ರರಂಗದ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ’ ಎಂದಿದ್ದಾರೆ ಸುದೀಪ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More