ತುಪ್ಪ ಸರಬರಾಜಿಗೆ ಟಿಟಿಡಿ ನಡೆಸುವ ಟೆಂಡರ್ ಪ್ರಕ್ರಿಯೆಯಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಕೆಎಂಎಫ್ ಸ್ಪರ್ಧಿಸಲಾಗದು: ಎಂಕೆ ಜಗದೀಶ, ಎಂಡಿ-ಕೆಎಂಎಫ್

|

Updated on: Jul 31, 2023 | 7:05 PM

ಕೆಎಂಎಫ್ ವ್ಯವಹಾರಗಳಲ್ಲಿ ಸರ್ಕಾರಗಳ ಪಾತ್ರವೇನೂ ಇರೋದಿಲ್ಲ, ನಿರ್ಣಯಗಳನ್ನು ತೆಗೆದುಕೊಂಡ ಮೇಲೆ ಸರ್ಕಾರಗಳ ಸಮ್ಮತಿ ಪಡೆಯಲಾಗುವುದು ಎಂದು ಜಗದೀಶ್ ಹೇಳಿದರು.

ಬೆಂಗಳೂರು: ತಿರುಪತಿ ತಿರುಮಲ ದೇವಸ್ಥಾನಕ್ಕೆ (Tirupati Tirumala Devasthanam) ನಂದಿನಿ ತುಪ್ಪ ಸರಬರಾಜು ಮಾಡುವುದನ್ನು ನಿಲ್ಲಿಸಿರುವುದು ಮತ್ತು ನಾಳೆಯಿಂದ ನಂದಿನಿ ಹಾಲು (Nandini milk) ಮತ್ತು ಮೊಸರುಗಳ ಬೆಲೆ ಪ್ರತಿ ಲೀಟರ್ ಗೆ ರೂ.3 ಹೆಚ್ಚಾಗುವುದರ ನಡುವೆ ಯಾವುದೇ ಸಂಬಂಧವಿಲ್ಲ, ಯಾಕೆಂದರೆ ಟಿಟಿಡಿಗೆ ನಂದಿನಿ ತುಪ್ಪದ ಸರಬರಾಜು ನಿಲ್ಲಿಸಿ ಒಂದೂವರೆ ವರ್ಷ ಮೇಲಾಯಿತು ಎಂದು ಕರ್ನಾಟಕ ಮಿಲ್ಕ್ ಫೆಡರೇಶ್ (KMF) ವ್ಯವಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂಕೆ ಜಗದೀಶ (MK Jagadeesh) ಹೇಳಿದರು. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ ಜಗದೀಶ್, ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆಯಲ್ಲಿ ಕೆಎಂಎಫ್ ಪಾಲ್ಗೊಳ್ಳಲು ಬಯಸುವುದಿಲ್ಲ. ಯಾಕೆಂದರೆ ಕನಿಷ್ಟ ಬೆಲೆ ನಮೂದಿಸಿದವರಿಗೆ ಟೆಂಡರ್ ನೀಡಲಾಗುತ್ತದೆ, ರೈತರ ಹಿತಾಸಕ್ತಿ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳು ಕೋಟ್ ಮಾಡುವಷ್ಟು ಕಡಿಮೆ ಮೊತ್ತವನ್ನು ಕೆಎಂಎಫ್ ಕೋಟ್ ಮಾಡಲಾಗದು ಎಂದು ಜಗದೀಶ್ ಹೇಳಿದರು. ಕೆಎಂಎಫ್ ವ್ಯವಹಾರಗಳಲ್ಲಿ ಸರ್ಕಾರಗಳ ಪಾತ್ರವೇನೂ ಇರೋದಿಲ್ಲ ಎಂದು ಜಗದೀಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on