ಪಿಎಸ್ ಐ ನೇಮಕಾತಿ ಹಗರಣ ತನಿಖೆ ಪೂರ್ಣಗೊಳ್ಳದ ಹೊರತು ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗದು: ಜಿ ಪರಮೇಶ್ವರ್
ಇನ್ನೂ 400 ಕ್ಕಿಂತ ಹೆಚ್ಚು ಪಿಎಸ್ ಐಗಳ ನೇಮಕಾತಿಗೆಇಲಾಖೆಯಿಂದ ಪ್ರಸ್ತಾವನೆ ಬಂದಿದೆ, ಅಂದರೆ ಸುಮಾರು ಸಾವಿರಕ್ಕೂ ಹೆಚ್ಚು ಪಿಎಸ್ ಗಳ ನೇಮಕಾತಿ ಮಾಡಬೇಕಾಗುತ್ತದೆ ಎಂದು ಪರಮೇಶ್ವರ್ ಹೇಳಿದರು
ತುಮಕೂರು: ಗೃಹ ಸಚಿವ ಜಿ ಪರಮೇಶ್ವರ್ (home minister G Parameshwar) ಪಿಎಸ್ ಐ ನೇಮಕಾತಿ ಹಗರಣಕ್ಕೆ (PSI Recruitment Scam) ಸಂಬಂಧಿಸಿದಂತೆ ಒಂದಷ್ಟು ಮಾಹಿತಿಯನ್ನು ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದರು. 545 ಪಿಎಸ್ ಐ ಗಳ ನೇಮಕಾತಿ ಹಗರಣದಲ್ಲಿ ಕೆಲವು ಜನ ಶಾಮೀಲಾಗಿದ್ದು, ತನಿಖೆ ಜಾರಿಯಲ್ಲಿದೆ. ಏತನ್ಮಧ್ಯೆ, ಇನ್ನೂ 400 ಕ್ಕಿಂತ ಹೆಚ್ಚು ಪಿಎಸ್ ಐಗಳ ನೇಮಕಾತಿಗೆ (recruitment) ಇಲಾಖೆಯಿಂದ ಪ್ರಸ್ತಾವನೆ ಬಂದಿದೆ, ಅಂದರೆ ಸುಮಾರು ಸಾವಿರಕ್ಕೂ ಹೆಚ್ಚು ಪಿಎಸ್ ಗಳ ನೇಮಕಾತಿ ಮಾಡಬೇಕಾಗುತ್ತದೆ ಎಂದು ಪರಮೇಶ್ವರ್ ಹೇಳಿದರು. ಆದರೆ, ತನಿಖೆ ಪೂರ್ಣಗೊಳ್ಳದ ಹೊರತು ನೇಮಕಾತಿ ಪ್ರಕ್ರಿಯೆಯನ್ನು ಶುರುಮಾಡಲು ಬರೋದಿಲ್ಲ ಹಾಗಾಗಿ ತನಿಖೆ ಮುಗಿಯುವವರೆಗೆ ಕಾಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ತಲೆದೋರಿದೆ ಎಂದು ಗೃಹ ಸಚಿವರು ಹೇಳಿದರು. ತನಿಖೆ ಮುಗಿಯುವ ಮೊದಲು ಪ್ರಕ್ರಿಯೆ ಶುರುಮಾಡಿದರೆ ಸೇವಾ ಜೇಷ್ಠ್ಯತೆಯ ಸಮಸ್ಯೆ ಉದ್ಭವಿಸುತ್ತದೆ, ಆದರೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಆತಂಕಪಡುವ ಅಗತ್ಯವಿಲ್ಲ ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ