ಪೊಲೀಸ್ ಆಕಾಂಕ್ಷಿಗಳಿಗೆ ಗುಡ್ನ್ಯೂಸ್: ಇನ್ನೊಂದು ವಾರದಲ್ಲಿ 3,500 ಪೊಲೀಸರ ನೇಮಕಕ್ಕೆ ಆದೇಶ: ಗೃಹ ಸಚಿವ ಜಿ ಪರಮೇಶ್ವರ್
ರಾಜ್ಯದಲ್ಲಿ 15 ಸಾವಿರ ಪೊಲೀಸರ ಹುದ್ದೆ ಖಾಲಿಯಿದೆ. ಇನ್ನೊಂದು ವಾರದಲ್ಲಿ 3,500 ಪೊಲೀಸರ ನೇಮಕಕ್ಕೆ ಆದೇಶಿಸಲಾಗಿದೆ ಎಂದು ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ತುಮಕೂರು: ರಾಜ್ಯದಲ್ಲಿ 15 ಸಾವಿರ ಪೊಲೀಸರ ಹುದ್ದೆ ಖಾಲಿಯಿದೆ. ಇನ್ನೊಂದು ವಾರದಲ್ಲಿ 3,500 ಪೊಲೀಸರ ನೇಮಕಕ್ಕೆ ಆದೇಶಿಸಲಾಗಿದೆ ಎಂದು ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ (G Parameshwara) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪೊಲೀಸರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.
ಸ್ಮಾರ್ಟ್ಸಿಟಿ ಯೋಜನೆಯಡಿ ತುಮಕೂರಿಗೆ 1 ಸಾವಿರ ಕೋಟಿ ಮಂಜೂರು
ಸ್ಮಾರ್ಟ್ಸಿಟಿ ಯೋಜನೆಯಡಿ ತುಮಕೂರಿಗೆ 1 ಸಾವಿರ ಕೋಟಿ ರೂ. ಮಂಜೂರು ಮಾಡಲಾಗಿದೆ. ಕೇಂದ್ರದಿಂದ ಶೇ.50, ರಾಜ್ಯ ಸರ್ಕಾರದಿಂದ ಶೇ.50ರಷ್ಟು ಅನುದಾನ ನೀಡಿದ್ದು, ಈಗಾಗಲೇ ಕೇಂದ್ರ ಸರ್ಕಾರ ಶೇ.45ರಷ್ಟು ಹಣ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ 443 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದರು.
ಇದನ್ನೂ ಓದಿ: Electricity Bill ವಿದ್ಯುತ್ ಬಿಲ್ ದುಪ್ಪಟ್ಟು ಬರುತ್ತಿರುವುದಕ್ಕೆ ಸ್ಪಷ್ಟನೆ ಕೊಟ್ಟ ಸಚಿವ ಕೆಜೆ ಜಾರ್ಜ್
ಸ್ಮಾರ್ಟ್ಸಿಟಿ ಯೋಜನೆಯಡಿ 170 ಕಾಮಗಾರಿ ನಡೆಯುತ್ತಿದೆ. ನವೆಂಬರ್ಯೊಳಗೆ ಎಲ್ಲಾ ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು. ತುಮಕೂರಿಗೆ ರಿಂಗ್ ರೋಡ್, ರಸ್ತೆ ಅಭಿವೃದ್ಧಿ ಕಾಮಗಾರಿ, ದೀಪಗಳ ಅಳವಡಿಕೆ, ಡ್ರೈನೇಜ್ ಅಳವಡಿಕೆ, ಬಸ್ ಸ್ಟಾಂಡ್ ಅಳವಡಿಕೆ, ಸಾರ್ವಜನಿಕ ಗ್ರಂಥಾಲಯವನ್ನ ಆಧುನಿಕವಾದ ಕಟ್ಟಲಾಗಿದೆ.
ಆಧುನಿಕ ಸೌಲಭ್ಯ ಅಳವಡಿಕೆ
ಮಕ್ಕಳಿಗೆ ಕ್ರೀಡೆಗೆ ಮಹತ್ವ ತಿಳಿಸಲು ಮಹಾತ್ಮ ಗಾಂಧಿ ಕ್ರೀಡಾಂಗಣವನ್ನ ಆಧುನಿಕರಣ ಗೊಳಿಸಲಾಗಿದೆ. ಸ್ಮಾರ್ಟ್ ಸಿಟಿ ಅಂದರೆ ಕೇವಲ ರಸ್ತೆ ಚೆನ್ನಾಗಿರುತ್ತೆ ಅಂತ ಅಲ್ಲ, ಆಧುನಿಕರಣವಾಗಿ ಎಲ್ಲಾ ಸೌಲಭ್ಯಗಳು ಸಿಗಬೇಕು. ಫ್ರೀ ವೈಫೈ ಸಿಗಬೇಕು. ಉತ್ತಮ ಪರಿಸರಕ್ಕೆ ಗಿಡಗಳು ಇರಬೇಕು.
ಇದನ್ನೂ ಓದಿ: ಕಾರ್ಯಕರ್ತರಿಗೆ ಮಾತನಾಡಲು ಅವಕಾಶ ನೀಡಿ; ಡಿವಿಎಸ್, ಬಿಜೆಪಿ ನಾಯಕರ ವಿರುದ್ಧವೇ ಸೋಮಣ್ಣ ಬೆಂಬಲಿಗರ ಆಕ್ರೋಶ
ಪ್ರಚೋದನಾಕಾರಿ ಪೋಸ್ಟ್ಗಳ ತಡೆಗೆ ಕ್ರಮ
ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅದರ ಬಗ್ಗೆ ಹರಿಸಿದ್ದೇವೆ. ಯಾರೋ ಒಂದು ಪೋಸ್ಟ್ ಮಾಡಿದರೆ, ಮಾಹಿತಿ ಏನಿದೆ, ಒಂದು ಸಮುದಾಯವನ್ನ ಕೆರಳಿಸುವ ರೀತಿ ಇರುತ್ತೆ. ಅದರಿಂದ ಸಾಕಷ್ಟು ಅನಾಹುತಗಳು ನಡೆಯುತ್ತೆ. ಅಂತಹ ಪೋಸ್ಟ್ಗಳನ್ನ ನಿಯಂತ್ರಣ ಮಾಡುವ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:29 pm, Thu, 22 June 23