Indira canteen at KIAL: ಏರ್ಪೋರ್ಟ್ ಬಳಿ ಇಂದಿರಾ ಕ್ಯಾಂಟೀನ್ ಓಪನ್ ಮಾಡ್ತೇವೆ -ಸಚಿವ ರಾಮಲಿಂಗಾ ರೆಡ್ಡಿ
Transport Minister Ramalinga Reddy: ಓಲಾ, ಉಬರ್ನಿಂದ ಸಮಸ್ಯೆಯಾಗುತ್ತಿದೆ ಅಂತಾ ತಿಳಿಸಿದ್ದಾರೆ. ರಾಪಿಡೋ ವಿಚಾರವಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ವಿಮೆ ಮಾಡಿಸಬೇಕು ಅಂತಾ ಚಾಲಕರು ಮನವಿ ಮಾಡಿದ್ದಾರೆ ಎಂದು ಆಟೋ ಚಾಲಕರ ಸಭೆ ಬಳಿಕ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬೆಂಗಳೂರು: ಓಲಾ, ಉಬರ್ನಿಂದ ಸಮಸ್ಯೆಯಾಗುತ್ತಿದೆ ಅಂತಾ ತಿಳಿಸಿದ್ದಾರೆ. ರಾಪಿಡೋ ವಿಚಾರವಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ವಿಮೆ ಮಾಡಿಸಬೇಕು ಅಂತಾ ಚಾಲಕರು ಮನವಿ ಮಾಡಿದ್ದಾರೆ. ಚಾಲಕರ ದಿನಾಚರಣೆ ಮಾಡಲು ಕೋರಿದ್ದಾರೆ. ಮಕ್ಕಳಿಗೆ ವಿದ್ಯಾನಿಧಿ ನೀಡುವಂತೆ ಕೋರಿದ್ದಾರೆ ಎಂದು ಆಟೋ ಚಾಲಕರ ಸಭೆ ಬಳಿಕ ಸಚಿವ ರಾಮಲಿಂಗಾ ರೆಡ್ಡಿ (Transport Minister Ramalinga Reddy) ಹೇಳಿದ್ದಾರೆ.
ಕರ್ನಾಟಕ ಸಾರಿಗೆ ಇಲಾಖೆ ಆಪ್ ಮಾಡ್ತೀವಿ: ಇನ್ನು, ಕಾನೂನುಬಾಹಿರ ಆ್ಯಪ್‌ಗಳನ್ನು ಬ್ಯಾನ್ ಮಾಡುವಂತೆ ಕೋರಿದ್ದಾರೆ. ದೇವನಹಳ್ಳಿ ಏರ್ಪೋರ್ಟ್ ಬಳಿ (Devanahalli KIAL) ಇಂದಿರಾ ಕ್ಯಾಂಟೀನ್ (Indira canteen) ಓಪನ್ಗೆ ಬೇಡಿಕೆ ಇದೆ. ಜಾಗ ಕೊಟ್ಟರೆ ಕೂಡಲೇ ಇಂದಿರಾ ಕ್ಯಾಂಟೀನ್ ಓಪನ್ ಮಾಡ್ತೇವೆ. ಖಾಸಗಿ ಬಸ್ಗಳ ಚಾಲಕರು ಕೂಡ ಸಮಸ್ಯೆ ಹೇಳಿಕೊಂಡಿದ್ದಾರೆ. ವಾಹನಗಳ ಮೇಲೆ ಬ್ಲಾಕ್ ಲಿಸ್ಟ್ ತೆಗೆಯಲು ಅದಾಲತ್ ಮಾಡ್ತೇವೆ ಎಂದು ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
Latest Videos