Loading video

ವಿಧಾನಸೌಧದಲ್ಲಿ ಭದ್ರತೆ ಪರಿಶೀಲನೆ ವೇಳೆ ಮಹಿಳೆಯ ಬ್ಯಾಗ್​​ನಲ್ಲಿ ಚಾಕು ಪತ್ತೆ

| Updated By: ಆಯೇಷಾ ಬಾನು

Updated on: Jul 10, 2023 | 12:48 PM

ವಿಧಾನಸೌಧದ ಪೂರ್ವ ಗೇಟ್ ಬಳಿ ಭದ್ರತೆ ಪರಿಶೀಲನೆ ವೇಳೆ ಮಹಿಳೆಯೊಬ್ಬರ ಬ್ಯಾಗ್​​ನಲ್ಲಿ ಚಾಕು ಪತ್ತೆಯಾಗಿದೆ. ಮಹಿಳೆಯನ್ನು ಒಳಗೆ ಬಿಡದೆ ವಾಪಸ್ ಕಳುಹಿಸಲಾಗಿದೆ.

ಬೆಂಗಳೂರು: ವಿಧಾನಸೌಧದಲ್ಲಿ(Vidhana Soudha) ಕಲಾಪ ನಡೆಯುತ್ತಿದ್ದು ಭದ್ರತೆ ಪರಿಶೀಲನೆ ವೇಳೆ ಮಹಿಳೆಯೊಬ್ಬರ ಬ್ಯಾಗ್​​ನಲ್ಲಿ ಚಾಕು(Knife) ಪತ್ತೆಯಾಗಿದೆ. ವಿಧಾನಸೌಧದ ಪೂರ್ವ ಗೇಟ್ ಬಳಿ ಪರಿಶೀಲನೆ ವೇಳೆ ಚಾಕು ಪತ್ತೆಯಾಗಿದ್ದು ಮಹಿಳೆಯನ್ನು ಒಳಗೆ ಬಿಡದೆ ವಾಪಸ್ ಕಳುಹಿಸಲಾಗಿದೆ.

ಜುಲೈ 07ರ ಶುಕ್ರವಾರ ಸಿಎಂ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ ಮಂಡನೆ ಮಾಡುತ್ತಿದ್ದ ವೇಳೆ ಭದ್ರತಾ ಲೋಪವಾಗಿತ್ತು. ಶಾಸಕ ಎಂದು ಹೇಳಿಕೊಂಡು ಓರ್ವ ವ್ಯಕ್ತಿ ಸದನಕ್ಕೆ ಬಂದು ಶಾಸಕರ ಜಾಗದಲ್ಲಿ 15 ನಿಮಿಷ ಕೂತಿದ್ದರು. ಬಳಿಕ ವ್ಯಕ್ತಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಂತಹ ಘಟನೆ ನಡೆದಿತ್ತು. ಹೀಗಾಗಿ ಇಂದು(ಜು.10)ವಿಧಾನಸಭೆ ಪ್ರವೇಶ ದ್ವಾರದಲ್ಲಿ ಪೊಲೀಸರು ಪ್ರತಿಯೊಬ್ಬರ ತಪಾಸಣೆ ಮಾಡುತ್ತಿದ್ದಾರೆ. ವಿಧಾನಸಭೆಯ ಪಶ್ಚಿಮ ದ್ವಾರದ ಬಳಿ ಪ್ರತಿಯೊಬ್ಬರ ಐಡಿ ಕಾರ್ಡ್ ಚೆಕಿಂಗ್ ಮಾಡಿ ಒಳ ಬಿಡಲಾಗುತ್ತಿದೆ. ಆದ್ರೆ ವಿಧಾನಸೌಧದಲ್ಲಿ ಭದ್ರತೆ ಪರಿಶೀಲನೆ ವೇಳೆ ಮಹಿಳೆಯೊಬ್ಬರ ಬ್ಯಾಗ್​​ನಲ್ಲಿ ಚಾಕು ಪತ್ತೆಯಾಗಿದೆ. ವಿಧಾನಸೌಧದ ಪೂರ್ವ ಗೇಟ್ ಬಳಿ ಪರಿಶೀಲನೆ ವೇಳೆ ಚಾಕು ಪತ್ತೆಯಾಗಿದ್ದು ಮಹಿಳೆಯನ್ನು ಒಳಗೆ ಬಿಡದೆ ವಾಪಸ್ ಕಳುಹಿಸಲಾಗಿದೆ.