Kodi Shri: ಕಾಂಗ್ರೆಸ್ ಸರ್ಕಾರದ ಅಳಿವು-ಉಳಿವಿನ ಬಗ್ಗೆ ಕೋಡಿಶ್ರೀ ಭವಿಷ್ಯ!

|

Updated on: Jul 01, 2023 | 4:53 PM

Kodi Sri Shivananda Shivacharya Swamiji prediction : ಹುಬ್ಬಳ್ಳಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ

ಹುಬ್ಬಳ್ಳಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ: ಒಂದು ಸರ್ಕಾರ ಬರುತ್ತೆ ಸ್ಥಿರ ಸರ್ಕಾರ ಇರುತ್ತೆ ಅಂತ ಹೇಳಿದ್ದೆ ಅದು ನಿಜ ಆಗಿದೆ. ಆಳುವವರು ಅರಿತರೆ ಗಂಡಾತರದಿಂದ ಪಾರಾಗಬಹುದು ಇಲ್ಲಾ ಕಟ್ಟಿಟ್ಟ ಬುತ್ತಿ. ಕರುನಾಡಿಗೆ ಕೆಲವೊಂದು ಆಪತ್ತು ಇದೆ. ಕೆಲ ಸಾವು ನೋವುಗಳು ಆಗ್ತವೆ ದೈವ ಕೃಪೆಯಿಂದ ಪಾರಾಗಬಹುದು. ಬಡವರಿಗೆ ಗ್ಯಾರಂಟಿ ಒಳ್ಳೆಯದೇ. ಯಾವ ಹೆಣ್ಣಿಗೆ ಸ್ವತಂತ್ರ ಇರ್ಲಿಲ್ಲ ಅಂತಹ ಹೆಣ್ಣು ಈಗ ಸ್ವತಂತ್ರವಾಗಿ ಹೊರಗಡೆ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸುವ ವಿಚಾರ ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ, ಆದರೆ ಊರಿನಲ್ಲಿನ ಎಲ್ಲಾ ವಾಸನೆ ಮೂಗಿಗೆ ಮುಟ್ಟುತ್ತೆ ಎಂದು ಕೋಡಿ ಶ್ರೀಗಳು ಮಾರ್ಮಿಕವಾಗಿ ಹೇಳಿದರು.