ಭಗವಂತನಿಗೆ ಬೇಕಾದಾಗ ಇಂಥ ಹೂವುಗಳನ್ನು ಕರೆಸಿಕೊಳ್ಳುತ್ತಾನೆ: ಸ್ಪಂದನಾ ಅಗಲಿಕೆಗೆ ಕೋಡಿಶ್ರೀ ಸಂತಾಪ

Edited By:

Updated on: Aug 09, 2023 | 12:07 PM

ಕೋಡಿಮಠದ ಡಾ ಶಿವಾನಂದ ಮಹಾಸ್ವಾಮೀಜಿ ಅವರು ಸ್ಪಂದನಾ ಅಂತಿಮ ದರ್ಶನ ಪಡೆದುಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೋಡಿಶ್ರೀ, ಸ್ಪಂದನಾ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಭಗವಂತನಿಗೆ ಬೇಕಾದಾಗ ಇಂಥ ಹೂವುಗಳನ್ನು ಕರೆಸಿಕೊಳ್ಳುತ್ತಾನೆ. ಭಗವಂತ ಬುಗರಿ ತರಹ ಗೊಂಬೆಯನ್ನು ಆಡಿಸುತ್ತಾ ಇರುತ್ತಾನೆ. ಅವನಿಗೆ ಬೇಕೆಂದಾಗ ಹೂವುಗಳನ್ನು ಕರೆದುಕೊಂಡು ಹೋಗುತ್ತಾನೆ ಎಂದು ಹೇಳಿದರು.

ಶೋಕ ಸಾಗರವೇ ತುಂಬಿದೆ.. ನೀರವ ಮೌನ ಆವರಿಸಿದೆ.. ಸದಾ ಆನಂದದಿಂದ ತೇಲಾಡ್ತಿದ್ದ ಮನೆಯಲ್ಲಿ ಹೇಳಲಾಗದ ದುಃಖ ಆವರಿಸಿದೆ.. ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana Vijay Raghavendra) ನಿಧನ ಹೊಂದಿ ಎರಡು ದಿನ ಕಳೆದಿದ್ದು, ನಿನ್ನೆ(ಆಗಸ್ಟ್ 08) ರಾತ್ರಿ ಅವರ ಪಾರ್ಥಿವ ಶರೀರವನ್ನು ಥೈಲ್ಯಾಂಡ್‌ನಿಂದ ಬೆಂಗಳೂರಿಗೆ ತರಲಾಗಿದ್ದು, ಮಲ್ಲೇಶ್ವರಂನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗ, ರಾಜಕೀಯ ನಾಯಕರು ಸೇರಿದಂತೆ ಹಲವು ಗಣ್ಯರು ಸ್ಪಂದನಾ ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಕೋಡಿಮಠದ ಡಾ ಶಿವಾನಂದ ಮಹಾಸ್ವಾಮೀಜಿ ಸಹ ಸ್ಪಂದನಾ ಅಂತಿಮ ದರ್ಶನ ಪಡೆದುಕೊಂಡರು.

ಇದನ್ನೂ ಓದಿ: Spandana Vijay Funeral Live: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಂತಿಮ ದರ್ಶನಕ್ಕೆ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೋಡಿಶ್ರೀ ಸ್ಪಂದನಾ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಭಗವಂತನಿಗೆ ಬೇಕಾದಾಗ ಇಂಥ ಹೂವುಗಳನ್ನು ಕರೆಸಿಕೊಳ್ಳುತ್ತಾನೆ. ಭಗವಂತ ಬುಗರಿ ತರಹ ಗೊಂಬೆಯನ್ನು ಆಡಿಸುತ್ತಾ ಇರುತ್ತಾನೆ. ಅವನಿಗೆ ಬೇಕೆಂದಾಗ ಹೂವುಗಳನ್ನು ಕರೆದುಕೊಂಡು ಹೋಗುತ್ತಾನೆ. ಸ್ಪಂದನಾ ಚಿಕ್ಕಪ್ಪ ಬಿ.ಕೆ.ಹರಿಪ್ರಸಾದ್ ನನ್ನ ಕ್ಲಾಸ್​ಮೆಂಟ್. ಸ್ಪಂದನಾ ಕುಟುಂಬಸ್ಥರು ನಮಗೆ ಅತ್ಯಂತ ಆತ್ಮೀಯರಾಗಿದ್ದರು ಸ್ಪಂದನಾ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಎಂದರು.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Rachappaji Naik S

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More