Karnataka Breaking Kannada News Highlights: ಮೈಸೂರಿನಲ್ಲಿ ವಿಶ್ವ ಬುಡಕಟ್ಟು ದಿನ ಆಚರಣೆ: ಸಚಿವ ಬಿ ನಾಗೇಂದ್ರ ಭಾಗಿ
Breaking news today Highlights updates: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಂತ್ಯಸಂಸ್ಕಾರವನ್ನು ಬೆಂಗಳೂರಿನ ಶ್ರೀರಾಂಪುರದ ಹರಿಶ್ಚಂದ್ರಘಾಟ್ನಲ್ಲಿ ಇಂದು ನೆರಮೇರಿಸಲಾಗಿದ್ದು, ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ನಟ, ನಟಿಯರು ಸೇರಿದಂತೆ ರಾಜಕೀಯ ನಾಯಕರು ಸಹ ಅಂತಿಮ ದರ್ಶನಕ್ಕೆ ಭೇಟಿ ನೀಡಿ, ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವಾನ ಹೇಳಿದ್ದಾರೆ. ಕರ್ನಾಟಕದ ರಾಜಕೀಯ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ ಮೂಲಕ ಪಡೆಯಿರಿ.
ಸ್ಯಾಂಡಲ್ವುಡ್ನ ಸ್ಟಾರ್ ನಟ ವಿಜಯರಾಘವೇಂದ್ರ (Vijay Raghavendea) ಅವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ (Spandana) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬ್ಯಾಂಕಾಕ್ಗೆ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 06 ರಂದು ನಿಧನ ಹೊಂದಿದ್ದರು. ಬ್ಯಾಂಕಾಕ್ನಲ್ಲಿ ಮರಣೋತ್ತರ ಪರೀಕ್ಷೆಗಳು ಸೇರಿದಂತೆ ಇತರೆ ಎಲ್ಲ ಕಾನೂನು ನಿಯಮಗಳನ್ನು ಮುಗಿಸಿ ಮೃತದೇಹವನ್ನು ಕಾರ್ಗೊ ಮೂಲಕ ಬೆಂಗಳೂರಿಗೆ ಕರೆತರಾಗಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸ್ಪಂದನಾ ತಂದೆ ಬಿಕೆ ಶಿವರಾಂ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ಯಾಂಡಲ್ವುಡ್ನ ಹಲವು ಸೆಲೆಬ್ರಿಟಿಗಳು ಆಗಮಿಸಿ ಸ್ಪಂದನಾ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸ್ಪಂದನಾ ವಿಜಯ್ ಅಂತ್ಯ ಸಂಸ್ಕಾರ, ಕರ್ನಾಟಕ ರಾಜ್ಯ ರಾಜಕೀಯ, ಪ್ರಚಲಿತ ವಿದ್ಯಮಾನ, ಮಳೆ ಹಾಗೂ ಕರ್ನಾಟಕ ರಾಜ್ಯದ ವಾತಾವರಣ ಮತ್ತು ತಾಜಾ ಹಾಗೂ ಕ್ಷಣಕ್ಷಣದ ಮಾಹಿತಿಗೆ ಟಿವಿ9 ಕನ್ನಡ ಡಿಜಿಟಲ್ ಲೈವ್ ಫಾಲೋ ಮಾಡಿ.
LIVE NEWS & UPDATES
-
Karnataka Breaking Kannada News Live: ಗದಗ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತ
ಗದಗ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹುಲಕೋಟಿ, ಅಸುಂಡಿ, ನಾಗಾವಿ ಗ್ರಾಮದಲ್ಲಿ ಮಳೆ ಸುರಿದಿದೆ. ಹುಲಕೋಟಿ ಸೇತುವೆ ಬಳಿ ಭಾರಿ ಪ್ರಮಾಣದ ಮಳೆ ನೀರು ನಿಂತ ಹಿನ್ನೆಲೆ ಬ್ರಿಡ್ಜ್ ಬಳಿಯ ರಸ್ತೆಯಲ್ಲಿ ತೆರಳಲು ಮಕ್ಕಳು, ಸವಾರರು ಪರದಾಡಿದ್ದಾರೆ.
-
Karnataka Breaking Kannada News Live: ಮಾಜಿ ಸಚಿವ ಅಶ್ವತ್ಥ್ ನಾರಾಯಣ ಭೇಟಿಯಾದ ಗುತ್ತಿಗೆದಾರರು
ಬಿಬಿಎಂಪಿ ಗುತ್ತಿಗೆದಾರರಿಗೆ ಹಣ ಪಾವತಿಸಲು ವಿಳಂಬ ವಿಚಾರವಾಗಿ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಅವರನ್ನು ಗುತ್ತಿಗೆದಾರರು ಭೇಟಿಯಾಗಿದ್ದಾರೆ. ಬೆಂಗಳೂರಿನ ಆರ್‌ಎಂಎಸ್ ಕಾಲೋನಿಯ ನಿವಾಸದಲ್ಲಿ ಭೇಟಿ ಮಾಡಿದ್ದು, ಹೋರಾಟಕ್ಕೆ ಸಹಕಾರ ನೀಡುವಂತೆ ಗುತ್ತಿಗೆದಾರರಿಂದ ಮನವಿ ಮಾಡಿದ್ದಾರೆ.
-
Karnataka Breaking Kannada News Live: ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲ ಮೂಡಿಸಿದ ಕಾಲಜ್ಞಾನ ಭವಿಷ್ಯ
ತುಮಕೂರು: ರಾಷ್ಟ್ರ ರಾಜಕಾರಣದಲ್ಲಿ ಕಾಲಜ್ಞಾನ ಭವಿಷ್ಯ ತೀವ್ರ ಸಂಚಲ ಮೂಡಿಸಿದೆ. ಕಾಲಜ್ಞಾನ ಪ್ರಕಾರ ಮುಂದಿನ ಪ್ರಧಾನಿ ಆಗುವ ಯೋಗ ಒಬ್ಬ ಮಹಿಳೆಗೆ ಇದೆಯಂತೆ. ಆ ಮೂಲಕ ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ಸ್ಟೋಟಕ ಭವಿಷ್ಯ ನುಡಿದಿದ್ದಾರೆ.
Karnataka Breaking Kannada News Live: ನಾಳೆ ಆಡಿಕೃತ್ತಿಕಾ ಹಿನ್ನೆಲೆ ಸುಬ್ರಹ್ಮಣ್ಯಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆ
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹಿರೇಕರಪನಹಳ್ಳಿಯಲ್ಲಿ ನಾಳೆ ಆಡಿಕೃತ್ತಿಕಾ ಹಿನ್ನೆಲೆ ಸುಬ್ರಹ್ಮಣ್ಯಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಕ್ರೇನ್ ಮೂಲಕ ದೇಹಕ್ಕೆ ಸರಳು ಹಾಕಿಕೊಂಡು ಭಕ್ತರು ಹರಕೆ ತೀರಿಸಿದರು. ಆಂಧ್ರ, ತಮಿಳುನಾಡು ಗಡಿ ದೇವಾಲಯಗಳಲ್ಲಿ ಕಳೆಗಟ್ಟಿದ ಆಡಿಕೃತ್ತಿಕಾ ಆಚರಣೆಯಲ್ಲಿದೆ.
Karnataka Breaking Kannada News Live: ಸಿಐಡಿ ತನಿಖೆ ವೇಳೆ ಗಮನ ಸೆಳೆದ ಗೊಂಬೆ
ಉಡುಪಿ ಕಾಲೇಜು ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ವೇಳೆ ಗೊಂಬೆ ಗಮನ ಸೆಳೆದಿದೆ. ಸಿಐಡಿ ಅಧಿಕಾರಿಗಳ ತಂಡದ ತನಿಖೆ ಸಂದರ್ಭ ಪ್ಲ್ಯಾಸ್ಟಿಕ್ ಗೊಂಬೆ ಕಾಣಿಸಿಕೊಂಡಿದ್ದು, ಕಾಲೇಜಿಗೆ ಗೊಂಬೆ ತಂದು ಪ್ರಕರಣವನ್ನು ಮರು ಸೃಷ್ಟಿ ಮಾಡಿದ್ದಾರೆ. ಘಟನೆ ನಡೆದ ಶೌಚಾಲಯ, ಕಾಲೇಜಿನ ವರಾಂಡಾದಲ್ಲಿ ಮಹಜರು ಪ್ರಕ್ರಿಯೆ ನಡೆಯಿತು.
Karnataka Breaking Kannada News Live: 40 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ
40 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ, ಈ ಪೈಕಿ 12 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ.1ರಂದು 211 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿದ್ದ ಸರ್ಕಾರ, ಈ ಪೈಕಿ ಕೆಲ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ತಡೆ ಹಿಡಿದಿದೆ.
Karnataka Breaking Kannada News Live: ಆಗಸ್ಟ್ 10, 11, 14ರಂದು ಮೆಟ್ರೋ ನೇರಳೆ ಮಾರ್ಗದಲ್ಲಿ ಬದಲಾವಣೆ
ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ಮೆಟ್ರೋ ನಿಲ್ದಾಣದದವರೆಗೆ ಮೆಟ್ರೋ ಸೇವೆಗಳನ್ನು ವಿಸ್ತರಿಸುವ ಸಲುವಾಗಿ ಆಗಸ್ಟ್ 10, 11 ಮತ್ತು 14ರಂದು ಮುಂಜಾನೆ 5.00 ಗಂಟೆಯಿಂದ ಬೆಳಗ್ಗೆ 7.00 ಗಂಟೆಯವರೆಗೆ ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ನಾಳೆಯಿಂದ ಆಗಸ್ಟ್ 14ರ ವರೆಗೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ; ಇಲ್ಲಿದೆ ಪೂರ್ಣ ವಿವರ
Karnataka Breaking Kannada News Live: ಬಿಹಾರದ ಗಯಾ ಕ್ಷೇತ್ರ ದರ್ಶನ ಸೇರ್ಪಡೆ
ಕರ್ನಾಟಕ ಭಾರತ ಗೌರವ ಕಾಶಿ ದರ್ಶನ ರೈಲು ಯಾತ್ರೆಯ ಮೂಲಕ ತೆರಳುವ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳ ಪ್ಯಾಕೇಜ್ ಯಾತ್ರೆಯಲ್ಲಿ ಈ ಬಾರಿ ಬಿಹಾರದ ಗಯಾ ಕ್ಷೇತ್ರದ ದರ್ಶನವನ್ನು ಸೇರ್ಪಡೆಗೊಳಿಸಲಾಗಿದೆ. ಆ ಮೂಲಕ 8 ದಿನಗಳ ಪ್ರವಾಸವನ್ನು 9 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Karnataka Breaking Kannada News Live: ಆರೋಪದಲ್ಲಿ ಹುರುಳಿಲ್ಲ
ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಲಂಚ ಆರೋಪ ವಿಚಾರವಾಗಿ ರಾಮನಗರ ತಾಲೂಕಿನ ಬಿಡದಿಯಲ್ಲಿ ಇಂಧನ ಸಚಿವ ಜಾರ್ಜ್ ಹೇಳಿಕೆ ನೀಡಿದ್ದು, ಆರೋಪದಲ್ಲಿ ಹುರುಳಿಲ್ಲ ಎಂದು ಸದನದಲ್ಲೇ ಅವರು ಹೇಳಿದ್ದಾರೆ. ಆರೋಪ ಮಾಡೋದು ಸುಲಭ, ಅವರು ಸಾಕ್ಷ್ಯಗಳನ್ನ ನೀಡಬೇಕು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿದ್ದಾರೆ ಎಂದರು.
Spandana Vijay Cremation Live: ದುಃಖದಲ್ಲಿ ಸೈಲೆಂಟ್ ಆಗಿ ಕುಳಿತ ತಂದೆ ಶಿವರಾಮ್
ಮಗಳು ಸ್ಪಂದನಾ ಕಣ್ಮರೆ ಆದ ದುಃಖದಲ್ಲಿ ತಂದೆ ಶಿವರಾಮ್ ಸೈಲೆಂಟ್ ಆಗಿ ಕುಳಿತಿದ್ದಾರೆ. ಶಿವರಾಮ್ ಅವರನ್ನು ತಬ್ಬಿ ಶ್ರೀಮುರಳಿ ಸಾಂತ್ವನ ಮಾಡಿದರು. ಬಳಿಕ ಶ್ರೀಮುರಳಿ ಕುಟುಂಬ ಮನೆಗೆ ತೆರಳಿದರು.
Spandana Vijay Cremation Live: ಸ್ಪಂದನಾ ತಂದೆ ಕಣ್ಣೀರು
Spandana Vijay Cremation Live: ಪಂಚಭೂತಗಳಲ್ಲಿ ಸ್ಪಂದನಾ ಲೀನ
Spandana Vijay Cremation Live: ಕುಟುಂಬಸ್ಥರು, ಸಂಬಂಧಿಕರಿಂದ ಸ್ಪಂದನಾಗೆ ಕಣ್ಣೀರಿನ ವಿದಾಯ
ಬೆಂಗಳೂರಿನ ಶ್ರೀರಾಂಪುರದ ಹರಿಶ್ಚಂದ್ರಘಾಟ್ನಲ್ಲಿ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಂತ್ಯಸಂಸ್ಕಾರ ಮಾಡಲಾಗಿದ್ದು, ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಈಡಿಗ ಬಿಲ್ಲವ ಸಮುದಾಯದ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ಪತಿ ವಿಜಯ್, ಪುತ್ರ ಶೌರ್ಯ ನೆರಮೇರಿಸಿದರು. ಕುಟುಂಬಸ್ಥರು, ಸಂಬಂಧಿಕರಿಂದ ಸ್ಪಂದನಾಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ.
Spandana Vijay Cremation Live: ಚಿತಾಗಾರದ ಕೊಠಡಿಗೆ ಸ್ಪಂದನಾ ಪಾರ್ಥಿವ ಶರೀರ ಸ್ಥಳಾಂತರ
ಚಿತಾಗಾರದ ಕೊಠಡಿಗೆ ಸ್ಪಂದನಾ ಪಾರ್ಥಿವ ಶರೀರವನ್ನು ಸ್ಥಳಾಂತರ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಂತ್ಯಸಂಸ್ಕಾರ ನೆರವೇರಲಿದೆ.
Spandana Vijay Cremation Live: ಹರಿಶ್ಚಂದ್ರ ಘಾಟ್ಗೆ ಆಗಮಿಸಿದ ಪಾರ್ಥಿವ ಶರೀರ
ಹರಿಶ್ಚಂದ್ರ ಘಾಟ್ಗೆ ಪಾರ್ಥಿವ ಶರೀರ ಆಗಮಿಸಿದ್ದು, ಗೇಟ್ ಒಳಭಾಗದಲ್ಲಿರುವ ಹರಿಶ್ಚಂದ್ರನ ಮೂರ್ತಿ ಬಳಿಯಿಟ್ಟು ಪೂಜೆ ಸಲ್ಲಿಸಲಾಯಿತು. ಪುತ್ರ ಶೌರ್ಯನಿಂದ ಅಂತಿಮ ಪೂಜಾ ವಿಧಿ ವಿಧಾನ ನೇರವೇರಿಸಲಾಗಿದೆ.
Spandana Vijay Funeral Live: ಅತ್ತಿಗೆ ಪಾರ್ಥಿವ ಶರೀರದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಶ್ರೀಮುರಳಿ
Spandana Vijay Funeral Live: ಮಾಜಿ ಸಚಿವ ಗೋವಿಂದ ಕಾರಜೋಳ ಸಂತಾಪ
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಹಿನ್ನೆಲೆ ಬಾಗಲಜೋಟೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದಾರೆ. ಸ್ಪಂದನಾ ನಿಧನದಿಂದ ಇಡೀ ರಾಜ್ಯ ಕಣ್ಣೀರು ಸುರಿಸುತ್ತಿದೆ. ಒಬ್ಬ ಒಳ್ಳೆಯ ಗೃಹಿಣಿ, ಕಲಾವಿದೆಯಾಗಿ ಜನರ ಪ್ರೀತಿ ವಿಶ್ವಾಸ ಗೆದ್ದಂತಹ ಯುವತಿ ಸ್ಪಂದನಾ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಆದ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಭಾವಿಸುತ್ತೇನೆ ಎಂದಿದ್ದಾರೆ.
Spandana Vijay Funeral Live: ಶ್ರೀರಾಂಪುರದ ಹರಿಶ್ಚಂದ್ರಘಾಟ್ಗೆ ಆಗಮಿಸಿದ ಸಂಬಂಧಿಕರು
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಂತಿಮಯಾತ್ರೆಗೆ ಶ್ರೀರಾಂಪುರದ ಹರಿಶ್ಚಂದ್ರಘಾಟ್ಗೆ ಸಂಬಂಧಿಕರು ಆಗಮಿಸಿದ್ದಾರೆ. ಮೆರವಣಿಗೆಯಲ್ಲಿ ಕುಟುಂಬ ಸದಸ್ಯರು ಮೃತದೇಹ ತರುತ್ತಿದ್ದಾರೆ. ನಟ ಶಿವರಾಜ್ಕುಮಾರ್, ಪತ್ನಿ ಗೀತಾ ಸೇರಿದಂತೆ ಹಲವರ ಆಗಮಿಸಿದ್ದಾರೆ.
Spandana Vijay Funeral Live: ಸ್ಪಂದನಾ ಅಂತಿಮ ಯಾತ್ರೆ ಕಡೇ ಕ್ಷಣಗಳು
Spandana Vijay Funeral Live: ಅಂತಿಮಯಾತ್ರೆಯ ರಸ್ತೆಯುದ್ದಕ್ಕೂ ನಿಂತಿರುವ ನೂರಾರು ಜನರು
ಮಲ್ಲೇಶ್ವರಂನಿಂದ ಹರಿಶ್ಚಂದ್ರಘಾಟ್ವರೆಗೆ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಂತಿಮಯಾತ್ರೆ ಶುರುವಾಗಿದ್ದು, ಅಂತಿಮಯಾತ್ರೆಯ ರಸ್ತೆಯುದ್ದಕ್ಕೂ ನೂರಾರು ಜನರು ಭಾಗಿಯಾಗಿದ್ದಾರೆ. ಸ್ಪಂದನಾ ಮೃತದೇಹದ ಅಂತಿಮದರ್ಶನವನ್ನು ಜನರು ಪಡೆಯುತ್ತಿದ್ದಾರೆ.
Spandana Vijay Funeral Live: ಮಗಳ ಮುಖ ನೋಡಲು ಹಾತೊರೆದ ತಂದೆ
Spandana Vijay Funeral Live: ಸ್ಪಂದನಾ ಮೇಲೆ ಮದುವೆ ಸೀರೆ
Spandana Vijay Funeral Live: ತಂದೆ ಬಿ.ಕೆ.ಶಿವರಾಂ ನಿವಾಸದಿಂದ ಮೃತದೇಹ ಸ್ಥಳಾಂತರ
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಂತಿಮಯಾತ್ರೆ ಆರಂಭವಾಗಿದ್ದು, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಂದೆ ಬಿ.ಕೆ.ಶಿವರಾಂ ನಿವಾಸದಿಂದ ಮೃತದೇಹ ಸ್ಥಳಾಂತರ ಮಾಡಲಾಗಿದೆ. ಶ್ರೀರಾಂಪುರದ ಹರಿಶ್ಚಂದ್ರಘಾಟ್ವರೆಗೆ ಮೆರವಣಿಗೆ ಆರಂಭವಾಗಿದೆ.
Spandana Vijay Funeral Live: ಸ್ಪಂದನಾ ಪಾರ್ಥಿವ ಶರೀರ ಅಂತಿಮಯಾತ್ರೆಗೆ ಕ್ಷಣಗಣನೆ
ಸ್ಪಂದನಾ ಪಾರ್ಥಿವ ಶರೀರ ಅಂತಿಮಯಾತ್ರೆಗೆ ಕ್ಷಣಗಣನೆ ಶುರುವಾಗಿದ್ದು, ಮಲ್ಲೇಶ್ವರಂನ ತಂದೆ ಬಿ.ಕೆ.ಶಿವರಾಂ ನಿವಾಸದಿಂದ, ಕಾಡುಮಲ್ಲೇಶ್ವರ ದೇವಸ್ಥಾನದ ಎಡತಿರುವು, ಬಿಜೆಪಿ ಕಚೇರಿ ಮುಂಭಾಗ ಮಲ್ಲೇಶ್ವರಂ 11ನೇ ಮುಖ್ಯರಸ್ತೆ, ಸಂಪಿಗೆ ರಸ್ತೆ ಜಂಕ್ಷನ್, ಮಾರ್ಗೋಸ ರಸ್ತೆ, ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆ ಮೂಲಕ ಶ್ರೀರಾಮಪುರದ ಹರಿಶ್ಚಂದ್ರಘಾಟ್ ತಲುಪಲಿದೆ.
Spandana Vijay Funeral Live: ಬಹಳ ಸುಂದರವಾದ ಜೀವನ ಅವರದ್ದು; ಅವರ ಅಗಲಿಕೆ ನೋವು ತಂದಿದೆ; ಸಿಎಂ
ಬಹಳ ವರ್ಷ ಬದುಕಿ ಬಾಳಬೆಕಿತ್ತು. ಅವರ ಪತಿ ಖ್ಯಾತ ಸಿನಿಮಾ ನಟರು. ಅಪೂರ್ವದಲ್ಲಿ ಅವರು ನಟನೆ ಮಾಡಿದ್ದಾರೆ. ಬಾಳಿನಲ್ಲಿ ಬೇಕಾದಷ್ಟು ನೋಡಬೇಕಿತ್ತು. ಬಹಳ ಸುಂದರವಾದ ಜೀವನ ಅವರದ್ದು. ಟಿವಿಯಲ್ಲಿ ನಾನು ನೋಡುತ್ತಿದ್ದೆ. ಥೈಲ್ಯಾಂಡ್ನಲ್ಲಿ ಮೃತಪಟ್ಟಿರುವುದು ಬಹಳ ನೋವು ತಂದಿದೆ. ಬಿಕೆ ಶಿವರಾಂ ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ. ಸ್ಪಂದನಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸದರು.
Spandana Vijay Funeral Live: ಸಂತಾಪ ಸೂಚಿಸಿದ ನಟ ಜಗ್ಗೇಶ್
ಬಾಳಿ ಬದುಕಬೇಕಿದ್ದ ಜೀವ ಇವತ್ತು ಇಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ನಟ ಜಗ್ಗೇಶ್ ಸಂತಾಪ ಸೂಚಿಸಿದರು.
Spandana Vijay Funeral Live: ಸ್ಪಂದನಾ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರ ಅಂತಿಮ ದರ್ಶನ ಪಡೆದರು.
Spandana Vijay Funeral Live: ಕುಟುಂಬದವರಿಗೆ, ರಾಘುಗೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ: ಡಿಕೆ ಶಿವಕುಮಾರ್
ಒಂದು ವಾರದ ಹಿಂದೆ ದಂಪತಿ ಬಂದು ಭೇಟಿ ಮಾಡಿದ್ದರು. ಸೈಟ್ ವಿಚಾರವಾಗಿ ಹಾಗೂ ಅಭಿನಂದನೆ ಸಲ್ಲಿಸೋಕೆ ಬಂದಿದ್ದರು. ತುಂಬಾ ಆರೋಗ್ಯಕರವಾಗಿದ್ದರು. ಈ ಅಭಿಮಾನದ ಸಾಗರವೇ ಅವರನ್ನು ಜನ ಎಷ್ಟು ಇಷ್ಟ ಪಟ್ಟಿದ್ದರು ಎನ್ನುವುದು ಗೊತ್ತಾಗುತ್ತೆ. ಚಿಕ್ಕ ವಯಸ್ಸಿನಲ್ಲಿ ಹೀಗೆ ಆಗಬಾರದಿತ್ತು. ಎಲ್ಲರೂ ಆರೋಗ್ಯದ ಬಗ್ಗೆ ಗಮನ ಕೊಡಿ. ಕುಟುಂಬದವರಿಗೆ ಹಾಗೂ ಅವರ ಪತಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ. ಅವರ ಕುಟುಂಬದರೆಲ್ಲ ನಮಗೆ ಬಹಳ ಆತ್ಮೀಯರು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂತಾಪ್ ಸೂಚಿಸಿದರು.
Spandana Vijay Funeral Live: ಸ್ಪಂದನಾ ಅಂತಿಮ ದರ್ಶನ ಪಡೆದ ಡಿಸಿಎಂ ಡಿಕೆ ಶಿವಕುಮಾರ್
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಪಂದನಾ ಅಂತಿಮ ದರ್ಶನ ಪಡೆದರು.
Spandana Vijay Funeral Live: ದೇವರು ರಾಘು ಮತ್ತು ಕುಟುಂಬಕ್ಕೆ ಧೈರ್ಯ ಮತ್ತು ಶಕ್ತಿ ಕೊಡಲಿ: ನಟ ಅಜಯ್ ರಾವ್
ದೇವರು ರಾಘು ಮತ್ತು ಕುಟುಂಬಕ್ಕೆ ಧೈರ್ಯ ಮತ್ತು ಶಕ್ತಿ ಕೊಡಲಿ. ಜೀವನದಲ್ಲಿ ಯಾವಾಗ ಏನೂ ಬೇಕಾದರೂ ಆಗಬಹುದು. ಇವರ ಕುಟುಂಬಕ್ಕೆ ಪದೇ ಪದೇ ಯಾಕೆ ಈ ತರ ಆಗುತ್ತಿದೆ ಗೊತ್ತಿಲ್ಲ. ಸ್ಪಂದನಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ ಅಜಯ್ ರಾವ್ ಸಂತಾಪ ಸೂಚಿಸಿದರು.
Spandana Vijay Funeral Live: ಸ್ಪಂದನಾ ಅಂತಿಮ ದರ್ಶನ ಪಡೆದ ನಟ ಯಶ್
ನಟ ಯಶ್, ನಟ ಪ್ರೇಮ್, ಅಜಯ್ರಾವ್, ನಟಿ ಪೂಜಾ ಗಾಂಧಿ, ಗಾಯಕಿಯರಾದ ಶರ್ಮಿತಾ ಮಲ್ನಾಡ್, ಅರ್ಚನಾ ಉಡುಪ ಅವರು ಸ್ಪಂದನಾ ಅವರ ಅಂತಿಮ ದರ್ಶನ ಪಡೆದರು.
Spandana Vijay Funeral Live: ಸ್ಪಂದನಾ ಅಂತಿಮಯಾತ್ರೆ ಸಾಗುವ ಮಾರ್ಗ
ಸ್ಪಂದನಾ ಅವರ ಅಂತಿಮಯಾತ್ರೆ ಮಲ್ಲೇಶ್ವರಂನ ತಂದೆ ಬಿ.ಕೆ.ಶಿವರಾಂ ನಿವಾಸದಿಂದ ಮಲ್ಲೇಶ್ವರಂನ 15ನೇ ಮುಖ್ಯರಸ್ತೆ ಮೂಲಕ ಹಾದು ಕಾಡುಮಲ್ಲೇಶ್ವರ ದೇವಸ್ಥಾನದ ಎಡತಿರುವು ಪಡೆದು, ಬಿಜೆಪಿ ಕಚೇರಿ ಮುಂಭಾಗ ಹಾಯ್ದು ಮಲ್ಲೇಶ್ವರಂ 11ನೇ ಮುಖ್ಯರಸ್ತೆ, ಸಂಪಿಗೆ ರಸ್ತೆ ಜಂಕ್ಷನ್, ಮಾರ್ಗೋಸ ರಸ್ತೆ ಕೆ.ಸಿ.ಜನರಲ್ ಆಸ್ಪತ್ರೆ ಮೂಲಕ ಹರಿಶ್ಚಂದ್ರಘಾಟ್ ತಲುಪುತ್ತದೆ.
Spandana Vijay Funeral Live: ಇಷ್ಟು ಸಣ್ಣ ವಯಸ್ಸಿನಲ್ಲಿ ಹೀಗೆ ಆಗಬಾರದಿತ್ತು; ನಟಿ ಪೂಜಾ ಗಾಂಧಿ
ತುಂಬಾ ಬೇಜಾರು ಆಗುತ್ತಿದೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಹೀಗೆ ಆಗಬಾರದಿತ್ತು. ದೇವರು ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ. ಗೋಕುಲ ಸಿನಿಮಾ ಶೂಟಿಂಗ್ ವೇಳೆ ರಾಘ ತುಂಬಾ ಹತ್ತಿರ ಆಗಿದ್ದರು. ಹೀಗೆ ಆಗಬಾರದಿತ್ತು ಎಂದು ನಟಿ ಪೂಜಾಗಾಂಧಿ ಸಂತಾಪ ಸೂಚಿಸಿದ್ದಾರೆ.
Spandana Vijay Funeral Live: ಮಾಜಿ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಸಂತಾಪ
ನಾನು, ಶಿವರಾಂ ಬ್ಯಾಚ್ ಮೇಟ್. ನನ್ನ,ಅವನದ್ದು ಒಡನಾಟ ಬಹಳ ವರ್ಷಗಳದ್ದು. ನನಗೆ ಮೊದಲು ಮದುವೆಯಾಯ್ತು, ಆಮೇಲೆ ಆತ ಮದುವೆಯಾದ. ನನಗೂ ಎರಡು ಮಕ್ಕಳು, ಅವನಿಗೂ ಎರಡು ಮಕ್ಕಳು. ನಮಗಿಬ್ಬರಿಗೂ ರಾಷ್ಟ್ರಪತಿ ಪದಕ ಬಂದಿತ್ತು. ಮಗಳಿಗೆ ಮಗು ಆದ ಮೇಲೆ ಶೌರ್ಯ ಪದಕ ಬಂತು. ಹೀಗಾಗಿ ಮೊಮ್ಮಗನಿಗೆ ಶೌರ್ಯ ಅನ್ನುವ ಹೆಸರಿಡಬೇಕು ಅಂದಿದ್ದ. ಶಿವರಾಂ ಯಾವತ್ತೂ ಕಣ್ಣೀರು ಹಾಕಿದ್ದು ನಾನು ನೋಡಿಲ್ಲ. ದುಖಃವನ್ನು ಅರಗಿಸಿಕೊಳ್ಳುವ ನೋವು ನಮಗೆ ಅರ್ಥ ಆಗಲ್ಲ. ದೇವರು ಅವರಿಗೆ ಶಕ್ತಿಯನ್ನ ನೀಡಿ ಧೈರ್ಯ ತುಂಬಬೇಕು ಎಂದು ಮಾಜಿ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಹೇಳಿದ್ದಾರೆ.
Spandana Vijay Funeral Live: ನನ್ನ ಜೀವನದಲ್ಲಿ ತುಂಬಾ ದುಃಖಮಯವಾದ ಘಟನೆ ಇದು: ಉಮಾಶ್ರೀ
ಸ್ಪಂದನಾ ನಿಧನ ವಿಚಾರ ತುಂಬಾ ನೋವುಂಟು ಮಾಡಿದೆ. ಇವತ್ತು ತುಂಬಾ ನೋವಿನ ದಿನ. ಚಿತ್ರರಂಗ ಕುಟುಂಬದ ಸದಸ್ಯ ರಾಘು, ತುಂಬಾ ಪ್ರೀತಿಯ ಮಗ. ನನ್ನ ಜೀವನದಲ್ಲಿ ತುಂಬಾ ದುಃಖಮಯವಾದ ಘಟನೆ ಇದು. ದಂಪತಿಗಳನ್ನು ಪ್ರತಿಯೊಬ್ಬರು ಹಾಡಿ ಹೊಗಳುತ್ತಿದ್ದಾರೆ. ಡಾ. ರಾಜ್ಕುಮಾರ್ ಕುಟುಂಬದಲ್ಲಿ ಅನ್ಯೋನ್ಯತೆಯನ್ನು ನಾವು ನೋಡಬಹುದು. ಸಂಸ್ಕಾರ ಸಂಸ್ಕೃತಿ ಇರುವಂತಹ ಕುಟುಂಬ ಅದು. ರಾಘು ಹಾಗೂ ಕುಟುಂಬಕ್ಕೆ ದೇವರು ದಃಖ ಭರಿಸುವ ಶಕ್ತಿ ನೀಡಲಿ ಎಂದು ಸ್ಪಂದನಾ ನೆನೆದು ಮಾಜಿ ಸಚಿವೆ, ಹಿರಿಯ ನಟಿ ಉಮಾಶ್ರೀ ಕಣ್ಣೀರು ಹಾಕಿದರು.
Spandana Vijay Funeral Live: ಅಂತಿಮ ದರ್ಶನ ಪಡೆದ ಬಿ.ಸಿ.ಪಾಟೀಲ್, ಉಮಾಶ್ರೀ
ಸಚಿವ ಡಾ.ಜಿ.ಪರಮೇಶ್ವರ್, ಹಿರಿಯ ನಟ ಹೊನ್ನವಳ್ಳಿ ಕೃಷ್ಣ, ಮಾಜಿ ಸಚಿವರಾದ ಬಿ.ಸಿ.ಪಾಟೀಲ್, ಉಮಾಶ್ರೀ ಮತ್ತು ನಟಿ ಪ್ರಿಯಾಂಕಾ ಉಪೇಂದ್ರ ಅಂತಿಮ ದರ್ಶನ ಪಡೆದರು.
Spandana Vijay Funeral Live: ಸಂತಾಪ ಸೂಚಿಸಿದ ಬಿಸಿ ಪಾಟೀಲ್
ಸ್ಪಂದನಾ ಅವರ ಸಾವು ಬಹಳ ದುಃಖ ತಂದಿದೆ. ಸಾಯುವ ವಯಸ್ಸು ಅವರದಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ದೇವರು ದುಃಖ ಬರಿಸುವ ಶಕ್ತಿ ನೀಡಲಿ ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಸಂತಾಪ ಸೂಚಿಸಿದರು.
Spandana Vijay Funeral Live: ಸ್ಪಂದನಾ ಅಂತಿಮ ದರ್ಶನ ಪಡೆದ ಲಹರಿ ವೇಲು, ನಟಿ ಭಾವನಾ
ಲಹರಿ ವೇಲು, ನಟಿ ಭಾವನಾ, ವಿನೋದ್ರಾಜ್, ನಟಿ ರೂಪಿಕಾ, ನಿರ್ದೇಶಕ ಸಾಯಿ ಪ್ರಕಾಶ್, ನಟಿ ಅಮೂಲ್ಯ, ಶಿಲ್ಪಾ ಗಣೇಶ್, ನಟ ಶರಣ್ ಮತ್ತು ಮಾಸ್ಟರ್ ಆನಂದ್ ಸ್ಪಂದನಾ ಅಂತಿಮ ದರ್ಶನ ಪಡೆದರು.
Spandana Vijay Funeral Live: ಮಧ್ಯಾಹ್ನ 2:30 ರಿಂದ 3:30 ಒಳಗೆ ಅಂತ್ಯಕ್ರಿಯೆ
ಸ್ಪಂದನಾ ಅವರ ಅಂತಿಮ ಯಾತ್ರೆ 2 ಗಂಟೆಗೆ ಪ್ರಾರಂಭ ಮಾಡುತ್ತೇವೆ. ಅವರ ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್ ನಲ್ಲಿ ನೆರವೇರುತ್ತೆ. ಪಾರ್ಥಿವ ಶರೀರ 2 ಗಂಟೆ ತನಕ ಇಲ್ಲೇ ಇರುತ್ತೆ. ಮಧ್ಯಾಹ್ನ ನಂತರ ಅಂತಿಮ ಸಂಸ್ಕಾರ ಮಾಡುತ್ತೇವೆ. ಅಂತ್ಯಕ್ರಿಯೆಯನ್ನು ಹರಿಶ್ಚಂದ್ರ ಘಾಟ್ನಲ್ಲಿ ಮಧ್ಯಾಹ್ನ 2:30 ರಿಂದ 3:30 ಒಳಗೆ ಮಾಡುತ್ತೇವೆ ಎಂದು ಅಂತ್ಯಕ್ರಿಯೆ ಬಗ್ಗೆ ಹೇಳುತ್ತಾ ಭಾವುಕರಾದರು.
Spandana Vijay Funeral Live: ಸ್ಪಂದನಾ ಅಂತಿಮ ದರ್ಶನ ಪಡೆದ ಸಚಿವ ಜಿ ಪರಮೇಶ್ವರ್
ಸಚಿವ ಡಾ.ಜಿ.ಪರಮೇಶ್ವರ್, ವಿನೋದ್ರಾಜ್, ನಟಿ ರೂಪಿಕಾ, ನಿರ್ದೇಶಕ ಸಾಯಿ ಪ್ರಕಾಶ್, ನಟಿ ಅಮೂಲ್ಯ, ಶಿಲ್ಪಾ ಗಣೇಶ್ ಮತ್ತು ನಟ ಶರಣ್ ಸ್ಪಂದನಾ ಅವರ ಅಂತಿಮ ದರ್ಶನ ಪಡೆದರು.
Spandana Vijay Funeral Live: ಅಂತಿಮ ದರ್ಶನ ಪಡೆದ ಹಿರಿಯ ನಟ ದೊಡ್ಡಣ್ಣ
ನಟಿ, ನಿರೂಪಕಿ ಅನುಶ್ರೀ, ಅಶ್ವಿನಿ ಪುನೀತ್ ರಾಜಕುಮಾರ್, ಹಿರಿಯ ನಟ ದೊಡ್ಡಣ್ಣ, ನಟ ವಿನಯ್, ಯುವ ರಾಜ್ಕುಮಾರ್ ಸ್ಪಂದನಾ ಅಂತಿಮ ದರ್ಶನ ಪಡೆದರು.
Spandana Vijay Funeral Live: ಅಂತಿಮ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜಕುಮಾರ್
ನಟ ದಿ. ಪುನಿತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಯುವ ರಾಜಕುಮಾರ್ ಮತ್ತು ವಿನಯ್ ಸ್ಪಂದನಾ ಅವರ ಅಂತಿಮ ದರ್ಶನ ಪಡೆದರು.
Spandana Vijay Funeral Live: ಶ್ರೀರಾಂಪುರಂದ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಸಂಸ್ಕಾರ; ಸಕಲ ಸಿದ್ದತೆಯಲ್ಲಿ ತೊಡಗಿರುವ ಬಿಬಿಎಂಪಿ
ಬೆಂಗಳೂರಿನ ಶ್ರೀರಾಂಪುರಂದ ಹರಿಶ್ಚಂದ್ರ ಘಾಟ್ನಲ್ಲಿ ನಡೆಯಲಿರುವ ಅಂತ್ಯ ಸಂಸ್ಕಾರ ಹಿನ್ನೆಲೆಯಲ್ಲಿ ಹರಿಶ್ಚಂದ್ರ ಘಾಟ್ನಲ್ಲಿ ಬಿಬಿಎಂಪಿ ಅಧಿಕಾರಿಗಳು ಸಕಲ ಸಿದ್ದತೆ ಮಾಡುತ್ತಿದ್ದಾರೆ. 15 ಪೌರ ಕಾರ್ಮಿಕರಿಂದ ಕ್ಲಿನಿಂಗ್ ಕಾರ್ಯ ನಡೆಯುತ್ತಿದೆ. ಬರ್ನಿಂಗ್ ಮಾಡುವ ಮೆಷಿನ್ ಮತ್ತು ಕೊಠಡಿಯನ್ನು ಕಾರ್ಮಿಕರು ಪೇಂಟಿಂಗ್ ಮಾಡುತ್ತಿದ್ದಾರೆ. ಮೃತದೇಹ ಬರ್ನಿಂಗ್ ಮೆಷಿನ್ ಒಳಗೆ ಹೋಗುವ ಸಂದರ್ಭದಲ್ಲಿ ಯಾವುದೇ ಸಮಸ್ಯ ಆಗದಂತೆ ಮುಂಜಾಗ್ರತೆ ವಹಿಸಲಾಗಿದೆ.
Spandana Vijay Funeral Live: ಇಂದು ಸಂಜೆ 4 ಗಂಟೆಗೆ ಶ್ರೀರಾಮಪುರದ ಹರಿಶ್ಚಂದ್ರಘಾಟ್ನಲ್ಲಿ ಅಂತ್ಯಕ್ರಿಯೆ
ಸ್ಪಂದನಾ ವಿಜಯರಾಘವೇಂದ್ರ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಶ್ರೀರಾಮಪುರದ ಹರಿಶ್ಚಂದ್ರಘಾಟ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
Spandana Vijay Funeral Live: ಅಂತಿಮ ದರ್ಶನ ಪಡೆದ ಸಚಿವ ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ, ಶಾಸಕ ಸುನೀಲ್ ಕುಮಾರ್, ಹರತಾಳು ಹಾಲಪ್ಪ, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
Spandana Vijay Funeral Live: ಸ್ಪಂದನಾ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ: ರಾಘವೇಂದ್ರ ರಾಜ್ಕುಮಾರ್
ಹೇಗೆ ರಿಯಾಕ್ಟ್ ಮಾಡಬೇಕು ನನಗೆ ತಿಳಿಯುತ್ತಿಲ್ಲ. ಸ್ಪಂದನಾ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ನಟ ವಿಜಯರಾಘವೇಂದ್ರರನ್ನು ನೋಡುವುದಕ್ಕೆ ಕಷ್ಟ ಆಗುತ್ತೆ ಎಂದು ನಟ ರಾಘವೇಂದ್ರ ರಾಜ್ಕುಮಾರ್ ಹೇಳಿದರು.
Spandana Vijay Funeral Live: ಅಂತಿಮ ದರ್ಶನ ಪಡೆದ ವಿಧಾನಸಭೆ ಸಭಾಪತಿ ಯು.ಟಿ.ಖಾದರ್
ಸಚಿವ ಪ್ರಿಯಾಂಕ್ ಖರ್ಗೆ, ವಿಧಾನಸಭೆ ಸಭಾಪತಿ ಯು.ಟಿ.ಖಾದರ್, ವಿಕ್ರಮ್ ಸೂರಿ, ಪತ್ನಿ, ಹಿರಿಯ ನಟ, ನಿರ್ಮಾಪಕ ಅರವಿಂದ್ ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
Spandana Vijay Funeral Live: ಮೃದು ಸ್ವಭಾವದ ಹುಡುಗಿ ಸ್ಪಂದನಾ: ನಟಿ ಸುಧಾರಾಣಿ
ಸ್ಪಂದನಾ ವಿಜಯರಾಘವೇಂದ್ರ ಅವರ ನಿಧನ ತುಂಬಾ ಬೇಜಾರಾದ ಸಂಗತಿ. ದಂಪತಿದು ಸೈಲೆಂಟ್ ವ್ಯಕ್ತಿತ್ವ. ಅವರ ಕುಟುಂಬದ ಮೇಲೆ ಯಾರ ಕೆಟ್ಟು ಕಣ್ಣು ಬಿತ್ತು ಗೊತ್ತಿಲ್ಲ. ಮಗು ಇನ್ನು ಚಿಕ್ಕದು. ಮೃದು ಸ್ವಭಾವದ ಹುಡುಗಿ ಸ್ಪಂದನಾ. ಲಾಸ್ಟ್ ಮೀಟ್ ಮಾಡಿದ್ದು ನೈಲ್ ಸಲೂನ್ನಲ್ಲಿ ಒಂದು ತಿಂಗಳ ಹಿಂದೆ ಎಂದು ನಟಿ ಸುಧಾರಾಣಿ ಭಾವುಕರಾದರು.
Spandana Vijay Funeral Live: ಪಾರ್ಥಿವ ಶರೀರ ಅಂತಿಮ ದರ್ಶನ ಪಡೆಯುತ್ತಿರುವ ಗಣ್ಯರು
ಸ್ಪಂದನಾ ವಿಜಯರಾಘವೇಂದ್ರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸ್ಪಂದನಾ ತಂದೆ ಬಿ.ಕೆ.ಶಿವರಾಂ ನಿವಾಸದ ಬಳಿ ವ್ಯವಸ್ಥೆ ಮಾಡಲಾಗಿದೆ. ರಾಜ್ಕುಮಾರ್ ಕುಟುಂಬಸ್ಥರು, ನಟಿ ಸುಧಾರಾಣಿ ಕುಟುಂಬ, ಗಾಯಕ ವಿಜಯ ಪ್ರಕಾಶ್, ರಾಘವೇಂದ್ರ ರಾಜ್ಕುಮಾರ್, ನಟ ಕೋಮಲ್, ಹಿರಿಯ ನಟ ಶ್ರೀನಾಥ್, ಹಿರಿಯ ನಟಿ ಗಿರಿಜಾ ಲೋಕೇಶ್ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದರು.
Published On - Aug 09,2023 7:27 AM