ನಾಳೆಯಿಂದ ಆಗಸ್ಟ್ 14ರ ವರೆಗೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ; ಇಲ್ಲಿದೆ ಪೂರ್ಣ ವಿವರ
Metro Purple Line: ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ, ಸ್ವಾಮಿ ವಿವೇಕಾನಂದ ರಸ್ತೆ ಹಾಗೂ ಕೃಷ್ಣರಾಜಪುರ ಮತ್ತು ವೈಟ್ ಫೀಲ್ಡ್ ನಿಲ್ದಾಣಗಳಲ್ಲಿ ಕಾಮಗಾರಿ ಹಿನ್ನೆಲೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕಾಮಗಾರಿ ಪೂರ್ಣಗೊಳಿಸುವ ಹಿನ್ನೆಲೆ ನಾಳೆಯಿಂದ ಆಗಸ್ಟ್ 14ರ ವರೆಗೆ ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಬೆಂಗಳೂರು, ಆಗಸ್ಟ್ 09: ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ಮೆಟ್ರೋ (Metro) ನಿಲ್ದಾಣದದವರೆಗೆ ಮೆಟ್ರೋ ಸೇವೆಗಳನ್ನು ವಿಸ್ತರಿಸುವ ಸಲುವಾಗಿ ಆಗಸ್ಟ್ 10, 11 ಮತ್ತು 14ರಂದು ಮುಂಜಾನೆ 5.00 ಗಂಟೆಯಿಂದ ಬೆಳಗ್ಗೆ 7.00 ಗಂಟೆಯವರೆಗೆ ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಆಗಸ್ಟ್ 10, 11 ರವರೆಗೆ ಮತ್ತೆ ಸ್ಥಗಿತ
ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ ಹಾಗೂ ಕೃಷ್ಣರಾಜಪುರ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳವರೆಗೆ ಮುಂಜಾನೆ 5.00 ಗಂಟೆಯಿಂದ ಬೆಳಗ್ಗೆ 7.00 ಗಂಟೆಯವರೆಗೆ ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕಾಮಗಾರಿಗಾಗಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಆಗಸ್ಟ್ 10, 11 ರವರೆಗೆ ಮತ್ತೆ ಸ್ಥಗಿತಗೊಳಿಸಲಾಗುತ್ತಿದೆ.
ಇದನ್ನೂ ಓದಿ: ಪ್ರವಾಸಿಗರ ಪ್ರವಾಸದ ಕನಸು ನನಸು ಮಾಡಲು ಮುಂದೆ ಬಂದ ಕೆಎಸ್ಆರ್ಟಿಸಿ, ಟೂರ್ ಪ್ಯಾಕೇಜ್ ಮಾಹಿತಿ ಇಲ್ಲಿದೆ
ಎಲ್ಲೆಲ್ಲಿ ಸೇವೆ ಇರುವುದಿಲ್ಲ
ಸದರಿ ದಿನಗಳಂದು ಬೆಳ್ಳಿಗೆ 5.00 ಗಂಟೆಯಿಂದ 7.00 ಗಂಟೆಯವರೆಗೆ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದವರೆಗೆ ಮೆಟ್ರೋ ರೈಲು ಸೇವೆಗಳು ಲಭ್ಯವಿರುತ್ತದೆ. ಇದಲ್ಲದೆ, ಕೆಂಗೇರಿ ನಿಲ್ದಾಣದಿಂದ ರೈಲು ಸೇವೆಯನ್ನು ಚಲ್ಲಘಟ್ಟ ನಿಲ್ದಾಣದವರೆಗೆ ವಿಸ್ತರಿಸಲು ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕಾಮಗಾರಿಗಳಿಗಾಗಿ ಆಗಸ್ಟ್ 14 ರಂದು ಮುಂಜಾನೆ 5.00 ಗಂಟೆಯಿಂದ ಬೆಳಗ್ಗೆ 7.00 ಗಂಟೆಯವರೆಗೆ ಕೆಂಗೇರಿ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ಯಾವುದೇ ಮೆಟ್ರೋ ಸೇವೆಗಳು ಇರುವುದಿಲ್ಲ.
ಇದನ್ನೂ ಓದಿ: Metro Mitra: ಕೊನೇ ಕ್ಷಣದ ಗಡಿಬಿಡಿಯಲ್ಲಿ ಮೆಟ್ರೋ ನಿಲ್ದಾಣಕ್ಕೆ ತೆರಳಲು ನೆರವಾಗಲಿದೆ ‘ಮೆಟ್ರೋ ಮಿತ್ರ’ ಆ್ಯಪ್, ಇಲ್ಲಿದೆ ವಿವರ
ಈ ಸಮಯದಲ್ಲಿ ಬೈಯಪ್ಪನಹಳ್ಳಿ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆ ಲಭ್ಯವಿರುತ್ತದೆ. ಬೆಳಿಗ್ಗೆ 7.00 ಗಂಟೆಯ ನಂತರ, ಬೈಯಪ್ಪನಹಳ್ಳಿ ಮತ್ತು ಕೆಂಗೇರಿ, ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳ ನಡುವೆ ಎಂದಿನಂತೆ ಮೆಟ್ರೋ ರೈಲು ಸೇವೆಗಳು ರಾತ್ರಿ 11.00 ರವರೆಗೆ ಲಭ್ಯವಿರುತ್ತವೆ.
ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಮ್ಮ ಮೆಟ್ರೋ ಪುಯಾಣಿಕರು ಸದರಿ ಬದಲಾವಣೆಯನ್ನು ಗಮನಿಸಿ ಹಾಗೂ ಸಹಕರಿಸುವಂತೆ ಬಿಎಂಆರ್ಸಿಎಲ್ ಕೋರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:29 pm, Wed, 9 August 23