ಪ್ರವಾಸಿಗರ ಪ್ರವಾಸದ ಕನಸು ನನಸು ಮಾಡಲು ಮುಂದೆ ಬಂದ ಕೆಎಸ್ಆರ್​ಟಿಸಿ, ಟೂರ್ ಪ್ಯಾಕೇಜ್ ಮಾಹಿತಿ ಇಲ್ಲಿದೆ

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಇದರಿಂದ ಮಳೆಗಾಲದಲ್ಲಿ ಕಳೆಗಟ್ಟುವ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನು (Tourists) ಕೈಚಾಚಿ ಕರೆಯುತ್ತಿವೆ. ಪ್ರವಾಸಿಗರ ಪ್ರವಾಸದ ಕನಸು ನನಸು ಮಾಡಲು ಕೆಎಸ್ಆರ್​ಟಿಸಿ ಮುಂದೆ ಬಂದಿದೆ.

ಪ್ರವಾಸಿಗರ ಪ್ರವಾಸದ ಕನಸು ನನಸು ಮಾಡಲು ಮುಂದೆ ಬಂದ ಕೆಎಸ್ಆರ್​ಟಿಸಿ, ಟೂರ್ ಪ್ಯಾಕೇಜ್ ಮಾಹಿತಿ ಇಲ್ಲಿದೆ
ಕೆಎಸ್​ಆರ್​ಟಿಸಿ ಬಸ್
Follow us
ರಮೇಶ್ ಬಿ. ಜವಳಗೇರಾ
| Updated By: Digi Tech Desk

Updated on:Aug 09, 2023 | 3:35 PM

ಬೆಂಗಳೂರು, (ಆಗಸ್ಟ್ 09): ಕರ್ನಾಟಕದ (Karnataka) ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆ(Rain) ಸುರಿಯುತ್ತಿದ್ದು, ವಿಶ್ವವಿಖ್ಯಾತ ಶಿವಮೊಗ್ಗದ ಜೋಗ ಜಲಪಾತ(Jog Falls) ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ. ಕೇವಲ ಜೋಗ ಮಾತ್ರವಲ್ಲದೇ ಗಗನಚುಕ್ಕಿ, ಭರಚುಕ್ಕಿ ಫಾಲ್ಸ್ ಭೋರ್ಗರೆಯುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಈ ಜಲಪಾತಗಳ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗಾಗಿ ಕೆಎಸ್​ಆರ್​ಟಿಸಿ ಆಗಸ್ಟ್ 12ರಿಂದ ಟೂರ್ ಪ್ಯಾಕೇಜ್ ಸೇವೆಯನ್ನು ಆರಂಭಿಸಲಿದೆ. ಬೆಂಗಳೂರಿನಿಂದ ಗಗನಚುಕ್ಕಿ ಭರಚುಕ್ಕಿ ಅವಳಿ ಫಾಲ್ಸ್​ ಜೊತೆಗೆ ಜೋಗ ಜಲಪಾತಕ್ಕೆ ಪ್ರವಾಸ ನಿಯೋಜಿಸಿದೆ. ಆ, 12ರಿಂದ ಪ್ರತಿ ವೀಕೆಂಡ್ ಅಂದ್ರೆ ಶುಕ್ರವಾರ ಮತ್ತು ಶನಿವಾರ ಜೋಗ ಜಲಪಾತ ಪ್ರವಾಸವನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: Shakti scheme effect: ಶಕ್ತಿ ಯೋಜನೆಯಿಂದ 2 ತಿಂಗಳಲ್ಲಿ ಮಹಿಳೆಯರಿಂದಲೇ 27 ಕೋಟಿ ಲಾಭ, ನಷ್ಟದ ಹಾದಿಯಲ್ಲಿದ್ದ ಕೆಎಸ್​​ಆರ್​​​ಟಿಸಿಗೆ ಕೋಟಿ ಕೋಟಿ ಆದಾಯ!

ಸಾಗರ, ವರದಮೂಲ ಇಕ್ಕೇರಿ, ಕೆಳದಿ ವೀಕ್ಷಿಸಿ ನಂತ ಜೋಗಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ವಯಸ್ಕರರಿಗೆ 2,500 ರೂ. ಹಾಗೂ ಮಕ್ಕಳಿಗೆ 2,300 ರೂ ಟೂರ್​ ಪ್ಯಾಕೇಜ್​  ಶುಲ್ಕ(ನಾನ್ ಎಸಿ ಸ್ಲೀಪರ್ ಬಸ್) ನಿಗದಿ ಮಾಡಲಾಗಿದೆ.

ಜೋಗ್ ಫಾಲ್ಸ್ ಟೂರ್ ವೇಳಾಪಟ್ಟಿ

ಬೆಂಗಳೂರಿನಿಂದ ರಾತ್ರಿ 9:30ಕ್ಕೆ ಬಸ್ ಹೊರಡಲಿದ್ದು, ಮರುದಿನ ಬೆಳಿಗ್ಗೆ 5 ಗಂಟೆ ವೇಳೆಗೆ ಸಾಗರ ತಲುಪಲಿದೆ. ಬಳಿಕ ಬೆಳಗ್ಗೆ ಪ್ರಯಾಣಿಕರಿಗೆ ಉಪಹಾರಕ್ಕೆ ಸಮಯಾವಕಾಶ ನೀಡಲಾಗುತ್ತದೆ. ನಂತರ ವರದಹಳ್ಳಿ, ವರದಮೂಲ, ಇಕ್ಕೇರಿ ಮತ್ತು ಕೆಳದಿ ಸ್ಥಳಗಳಿಗೆ ಬಸ್ ತೆರಳಲಿದೆ. ನಂತರ ಪ್ರಯಾಣಿಕರನ್ನು ಮಧ್ಯಾಹ್ನ 12:45ಕ್ಕೆ ಬಸ್ ಸಾಗರಕ್ಕೆ ವಾಪಸ್ ಆಗಲಿದ್ದು, ಊಟದ ಬಳಿಕ ಸಾಗರದಿಂದ ಜೋಗ್ ಫಾಲ್ಸ್‌ಗೆ ತೆರಳಲಿದೆ. ಬಳಿಕ ಪ್ರಯಾಣಿಕರಿಗೆ ಸಂಜೆ 7 ರಿಂದ 8 ವರೆಗೆ ಒಂದು ಗಂಟೆ ಶಾಪಿಂಗ್ ಮಾಡಲು ಸಮಯವಕಾಶ ಸಹ ನೀಡಲಾಗುತ್ತದೆ. ಇದೆಲ್ಲ ಮುಗಿದ ಬಳಿಕ ರಾತ್ರಿ 8.30ಕ್ಕೆ ಊಟದ ನಂತರ ಬಸ್ ಸಾಗರದಿಂದ ಬೆಂಗಳೂರಿಗೆ ಹಿಂದಿರುಗಲಿದೆ.

ಬೆಂಗಳುರು ಟು ಸೋಮನಾಥಪುರ

ಹಾಗೇ ಪ್ರತಿ ಶನಿವಾರ ಮತ್ತು ಭಾನುವಾರ ಬೆಂಗಳೂರಿನಿಂದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳಿಗೆ ಪ್ರವಾಸ ಏರ್ಪಡಿಸಲಾಗಿದೆ. ಬೆಂಗಳೂರಿನಿಂದ ಹೊರಟು ಸೋಮನಾಥಪುರ, ತಲಕಾಡು, ಮಧ್ಯರಂಗ ಬಳಿಕ ಭರಚುಕ್ಕಿ ಮತ್ತು ಗಗನಚುಕ್ಕಿ ತೋರಿಸಲಾಗುತ್ತದೆ. ವಯಸ್ಕರರಿಗೆ 450 ರೂ. ಹಾಗೂ ಮಕ್ಕಳಿಗೆ 300 ರೂ. ಪ್ರಯಾಣ ಶುಲ್ಕ ನಿಗದಿ ಮಾಡಲಾಗಿದೆ.

ಟೂರ್ ಪ್ಯಾಕೇಜ್ ಮಾಹಿತಿಯನ್ನು ಟ್ವೀಟ್​ ಮಾಡಿರುವ ಕೆಎಸ್​ಆರ್​ಟಿಸಿ

ಆಸಕ್ತರು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಇವುಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ 7760990287, 776090988ಗೆ ಕರೆ ಮಾಡಬಹುದಾಗಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:30 pm, Wed, 9 August 23

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್