Metro Mitra: ಕೊನೇ ಕ್ಷಣದ ಗಡಿಬಿಡಿಯಲ್ಲಿ ಮೆಟ್ರೋ ನಿಲ್ದಾಣಕ್ಕೆ ತೆರಳಲು ನೆರವಾಗಲಿದೆ ‘ಮೆಟ್ರೋ ಮಿತ್ರ’ ಆ್ಯಪ್, ಇಲ್ಲಿದೆ ವಿವರ

Metro Mitra App By Auto Rickshaw Drivers Union; ಜಯನಗರ ಮತ್ತು ಆರ್‌ವಿ ರಸ್ತೆ ನಿಲ್ದಾಣಗಳಲ್ಲಿ ಮೆಟ್ರೋ ಮಿತ್ರ ಪರೀಕ್ಷಾರ್ಥ ಸಂಚಾರ ಆರಂಭಿಸಲಾಗಿದೆ. ಇದು ಆಗಸ್ಟ್ ಅಂತ್ಯದ ಮೊದಲು ಅಲ್ಲಿ ಅಧಿಕೃತವಾಗಿ ಆರಂಭವಾಗಲಿದೆ. ಬೇಡಿಕೆಗೆ ಅನುಗುಣವಾಗಿ ಪ್ರತಿ ತಿಂಗಳು ಎರಡು ಹೆಚ್ಚಿನ ಸಾಂದ್ರತೆಯ ಮೆಟ್ರೋ ನಿಲ್ದಾಣಗಳನ್ನು ಉಪಕ್ರಮದ ವ್ಯಾಪ್ತಿಗೆ ಸೇರಿಸಲಾಗುತ್ತದೆ.

Metro Mitra: ಕೊನೇ ಕ್ಷಣದ ಗಡಿಬಿಡಿಯಲ್ಲಿ ಮೆಟ್ರೋ ನಿಲ್ದಾಣಕ್ಕೆ ತೆರಳಲು ನೆರವಾಗಲಿದೆ ‘ಮೆಟ್ರೋ ಮಿತ್ರ’ ಆ್ಯಪ್, ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
|

Updated on:Aug 09, 2023 | 2:49 PM

ಬೆಂಗಳೂರು, ಆಗಸ್ಟ್ 9: ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಗಳ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರಯಾಣಿಕರಿಗೆ ನೆರವಾಗಲು ಮತ್ತು ಅವರನ್ನು ನಿಲ್ದಾಣಗಳಿಗೆ ತಲುಪಿಸುವುದಕ್ಕಾಗಿ ಆಟೋ ರಿಕ್ಷಾ ಚಾಲಕರ ಒಕ್ಕೂಟ (ARDU) ನಮ್ಮ ಮಿತ್ರ ಆ್ಯಪ್ (Metro Mitra App) ಅನಾವರಣಗೊಳಿಸುವ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಹೊಸ ಉಪಕ್ರಮದಡಿ ಆಟೋ ರಿಕ್ಷಾ ಚಲಾಯಿಸಲು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. 14 ದಿನಗಳ ತರಬೇತಿಗಾಗಿ 25 ಮಹಿಳೆಯರನ್ನು ಗುರುತಿಸಿದೆ. ಅವರಲ್ಲಿ ಕೆಲವರು ಮೊದಲು ಹಾಲು ಮತ್ತು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು.

ತರಬೇತಿಯ ನಂತರ ನಾವು ಅವರಿಗೆ ಚಾಲನಾ ಪರವಾನಗಿ ಅಥವಾ ಡ್ರೈವಿಂಗ್ ಲೈಸೆನ್ಸ್ ಮತ್ತು ಆಟೋ ರಿಕ್ಷಾ ಖರೀದಿಸಲು ಬ್ಯಾಂಕ್ ಸಾಲವನ್ನು ಪಡೆಯಲು ಸಹಾಯ ಮಾಡುತ್ತೇವೆ ಎಂದು ಆಟೋ ರಿಕ್ಷಾ ಚಾಲಕರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಪಟ್ಟಾಭಿ ರಾಮ ಪಿಎಲ್ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಜಯನಗರ ಮತ್ತು ಆರ್‌ವಿ ರಸ್ತೆ ನಿಲ್ದಾಣಗಳಲ್ಲಿ ಮೆಟ್ರೋ ಮಿತ್ರ ಪರೀಕ್ಷಾರ್ಥ ಸಂಚಾರ ಆರಂಭಿಸಲಾಗಿದೆ. ಇದು ಆಗಸ್ಟ್ ಅಂತ್ಯದ ಮೊದಲು ಅಲ್ಲಿ ಅಧಿಕೃತವಾಗಿ ಆರಂಭವಾಗಲಿದೆ ಎಂದು ಅವರು ಹೇಳುತ್ತಾರೆ. ಬೇಡಿಕೆಗೆ ಅನುಗುಣವಾಗಿ ಪ್ರತಿ ತಿಂಗಳು ಎರಡು ಹೆಚ್ಚಿನ ಸಾಂದ್ರತೆಯ ಮೆಟ್ರೋ ನಿಲ್ದಾಣಗಳನ್ನು ಉಪಕ್ರಮದ ವ್ಯಾಪ್ತಿಗೆ ಸೇರಿಸಲಾಗುತ್ತದೆ. ಆರಂಭದಲ್ಲಿ, ಈಗ ತರಬೇತಿ ಪಡೆಯುತ್ತಿರುವ ಮಹಿಳಾ ಚಾಲಕರು ತಮ್ಮ ನಿವಾಸಕ್ಕೆ ಸಮೀಪವಿರುವ ನಾಗಸಂದ್ರ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಜಯನಗರ ಮತ್ತು ಆರ್‌ವಿ ರಸ್ತೆಯ ಮೆಟ್ರೋ ನಿಲ್ದಾಣಗಳನ್ನು ದಿನಕ್ಕೆ 5,000-6,000 ಪ್ರಯಾಣಿಕರು ಬಳಸುತ್ತಿದ್ದಾರೆ. ಸುತ್ತಲೂ ಟೆಕ್ ಪಾರ್ಕ್‌ಗಳು, ಕಾಲೇಜುಗಳು, ಆಸ್ಪತ್ರೆಗಳು ಮತ್ತು ವಿಶ್ವವಿದ್ಯಾನಿಲಯಗಳಿವೆ. ಹೀಗಾಗಿ ಈ ನಿಲ್ದಾಣಗಳನ್ನು ಪ್ರಯೋಗಾರ್ಥ ಆರಿಸಿಕೊಳ್ಳಲಾಯಿತು ಎಂಬುದನ್ನು ಪಟ್ಟಾಭಿ ಅವರು ವಿವರಿಸಿದ್ದಾರೆ. ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವು ಬೆಂಗಳೂರಿನಲ್ಲಿ ನೋವಿನ ಬಿಂದುವಾಗಿದೆ. ಒಂದೆಡೆ, ಹೆಚ್ಚಿನ ಇಂಧನ ವೆಚ್ಚ ಮತ್ತು ಭಾರೀ ಟ್ರಾಫಿಕ್‌ನಿಂದಾಗಿ ಆಟೋ ಚಾಲಕರು ಸವಾರಿ ನಿರಾಕರಿಸುತ್ತಾರೆ, ಮತ್ತೊಂದೆಡೆ, ಅಪ್ಲಿಕೇಶನ್ ಆಧಾರಿತ ಕ್ಯಾಬ್‌ಗಳ ದರವು ವಿಪರೀತವಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಮೆಟ್ರೋ ನಿಲ್ದಾಣದಲ್ಲಿನ ಅವ್ಯವಸ್ಥೆಯನ್ನು ಪರಿಹರಿಸಲು ಬಿಎಂಆರ್​ಸಿಎಲ್​​ನಿಂದ ವಿಶೇಷ ಕಾರ್ಯಾಚರಣೆ

ಇಪ್ಪತ್ತು ಆಟೋರಿಕ್ಷಾ ಚಾಲಕರು ಪರೀಕ್ಷಾರ್ಥ ಸಂಚಾರದ ಭಾಗವಾಗಿದ್ದಾರೆ. ಈ ಆಟೋಗಳು QR ಕೋಡ್ ಅನ್ನು ಸಹ ಪ್ರದರ್ಶಿಸುತ್ತವೆ, ಚಾಲಕರ ವಿವರಗಳನ್ನು ಪಡೆಯಲು ಜನರು ಸ್ಕ್ಯಾನ್ ಮಾಡಬಹುದು. ಸಾರಿಗೆ ಸಂಬಂಧಿತ ಸಂಸ್ಥೆಗಳಾದ ಆದರ್ಶ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಈ ಉಪಕ್ರಮವನ್ನು ಬೆಂಬಲಿಸುತ್ತಿವೆ ಎಂದು ಪಟ್ಟಾಭಿ ಹೇಳಿರೆ. ಆಟೋ ರಿಕ್ಷಾ ಚಾಲಕರ ಒಕ್ಕೂಟವು ಸುಮಾರು 5,000 ಸದಸ್ಯರನ್ನು ಹೊಂದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:46 pm, Wed, 9 August 23

ತಾಜಾ ಸುದ್ದಿ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?