Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮೀಯ ರೀತಿಯಲ್ಲಿ ಜ್ಯೋತಿಷಿ ಪುತ್ರನ ಕಿಡ್ನಾಪ್ ಮಾಡಿದ ಯುವಕ: 5 ಲಕ್ಷ ರೂ ಡಿಮ್ಯಾಂಡ್, ಬಂಧನ

ಇನ್ನೂ ಮೀಸೆ ಚಿಗುರಿದ ಯುವಕ ಓರ್ವ, ಸಿನಿಮಾ ನೋಡಿ ಜ್ಯೋತಿಷಿ ಪುತ್ರನನ್ನು ಕಿಡ್ನಾಪ್​ ಮಾಡಿ, 5 ಲಕ್ಷ ರೂ. ಡಿಮ್ಯಾಂಡ್​ ಮಾಡಿರುವಂತಹ ಘಟನೆ ಘಟನೆ ಆಗಸ್ಟ್​ 4ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಕಿಡ್ನಾಪ್​ ಪ್ರಕರಣವನ್ನು ಹೆಚ್​ಎಸ್​ ಆರ್​ ಲೇಔಟ್ ಪೊಲೀಸರು ಭೇದಿಸಿದ್ದು, ಅರ್ಜುನ್ (19) ಎಂಬಾತನನ್ನು ಬಂಧಿಸಿದ್ದಾರೆ.

ಸಿನಿಮೀಯ ರೀತಿಯಲ್ಲಿ ಜ್ಯೋತಿಷಿ ಪುತ್ರನ ಕಿಡ್ನಾಪ್ ಮಾಡಿದ ಯುವಕ: 5 ಲಕ್ಷ ರೂ ಡಿಮ್ಯಾಂಡ್, ಬಂಧನ
ಪ್ರಾತಿನಿಧಿಕ ಚಿತ್ರ
Follow us
Jagadisha B
| Updated By: ಗಂಗಾಧರ​ ಬ. ಸಾಬೋಜಿ

Updated on:Aug 09, 2023 | 4:28 PM

ಬೆಂಗಳೂರು, ಆಗಸ್ಟ್​ 09: ಸಿನಿಮೀಯ ರೀತಿಯಲ್ಲಿ ಜ್ಯೋತಿಷಿ (Astrologer) ಪುತ್ರನನ್ನು ಓರ್ವ ಯುವಕ ಕಿಡ್ನಾಪ್ ಮಾಡಿ, 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವಂತಹ ಘಟನೆ ಆಗಸ್ಟ್​ 4ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜ್ಯೋತಿಷಿ ಮಣಿವಾಸಕನ್​ ಎಂಬವವರ 18 ವರ್ಷದ ಪುತ್ರನನ್ನು ಕಿಡ್ನಾಪ್​ ಮಾಡಲಾಗಿತ್ತು. ಸದ್ಯ ಕಿಡ್ನಾಪ್​ ಪ್ರಕರಣವನ್ನು ಹೆಚ್​ಎಸ್​ ಆರ್​ ಲೇಔಟ್ ಪೊಲೀಸರು ಭೇದಿಸಿದ್ದು, ಅರ್ಜುನ್ (19) ಎಂಬಾತನನ್ನು ಬಂಧಿಸಿದ್ದಾರೆ.

ಗ್ಯಾರೇಜ್​ನಲ್ಲಿ ಕೆಲಸ

ಬಂಧಿತ ಯುವಕ ಅರ್ಜುನ್​​ ಮೂಲತಃ ತುಮಾಕೂರಿನವನು. ಪಿಯುಸಿ ಮುಗಿಸಿ ಬೆಂಗಳೂರಿಗೆ ಬಂದು ಪಿಜಿಯಲ್ಲಿ ವಾಸಿಸುತ್ತಿದ್ದ. ಸಾಧನೆ ಮಾಡಬೇಕೆಂದು ಅಂದುಕೊಂಡಿದ್ದವನು ಆದರೆ ಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಿದ್ದ. ಈ ನಡುವೆ ಸಿನಿಮಾ ನೋಡುತಿದ್ದ ಅರ್ಜುನ್​ನಿಂದ ಜ್ಯೋತಿಷಿ ಪುತ್ರನನ್ನು ಕಿಡ್ನಾಪ್​ ಮಾಡುವ ಖತರ್ನಾಕ ಯೋಚನೆ ಬಂದಿದೆ.

ಇದನ್ನೂ ಓದಿ: ಮಂಗಳೂರು: ಮೊಬೈಲ್ ಅಂಗಡಿಗೆ ನುಗ್ಗಿ ಯುವಕರ ಗುಂಪಿನಿಂದ ಮಾಲೀಕನಿಗೆ ಥಳಿತ; ಇಬ್ಬರು ಆರೋಪಿಗಳು ಅಂದರ್​

ಡಮ್ಮಿ ಗನ್​ ಬಳಕೆ

ಜ್ಯೋತಿಷಿ ಮಗ ಮೆಡಿಕಲ್ ಸೀಟ್​ಗಾಗಿ ಕೋಚಿಂಗ್​ಗೆ ತೆರಳುತ್ತಿದ್ದ. ತಮ್ಮದೇ ಕಾರ್​ನಲ್ಲಿ ಕೋಚಿಂಗ್ ತೆರಳುತ್ತಿದ್ದು, ಡ್ರಾಪ್ ಕೇಳುವ ನೆಪದಲ್ಲಿ, ಗನ್ ಹಣೆಗಿಟ್ಟು ಗಾಡಿ ಹೇಳಿದ ಕಡೆ ಹೊಗುವಂತೆ ಸೂಚಿಸಿ ಕಿಡ್ನಾಪ್​ ಮಾಡಲಾಗಿದೆ. ಬಳಿಕ ಜ್ಯೋತಿಷಿ ಹಾಗೂ ಅವರ ಪತ್ನಿಗೆ ವಾಟ್ಸ್​​ ಆ್ಯಪ್ ವಿಡಿಯೋ ಕಾಲ್​ ಮಾಡಿ,​ 5 ಲಕ್ಷ ರೂ. ಡಿಮ್ಯಾಂಡ್​ ಮಾಡಿದ್ದಾನೆ.

ಇದನ್ನೂ ಓದಿ: ಪೊಲೀಸ್ ಇನ್ಸ್​​ಪೆಕ್ಟರ್ ನೇತೃತ್ವದಲ್ಲಿ ಕಳ್ಳ ಪೊಲೀಸ್ ಆಟವಂತೆ: ಹಣ ಬದಲಾವಣೆ-ಅಕ್ರಮ ಬಂಧನ-ಸಿಬ್ಬಂದಿಗೆ ಕಿರುಕುಳ ಆರೋಪ -TV9 Digitalನಲ್ಲಿ ಪ್ರಕರಣ ಬಟಾಬಯಲು

ಬಳಿಕ ಚಿನ್ನ ನೀಡುವುದಾಗಿ ಹೇಳಿ ಜ್ಯೋತಿಷಿ ಪತ್ನಿ ಮನೆಯಿಂದ ಹೊರಟಿದ್ದಾರೆ. ಮತ್ತೊಂದೆಡೆ ಮಗ ಕಿಡ್ನಾಪ್ ಆದ ಬಗ್ಗೆ ಜ್ಯೋತಿಷಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗಾಗಿ ಕಾರ್ಯಾಚರಣೆಗಿಳಿದ ಪೊಲೀಸರಿಂದ ಆರೋಪಿಯನ್ನು ಅರೆಸ್ಟ್​ ಮಾಡಿದ್ದು, ಬಳಿಕ ಆತ ಹೆದರಿಸಲು ಬಳಸಿದ ಗನ್​ ಡಮ್ಮಿ ಎನ್ನುವುದು ಪತ್ತೆ ಆಗಿದೆ.

ಸಿನಿಮಾಗಳಲ್ಲಿ ಬಳಸುವ ಮಾದರಿಯ ಗನ್ ಆರ್ಡರ್ ಕೊಟ್ಟು ಮಾಡಿಸಿಕೊಂಡಿದ್ದ. 38 ಸಾವಿರ ರೂ. ಕೊಟ್ಟು ಡಮ್ಮಿ ಗನ್ ಖರೀದಿ ಮಾಡಿದ್ದ. ಬಳಿಕ ಜ್ಯೋತಿಷಿ ನಿವಾಸದ ಬಳಿ ಒಂದು ತಿಂಗಳ ವಾಚ್​ ಮಾಡಿದ್ದ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:27 pm, Wed, 9 August 23

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ