ಧಾರವಾಡದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ; 510 ಗ್ರಾಂ ಗಾಂಜಾ ಜಪ್ತಿ
ನಿನ್ನೆ(ಆ.8) ಅಂತರ್ರಾಜ್ಯ ಡ್ರಗ್ ಪೆಡ್ಲರ್ಗಳೊಂದಿಗೆ ನಂಟು ಹೊಂದಿದ್ದ ಎಂಬ ಆರೋಪದ ಮೇಲೆ ಹುಬ್ಬಳ್ಳಿಯಲ್ಲಿ ಓರ್ವ ಡ್ರಗ್ ಪೆಡ್ಲರ್ನನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಇಂದು(ಆ.9) ಧಾರವಾಡದ ತಡಸಿನಕೊಪ್ಪ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ. ದರ್ಶನ ದುಗ್ಗಾಣಿ, ಗುರುರಾಜ ಯರೇಸೀಮಿ, ಮಂಜುನಾಥ ಮಾನೆ ಬಂಧಿತರು.
ಧಾರವಾಡ, ಆ.9: ಮಂಗಳೂರು, ರಾಯಚೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದ ಬೆನ್ನಲ್ಲೇ ಇದೀಗ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ(Hubballi-Dharwad)ದಲ್ಲಿ ಇಂತಹ ಘಟನೆಗಳು ಬೆಳಕಿಗೆ ಬಂದಿದೆ. ಹೌದು, ನಿನ್ನೆ(ಆ.8) ಹುಬ್ಬಳ್ಳಿಯಲ್ಲಿ ಓರ್ವ ಡ್ರಗ್ ಪೆಡ್ಲರ್ನನ್ನು ಬಂಧಿಸಿದ್ದರು. ಇಂದು ಧಾರವಾಡದ ತಡಸಿನಕೊಪ್ಪ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ. ದರ್ಶನ ದುಗ್ಗಾಣಿ, ಗುರುರಾಜ ಯರೇಸೀಮಿ, ಮಂಜುನಾಥ ಮಾನೆ ಬಂಧಿತರು.
ಇನ್ಸ್ಪೆಕ್ಟರ್ ಸಂಗಮೇಶ ನೇತ್ರತ್ವದಲ್ಲಿ ದಾಳಿ
ಇನ್ನು ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಸಂಗಮೇಶ ನೇತ್ರತ್ವದಲ್ಲಿ ದಾಳಿ ಮಾಡಲಾಗಿದ್ದು, ಈ ವೇಳೆ ಐವರು ಆರೋಪಿಗಳ ಫೈಕಿ ಇಬ್ಬರು ಪರಾರಿಯಾಗಿದ್ದಾರೆ. ಬಂಧಿತ ಮೂವರು ಆರೋಪಿಗಳಿಂದ 510 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂತರ್ರಾಜ್ಯ ಡ್ರಗ್ ಪೆಡ್ಲರ್ಗಳೊಂದಿಗೆ ನಂಟು ಹೊಂದಿದ್ದ ಹುಬ್ಬಳ್ಳಿ ಮೂಲದ ಯುವಕನ ಬಂಧನ
ನಿನ್ನೆ ಅಂತರ್ರಾಜ್ಯ ಡ್ರಗ್ ಪೆಡ್ಲರ್ಗಳೊಂದಿಗೆ ಸಂಪರ್ಕ ಹೊಂದಿದ್ದ ಹುಬ್ಬಳ್ಳಿ ಮೂಲದ ಸೂರಜಗೌಡ ಕಾನಗೌಡರ ಎಂಬ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದವನಾದ ಸೂರಜಗೌಡ ನಗರದ ಜನತಾ ಬಜಾರ್‌ನಲ್ಲಿರುವ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ಹಲವು ತಿಂಗಳಿಂದ ಅಂತಾರಾಜ್ಯ ಡ್ರಗ್ ಪೆಡ್ಲರ್ಗಳೊಂದಿಗೆ ಸಂಬಂಧ ಹೊಂದಿದ್ದ ಎಂಬುದು ತಮಿಳನಾಡಿನ ಪೊಲೀಸರ ತನಿಖೆಯಿಂದ ಬಹಿರಂಗವಾಗಿತ್ತು. ಈ ಹಿನ್ನಲೆ ಇದೀಗ ಆತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಗಾಂಜಾ ಮಾರಾಟ; ಅರೋಪಿಯನ್ನ ಬಂಧಿಸಿದ ಪೊಲೀಸರು, 5 ಕೆಜಿಗೂ ಅಧಿಕ ಗಾಂಜಾ ಜಪ್ತಿ
ಇನ್ನು ಆರೋಪಿ ಸೂರಜಗೌಡ ಮೇಲೆ ನಿರ್ಬಂಧಿತ ಮೆಡಿಷನ್ ಸಹ ಮಾರಾಟ ಮಾಡುತ್ತಿದ್ದ ಆರೋಪ ಕೂಡ ಕೇಳಿ ಬಂದಿತ್ತು. ಈ ಜಾಲವನ್ನು ತಮಿಳುನಾಡಿನ ಕೊಯಮತ್ತೂರಿನ ಪೀಲಮೆಡು ಠಾಣೆಯ ಪೊಲೀಸರು NDPS ಆ್ಯಕ್ಟ್ ಅಡಿ ಭೇದಿಸಿದ್ದರು. ಬಳಿಕ ಅಲ್ಲಿನ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದ ವೇಳೆ ಹುಬ್ಬಳ್ಳಿ ಮೂಲದ ಸೂರಜ್‌ಗೌಡನ ಹೆಸರು ಹೊರಬಂದಿತ್ತು. ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ತಮಿಳುನಾಡಿನ ಕೊಯಮತ್ತೂರು ಪೊಲೀಸರು, ಈ ಜಾಲದ ಪತ್ತೆಗೆ ಹುಬ್ಬಳ್ಳಿಗೆ ಆಗಮಿಸಿದ್ದರು.
ನಿರ್ಬಂಧಿತ ಮೆಡಿಷನ್ ಖರೀದಿಸುವ ನೆಪದಲ್ಲಿ ಆಗಮಿಸಿ ವಿಚಾರಣೆ
ಸೂರಜ್‌ಗೌಡನನ್ನು ಜನತಾ ಬಜಾರ್‌ಗೆ ಕರೆಯಿಸಿಕೊಂಡು, ನಿರ್ಬಂಧಿತ ಮೆಡಿಷನ್ ಖರೀದಿಸುವ ನೆಪದಲ್ಲಿ ಆಗಮಿಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಸೂರಜ್ ಬಲೆಗೆ ಬಿದ್ದಿದ್ದ. ಇನ್ನು ಸೂರಜಗೌಡ ಬಂಧನಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಹಾಗೂ ಉಪನಗರ ಪೊಲೀಸರಿಗೆ ಪೀಲಮೆಡು ಪೊಲೀಸರು ಮಾಹಿತಿ ನೀಡಿದ್ದರು. ಬಳಿಕ ಆತನನ್ನು ಬಂಧಿಸಲಾಗಿತ್ತು. ಇದೀಗ ಧಾರವಾಡದಲ್ಲಿ ಗಾಂಜಾ ಕೇಸ್ ಬೆಳಕಿಗೆ ಬಂದಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:06 am, Wed, 9 August 23