ವಿದ್ಯಾರ್ಥಿಗಳನ್ನೇ ಟಾರ್ಗೆಟ್​ ಮಾಡಿ ಗಾಂಜಾ ಮಾರಾಟ; ಅರೋಪಿಯನ್ನ ಬಂಧಿಸಿದ ಪೊಲೀಸರು, 5 ಕೆಜಿಗೂ ಅಧಿಕ ಗಾಂಜಾ ಜಪ್ತಿ

ರಾಜ್ಯದಲ್ಲಿ ಎಷ್ಟೇ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿಗೆ ತಂದರೂ ಡ್ರಗ್ಸ್​, ಗಾಂಜಾ ಹಾವಳಿಗೆ ಬ್ರೇಕ್​ ಬೀಳುತ್ತಿಲ್ಲ. ಅದರಂತೆ ಇದೀಗ ಗಾಂಜಾ ಮಾರುತ್ತಿದ್ದ ಆರೋಪಿಯನ್ನ ಪೀಣ್ಯಾ ಪೊಲೀಸರು ಸತತ 8ನೇ ಬಾರಿ ಬೆನ್ನಟ್ಟಿ ಬಂಧಿಸಿದ್ದಾರೆ.

ವಿದ್ಯಾರ್ಥಿಗಳನ್ನೇ ಟಾರ್ಗೆಟ್​ ಮಾಡಿ ಗಾಂಜಾ ಮಾರಾಟ; ಅರೋಪಿಯನ್ನ ಬಂಧಿಸಿದ ಪೊಲೀಸರು, 5 ಕೆಜಿಗೂ ಅಧಿಕ ಗಾಂಜಾ ಜಪ್ತಿ
ಆರೋಪಿ
Follow us
ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 06, 2023 | 7:54 AM

ಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿ ಎಷ್ಟೇ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿಗೆ ತಂದರೂ ಡ್ರಗ್ಸ್(Drugs)​, ಗಾಂಜಾ ಹಾವಳಿಗೆ ಬ್ರೇಕ್​ ಬೀಳುತ್ತಿಲ್ಲ. ಇತ್ತೀಚೆಗಷ್ಟೇ ಗೃಹ ಸಚಿವ ಜಿ.ಪರಮೇಶ್ವರ್​ ಅವರು ಈ ಕುರಿತು ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮಕ್ಕೆ ಜಾರಿ ಮಾಡಿದ್ದರು. ಎಲ್ಲಾ ಕಾಲೇಜುಗಳಿಗೆ ತೆರಳಿ ಇದರ ಬಗ್ಗೆ ಜಾಗೃತಿ ಮೂಡಿಸಲು ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಗಾಂಜಾ ಮಾರುತ್ತಿದ್ದ ಆರೋಪಿಯನ್ನ ಪೀಣ್ಯಾ ಪೊಲೀಸರು ಸತತ 8ನೇ ಬಾರಿ ಬೆನ್ನಟ್ಟಿ ಬಂಧಿಸಿದ್ದಾರೆ. ಅಕಿಲ್(25) ಬಂಧಿತ ಆರೋಪಿ. ಇತನ ಬಳಿ 5ಕೆಜಿಗೂ ಅಧಿಕ ಗಾಂಜಾ ಜಪ್ತಿ ಮಾಡಲಾಗಿದೆ.

ಹೊರ ರಾಜ್ಯದ ಕಾರ್ಮಿಕರು, ವಿದ್ಯಾರ್ಥಿಗಳೇ ಇತನ ಟಾರ್ಗೆಟ್

ಇನ್ನು ಈ ಖತರ್ನಾಕ್​ ಆರೋಪಿ ಕೈಗಾರಿಕಾ ಪ್ರದೇಶ, ಶಿವಪುರ ಕೆರೆ, ಗ್ರೌಂಡ್, ಸೇರಿದಂತೆ ಹಲವು ಕಡೆ ಮಾರಾಟ ಮಾಡುತ್ತಿದ್ದ. ಆದರೆ, ಒಂದು ಸಾರಿ ವ್ಯಾಪಾರ ಮಾಡಿದ್ದ ಸ್ಥಳದಲ್ಲಿ ಮತ್ತೊಂದು ಬಾರಿ ಬರುತ್ತಿರಲಿಲ್ಲ. ಜೊತೆಗೆ ಹೊರ ರಾಜ್ಯದ ಕಾರ್ಮಿಕರು, ವಿದ್ಯಾರ್ಥಿಗಳನ್ನೇ ಇತ ಟಾರ್ಗೆಟ್ ಮಾಡಿಕೊಂಡಿದ್ದ. ಇದೀಗ ಪಿಎಸ್​ಐ ಇಬ್ರಾಹಿಂ ನೇತೃತ್ವದಲ್ಲಿ ತಂಡ ರಚಿಸಿಕೊಂಡು ಪೆಡ್ಲರ್​ನನ್ನ ಬಂಧಿಸಲಾಗಿದೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋ ಟ್ರೋಪಿಕ್ ಸಬ್ ಸ್ಟ್ಯಾನ್ಸ್ ಅಕ್ಟ್ 1985ಅಡಿಯಲ್ಲಿ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Ganja: ವೈದ್ಯಕೀಯ ಲೋಕಕ್ಕೆ ನಶೆ ಏರಿಸಿದ ಗಾಂಜಾ, ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಅರೆಸ್ಟ್

ಬೆಂಗಳೂರಿನ ಮಾದಕಲೋಕಕ್ಕೆ ಮತ್ತೊಂದು ಡ್ರಗ್ ಎಂಟ್ರಿ; ಯಾವುದು ಆ ಮಾದಕವಸ್ತು?

ಇನ್ನು ಪೊಲೀಸರ ಸಾಲು ಸಾಲು ಭೇಟೆಗಳ ನಡುವೆಯೂ ಡ್ರಗ್ಸ್​ ಹಾವಳಿ ನಿಲ್ಲುತ್ತಿಲ್ಲ. ಈ ಡ್ರಗ್ಸ್​ಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದರೆ, ಇತ್ತ ಮತ್ತೊಂದು ಡ್ರಗ್​ ಬೆಂಗಳೂರಿನ ಮಾದಕಲೋಕಕ್ಕೆ ಎಂಟ್ರಿಕೊಟ್ಟಿದೆ. ಹೌದು ರಾಜಸ್ಥಾನದಿಂದ ಹೊಸ ಮಾದರಿಯ ಮಾದಕ ವಸ್ತು ಎಂಟ್ರಿ ಕೊಟ್ಟಿದೆ. ಅಸಲಿಗೆ ಇದಕ್ಕೆ ವಿದೇಶದಲ್ಲಿ ಭಾರಿ ಬೆಲೆ ಇದೆ.

ಯಾವುದು ಆ ಮಾದಕವಸ್ತು? ಅದು ಬರುತ್ತಿರೊದೆಲ್ಲಿಂದ..?

ಈ ಗಾಂಜಾ ಆಯ್ತು, ಬ್ರೌನ್ ಎಂಡಿಎಂಎ ಕೂಡ ಆಯ್ತು. ಇದೀಗ ರಾಜಸ್ಥಾನದಿಂದ ನಾನ್ ಸಿಂಥೆಟಿಕ್ ಡ್ರಗ್​ ಆದ ಪಪ್ಪಿಸ್ಟ್ರಾ, ಮಾರ್ಫೀನ್ ಎಂಬ ಹೊಸ ಮಾದಕವಸ್ತು ಸದ್ದಿಲ್ಲದೇ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿದೆ. ನೋಡುವುದಕ್ಕೆ ಬೆಳ್ಳುಳ್ಳಿ ಆಕಾರದಲ್ಲಿರುವ ಈ ನಾನ್ ಸಿಂಥೆಟಿಕ್ ಡ್ರಗ್​ಗೆ ಎಲ್ಲಿಲ್ಲದ ಡಿಮ್ಯಾಂಡ್ ಇದೆ. ಬೆಳ್ಳುಳ್ಳೀ ಮಾದರಿಯಲ್ಲಿರುವ ಪಪ್ಪಿ ಸ್ಟ್ರಾವನ್ನು ಜಜ್ಜಿ ಪೌಡರ್ ಆಗಿ ಬದಲಾವಣೆ ಮಾಡಿ, ಬಳಿಕ ಅದನ್ನು ಬಹಳಷ್ಟು ದಿನ ಒಣಗಿಸುತ್ತಾರೆ. ನಂತರ ಅದನ್ನು ನೀರಿಗೆ ಹಾಕಿ ಕುದಿಸಿ ಕುಡಿಯುತ್ತಾರೆ. ನಾನ್ ಸಿಂಥೆಟಿಕ್ ಪಪ್ಪಿಸ್ಟ್ರಾ ಪಾರ್ಟಿಗಳಲ್ಲೂ ಸಹ ಬಳಕೆಯಲ್ಲಿದೆ.

ಇದನ್ನೂ ಓದಿ:Video Viral : ಕೇದಾರನಾಥಕ್ಕೆ ತೆರಳುವ ಮಾರ್ಗದಲ್ಲಿ ಕುದುರೆಗೆ ಒತ್ತಾಯ ಪೂರಕವಾಗಿ ಗಾಂಜಾ ನೀಡಿ ಹಿಂಸೆ, ನೆಟ್ಟಿಗರು ಅಕ್ರೋಶ

ಮತ್ತೊಂದೆಡೆ ಪಪ್ಪಿ ಸ್ಟ್ರಾಗಳಿಂದ ಮಾರ್ಫಿನ್ ಎಂಬ ಮತ್ತೊಂದು ಡ್ರಗ್ ತಯಾರಿಕೆ

ಇನ್ನು ಇದೇ ಪಪ್ಪಿ ಸ್ಟ್ರಾನಿಂದ ತೆಗೆದ ಎಣ್ಣೆಯಿಂದ ಮತ್ತೊಂದು ಡ್ರಗ್ ತಯಾರಿ ಮಾಡುತ್ತಾರೆ. ಹೌದು ಬಳಿಕ ಅದನ್ನು ನಶೆ ಏರಿಸೊ ವಸ್ತುವಾಗಿ ಬಳಸುತ್ತಾರೆ. ಮಾರ್ಫಿನ್ ಕ್ಯಾನ್ಸರ್ ರೋಗಕ್ಕೂ ಸಹ ಮದ್ದಾಗಿ ಬಳಸುತ್ತಾರೆ. ಸದ್ಯ ಬೆಂಗಳೂರಿನಲ್ಲಿ ಎರಡು ಮಾದರಿಯ ಡ್ರಗ್ ಬೀಡು ಬಿಟ್ಟಿದ್ದು, ನಾನ್ ಸಿಂಥೇಟಿಕ್ ಡ್ರಗ್ ಭೇಟೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:53 am, Thu, 6 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ