ಗಾಂಜಾ ಪೆಡ್ಲರ್​​ಗಳ ಬೆನ್ನತ್ತಿ ನೆರೆ ರಾಜ್ಯಕ್ಕೆ ತೆರಳಿದ ಬೆಂಗಳೂರು ಪೊಲೀಸರು: ಮಹಾರಾಷ್ಟ್ರದಲ್ಲಿ ನಡೆಯಿತು ಸಿನಿಮಿಯ ಘಟನೆ

ನಾಲ್ವರು ಗಾಂಜಾ ಪೆಡ್ಲರ್​​​​ಗಳನ್ನು ಬೆಂಗಳೂರು ಪೊಲೀಸರು ಸಿನಿಮಿಯ ರೀತಿ ಬಂಧಿಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆ ಯಾವ ಸಿನಿಮಾ ಕಥೆಗಿಂತಲೂ ಕಡಿಮೆ ಇಲ್ಲ. ಏನಿದು ಸ್ಟೋರಿ ಇಲ್ಲಿದೆ ಓದಿ..

ಗಾಂಜಾ ಪೆಡ್ಲರ್​​ಗಳ ಬೆನ್ನತ್ತಿ ನೆರೆ ರಾಜ್ಯಕ್ಕೆ ತೆರಳಿದ ಬೆಂಗಳೂರು ಪೊಲೀಸರು: ಮಹಾರಾಷ್ಟ್ರದಲ್ಲಿ ನಡೆಯಿತು ಸಿನಿಮಿಯ ಘಟನೆ
ಬಂಧಿತ ಆರೋಪಿಗಳು
Follow us
| Updated By: ವಿವೇಕ ಬಿರಾದಾರ

Updated on:Jul 03, 2023 | 3:08 PM

ಬೆಂಗಳೂರು: ಬೆಂಗಳೂರು ಪೊಲೀಸರು (Bengaluru Police) ಮಾದಕ ವಸ್ತುಗಳ ವಿರುದ್ಧ ಸಮರ ಸಾರಿದ್ದಾರೆ. ನಗರವನ್ನು ಡ್ರಗ್ಸ್​​ ಮತ್ತು ಗಾಂಜಾ ಮುಕ್ತವನ್ನಾಗಿಸಲು ಪಣತೊಟ್ಟಿದ್ದಾರೆ. ಈ ಹಿನ್ನೆಲೆ ಕಳೆದ ಕೆಲ ದಿನಗಳ ಹಿಂದಿನಿಂದ ಪಬ್​, ಬಾರ್ ಆಂಡ್​​ ರೆಸ್ಟೋರೆಂಟ್​ ಮತ್ತು ಮಾದಕ ವಸ್ತುಗಳ ಅಡ್ಡೆಗಳ ಮೇಲೆ ದಾಳಿ ಮಾಡಿ ಅನೇಕರನ್ನು ಬಂಧಿಸಿದ್ದಾರೆ. ಅದರಂತೆ ಇದೀಗ ನಾಲ್ವರು ಗಾಂಜಾ ಪೆಡ್ಲರ್​​​​ಗಳನ್ನು (Marijuana peddler) ಬೆಂಗಳೂರು ಪೊಲೀಸರು ಸಿನಿಮಿಯ ರೀತಿ ಬಂಧಿಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆ ಯಾವ ಸಿನಿಮಾ ಕಥೆಗಿಂತಲೂ ಕಡಿಮೆ ಇಲ್ಲ. ಸೈಯದ್, ಅಮೂಲ್, ಆಕಾಶ್, ರಾಹುಲ್ ಬಂಧಿತ ಆರೋಪಿಗಳು. ಬಂಧಿತರಿಂದ 50 ಲಕ್ಷ ಮೌಲ್ಯದ 96 ಕೆಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ.

ಹೀಗೆ ಮಾದಕ ವಸ್ತುಗಳ ವಿರುದ್ಧ ಸಮರ ಸಾರಿದ ಬೆಂಗಳೂರು ನಗರ ಪೊಲೀಸರು ಗಾಂಜಾ ಸೇವಿಸುತ್ತಿದ್ದ ಓರ್ವ ಆರೋಪಿಯನ್ನು ಗಿರಿನಗರ ಪೊಲೀಸರು​ ಬಂಧಿಸಿದರು. ಈತನ ಬಂಧನದ ನಂತರ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಹಲವು ವಿಚಾರಗಳು ತಿಳಿದವು.

ಗಾಂಜಾ ಪೆಡ್ಲರ್​​ ಕುಟುಂಬಸ್ಥರ ಹೈಡ್ರಾಮಾ

ಮಹಾರಾಷ್ಟ್ರ ರಾಜ್ಯದ ಜಲನಾ ಜಿಲ್ಲೆಯಲ್ಲಿ ಜೈಪಾಲ್​ ಎಂಬ ಉಪನಾಮದ ಕುಂಟುಂಬ ವಾಸವಾಗಿದೆ. ಈ ಕುಟುಂಬದ ಅಮೂಲ್, ಆಕಾಶ್, ರಾಹುಲ್ ಎಂಬ ಮೂವರು ಸದಸ್ಯರು ಗ್ಯಾರೇಜ್ ಇಟ್ಟಿದ್ದಾರೆ. ಈ ಗ್ಯಾರೆಂಜ್​ನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಈ ಮೂವರಿಗೆ ಕಳೆದ 2 ವರ್ಷಗಳ ಹಿಂದೆ ಸೈಯದ್​ ಎಂಬ ಗಾಂಜಾ ಪೆಡ್ಲರ್​ ಪರಿಚಯವಾಗುತ್ತದೆ.​

ಇದನ್ನೂ ಓದಿ: Bengaluru Traffic Police: ಡ್ರಿಂಕ್ ಆ್ಯಂಡ್ ಡ್ರೈವ್ ತಪ್ಪಿಸಲು ಸಂಚಾರಿ ಪೊಲೀಸರು ಏನು ಮಾಡುತ್ತಿದ್ದಾರೆ ನೋಡಿ

ಈತ ಅಮೂಲ್, ಆಕಾಶ್, ರಾಹುಲ್​ಗೆ ಗಾಂಜಾ ದಂಧೆ ಬಗ್ಗೆ ತಲೆ ತುಂಬಿದ್ದಾನೆ. ಈತನ ಮಾತಿಗೆ ಮರುಳಾದ ಮೂವರು ಗಾಂಜಾ ದಂಧೆಗೆ ಇಳಿದಿದ್ದಾರೆ. ನಂತರ ಓರಿಸ್ಸಾದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರುತ್ತಿದ್ದರು. ಹೀಗೆ ಇವರಿಂದ ಗಾಂಜಾ ಪಡೆದು ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಈತನಿಂದ ಗಾಂಜಾ ಮೂಲ ತಿಳಿದ ಪೊಲೀಸರು ವಿಶೇಷ ತಂಡ ರಚಿಸಿಕೊಂಡು ಸೈಯದ್, ಅಮೂಲ್, ಆಕಾಶ್, ರಾಹುಲ್​​ನನ್ನು ಬಂಧಿಸಲು ಮಹಾರಾಷ್ಟ್ರದ ಜಲನಾ ಜಿಲ್ಲೆಗೆ ತೆರಳುತ್ತಾರೆ. ಅಲ್ಲಿ ಆರೋಪಿಗಳು ಹೈಡ್ರಾಮಾ ಶುರು ಮಾಡಿಕೊಂಡಿದ್ದರು. ಬಂಧನದ ವೇಳೆ ಪೊಲೀಸರ ಮೇಲೆಯೇ ಆರೋಪಿಗಳ ಕುಟುಂಬಸ್ಥರು ಹಲ್ಲೆ ಮಾಡಲು ಯತ್ನಿಸಿದ್ದಾರೆ.

ಹೇಗೋ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿನತ್ತ ಹೊರಟಿದ್ದರು. ಇವರನ್ನು ಬೆನ್ನುಹತ್ತಿ ಆರೋಪಿಗಳ ಕುಟುಂಬಸ್ಥರು ಬಂದಿದ್ದಾರೆ. ಹಾಗೇ ದಾರಿ ಮಧ್ಯೆ ಪೊಲೀಸ್​ ಠಾಣೆಯಲ್ಲಿ ಬೆಂಗಳೂರು ಪೊಲೀಸರ ವಿರುದ್ಧ ಕುಟುಂಬಸ್ಥರು ಅಪಹರಣದ ದೂರು ದಾಖಲಿಸಿದ್ದಾರೆ.

ಈ ಹಿನ್ನೆಲೆ ಮಹಾರಾಷ್ಟ್ರ ಪೊಲೀಸರು ಬೆಂಗಳೂರು ಪೊಲೀಸರನ್ನು ಚೇಸ್ ಮಾಡಿಕೊಂಡು ಬಂದಿದ್ದಾರೆ. ನಂತರ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯ ಟೋಲ್​ ಬಳಿ ಮಹಾರಾಷ್ಟ್ರ ಪೊಲೀಸರು ಬೆಂಗಳೂರು ಪೊಲೀಸರನ್ನು ತಡೆದು ಪರಿಶೀಲನೆ ಮಾಡಿದರು.

ಈ ವೇಳೆ ಬೆಂಗಳೂರು ಪೊಲೀಸರು ಗಾಂಜಾ ದಂಧೆ ಬಗ್ಗೆ ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಬಳಿಕ ಮಹಾರಾಷ್ಟ್ರ ಪೊಲೀಸರು ಆರೋಪಿಗಳನ್ನು ಕರೆದೊಯ್ಯಲು ಅನುಮತಿ ನೀಡಿದ್ದಾರೆ. ಸದ್ಯ ಗಿರಿನಗರ ಪೊಲೀಸರು ಆರೋಪಿಗಳನ್ನು ಬೆಂಗಳೂರಿಗೆ ಕರೆತಂದಿದ್ದಾರೆ. ಗಿರಿನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:07 pm, Mon, 3 July 23