ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​ : ಮೊದಲ ಹಂತದಲ್ಲಿ 80 ಅರ್ಜಿಗಳು ತಿರಸ್ಕೃತ

Edited By:

Updated on: Jan 25, 2026 | 9:42 PM

ಕೋಗಿಲು ಲೇಔಟ್ ಒತ್ತುವರಿದಾರರಿಗೆ ಆಘಾತಕಾರಿ ಸುದ್ದಿ ಎದುರಾಗಿದೆ. 167 ಅರ್ಜಿಗಳಲ್ಲಿ 80 ಅರ್ಜಿಗಳು ತಿರಸ್ಕೃತಗೊಂಡಿವೆ. ಡಿಸೆಂಬರ್ 20ರಂದು ತೆರವುಗೊಂಡಿದ್ದ ಅಕ್ರಮ ಮನೆಗಳ ನಿವಾಸಿಗಳಿಗೆ ಸರ್ಕಾರ ಮನೆ ಹಂಚಿಕೆಯ ಭರವಸೆ ನೀಡಿತ್ತು. ಆದರೆ ಈಗ ಅವರ ಅರ್ಜಿಗಳೇ ತಿರಸ್ಕೃತಗೊಂಡಿದ್ದು, ಸೂರು ಕಳೆದುಕೊಂಡವರು ಟೆಂಟ್, ಟರ್ಪಲ್‍ಗಳಲ್ಲಿ ವಾಸ ಮುಂದುವರಿಸಬೇಕಾದ ಸ್ಥಿತಿ ಉದ್ಭವಿಸಿದೆ.

ಬೆಂಗಳೂರು, ಜನವರಿ 25: ಕೋಗಿಲು ಲೇಔಟ್ ಒತ್ತುವರಿದಾರರಿಗೆ ಆಘಾತಕಾರಿ ಸುದ್ದಿ ಎದುರಾಗಿದೆ. ಮನೆ ಹಂಚಿಕೆಗಾಗಿ ಸಲ್ಲಿಕೆಯಾಗಿದ್ದ 167 ಅರ್ಜಿಗಳ ಪೈಕಿ ಮೊದಲ ಹಂತದಲ್ಲಿ 80 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಮನೆ ಒದಗಿಸುವ ಭರವಸೆ ನೀಡಲಾಗಿದ್ದ 26 ಜನರ ಅರ್ಜಿಗಳೂ ಕೂಡ ರಿಜೆಕ್ಟ್​​ ಆಗಿರುವುದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಉಳಿದ 87 ಅರ್ಜಿಗಳ ಪರಿಶೀಲನಾ ಕಾರ್ಯ ಪ್ರಸ್ತುತ ನಡೆಯುತ್ತಿದೆ. ಡಿಸೆಂಬರ್ 20ರಂದು ಕೋಗಿಲು ಲೇಔಟ್‍ನಲ್ಲಿ ಅಕ್ರಮ ಮನೆಗಳನ್ನು ತೆರವುಗೊಳಿಸಲಾಗಿತ್ತು. ವಿಚಾರ ದೇಶಾದ್ಯಂತ ಚರ್ಚೆಯಾದ ಬಳಿಕ ಕೆಲವೇ ದಿನಗಳಲ್ಲಿ ಮನೆ ಹಂಚಿಕೆ ಮಾಡುವುದಾಗಿ ನಿವಾಸಿಗಳಿಗೆ ಸರ್ಕಾರದಿಂದ ಭರವಸೆ ನೀಡಲಾಗಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jan 25, 2026 09:39 PM