ಅರಣ್ಯ ಭೂಮಿ ಒತ್ತುವರಿ ತೆರವಿಗೆ ಯುದ್ಧೋಪಾದಿಯಲ್ಲಿ 25 ಜೆಸಿಬಿ ಯಂತ್ರಗಳು ಹೊರಟವು!

| Updated By: ಸಾಧು ಶ್ರೀನಾಥ್​

Updated on: Aug 24, 2023 | 1:45 PM

Forest land encroachment: ಕೋಲಾರ: ಅರಣ್ಯ ಇಲಾಖೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ. ಕಾರ್ಯಾಚರಣೆಯ ದೃಶ್ಯಗಳನ್ನು ದೋಣ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಇಂದು ಕೂಡಾ ತೆರವು ಕಾರ್ಯಾಚರಣೆ ಮುಂದುವರೆದಿದೆ. ಜೊತೆಗೆ ನಿನ್ನೆ ತೆರವು ಮಾಡಲಾದ ಸ್ಥಳದಲ್ಲಿ ಸಸಿ ನಾಟಿ ಹಾಗೂ ಫೆನ್ಸಿಂಗ್ ಮಾಡಲಿದೆ ಅರಣ್ಯ ಇಲಾಖೆ. 18 ವರ್ಷಗಳಲ್ಲಿ ಜಿಲ್ಲೆಯಲ್ಲಿ ಇದು ಅತಿದೊಡ್ಡ ಕಾರ್ಯಾಚರಣೆಯಾಗಿದೆ.

ಕೋಲಾರ: ಅರಣ್ಯ ಇಲಾಖೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ (forest land encroachment) ಮುಂದುವರೆದಿದೆ. ನಿನ್ನೆ ಬುಧವಾರ ಒಂದೇ ದಿನ 200 ಎಕರೆ ಒತ್ತುವರಿ ತೆರವು ಮಾಡಿ ದಾಖಲೆ‌ ಮಾಡಿದ್ದ ಅರಣ್ಯ ಇಲಾಖೆಯು ಕೋಲಾರ (Kolar) ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಹೊಗಳಗೆರೆ, ಯಲ್ದೂರು ಗ್ರಾಮಗಳ ಬಳಿ ತೆರವು ಕಾರ್ಯಾಚರಣೆ ಮುಂದುವರಿಸಿದೆ. ಕಾರ್ಯಾಚರಣೆಯ ದೃಶ್ಯಗಳನ್ನು ದೋಣ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಇಂದು ಕೂಡಾ ತೆರವು ಕಾರ್ಯಾಚರಣೆ ಮುಂದುವರೆದಿದೆ. ಜೊತೆಗೆ ನಿನ್ನೆ ತೆರವು ಮಾಡಲಾದ ಸ್ಥಳದಲ್ಲಿ ಸಸಿ ನಾಟಿ ಹಾಗೂ ಫೆನ್ಸಿಂಗ್ ಮಾಡಲಿದೆ ಅರಣ್ಯ ಇಲಾಖೆ. 18 ವರ್ಷಗಳಲ್ಲಿ ಜಿಲ್ಲೆಯಲ್ಲಿ ಇದು ಅತಿದೊಡ್ಡ ಕಾರ್ಯಾಚರಣೆಯಾಗಿದೆ. ಡಿಎಫ್ಓ ಏಡುಕೊಂಡಲ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಸುಮಾರು 200 ಜನ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಬಂದೋಬಸ್ತ್ ಕಲ್ಪಿಸಲಾಗಿದೆ. ಸುಮಾರು 25 ಕ್ಕೂ ಹೆಚ್ಚು ಜೆಸಿಬಿಗಳಿಂದ (JCB) ತೆರವು ಕಾರ್ಯಾಚರಣೆ ಮುಂದುವರಿದಿದೆ.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on